ಲಿಫ್ಟ್ ಕುಸಿದು ೭ ಮಂದಿ ಸಾವು

ಮುಂಬೈ.ಸೆ.೧೧-ಮಹಾರಾಷ್ಟ್ರದ ಥಾಣೆಯಲ್ಲಿ ಗಗನಚುಂಬಿ ಕಟ್ಟಡದ ೧೦ನೇ ಮಹಡಿಯ ನಿರ್ಮಾಣ ಲಿಫ್ಟ್ ಕುಸಿದು ಏಳು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬಾಲ್ಕಂ ಪ್ರದೇಶದಲ್ಲಿ ನಡೆದಿದೆ.ಹೊಸದಾಗಿ ನಿರ್ಮಿಸಲಾದ ಈ ಕಟ್ಟಡದ ಮೇಲ್ಚಾವಣಿಯ ಮೇಲೆ ಜಲನಿರೋಧಕ ಕೆಲಸ ಮುಗಿಸಿ ಕಾರ್ಮಿಕರು ಕೆಳಗೆ ಬರುತ್ತಿದ್ದಾಗ ಅವಘಡ ಸಂಭವಿಸಿದೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡುವ ವೇಳೆಗೆ ೭ ಮಂದಿ ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಥಾಣೆ ಮುನ್ಸಿಪಲ್ ಕಾರ್ಪೊರೇಷನ್‌ನ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ಪ್ರತಿಕ್ರಿಯೆ ನೀಡಿ ನಿರ್ಮಾಣ ಹಂತದ ಲಿಫ್ಟ್ ಕುಸಿದು ದುರಂತ ಸಂಭವಿಸಿದೆ, ೪೦ ನೇ ಮಹಡಿಯಿಂದ ಕೆಳಕ್ಕೆ ಇಳಿಯುವಾಗ ಈ ಘಟನೆ ನಡೆದಿದೆ ಎಂದು ಖಚಿತ ಪಡಿಸಿದ್ದಾರೆ.
ಮಾಹಿತಿ ಪಡೆದ ನಂತರ ಉದೇಶಿಕ ವಿಪತ್ತು ನಿರ್ವಹಣಾ ಕೋಶ ಮತ್ತು ಆಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ನೆಲಮಾಳಿಗೆಯ ಪಾರ್ಕಿಂಗ್‌ನಿಂದ ಕಾರ್ಮಿಕರನ್ನು ಹೊರತೆಗೆದರು. “ಲಿಪ್ಟ್ ಕೇಬಲ್ ಹೇಗೆ ಅಸಮರ್ಪಕವಾಗಿದೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ ಎಂದು ತಿಳಿಸಿದ್ದಾರೆ.
ಮೃತ ಕಾರ್ಮಿಕರನ್ನು ಮಹೇಂದ್ರ ಚೌಪಾಲ್ (೩೨), ರೂಪೇಶ್ ಕುಮಾರ್ ದಾಸ್ (೨೧), ವರುಣ್ ರೇಟ್ (೪೭), ಮಿರೇಶ್ , ಕರಿದಾಸ್ (೩೮) ಮತ್ತು ಸುನೀಲ್ ಕುಮಾರ್ ದಾಸ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮೃತರ ಗುರುತು ಎಂದು ಅವರು ಹೇಳಿದ್ದಾರೆ.