ಲಿಪಿಗಳ ಬಗ್ಗೆ ಅಧ್ಯಯನ ನಡೆಯಬೇಕು: ಡಾ.ಎಂ ಕೊಟ್ರೇಶ್

(ಸಂಜೆವಾಣಿ ವಾರ್ತೆ)ಬಳ್ಳಾರಿ, ಡಿ.20:  ಲಿಪಿಗಳಲ್ಲಿ ಬ್ರಾಹ್ಮೀ ಲಿಪಿ ಅತ್ಯಂತ ಮಹತ್ವದ್ದು ಎಂದು ತುಮಕೂರು ವಿಶ್ವವಿದ್ಯಾಲಯದ ಪಾಧ್ಯಾಪಕ ಡಾ. ಎಂ ಕೊಟ್ರೇಶ್ ಹೇಳಿದ್ದಾರೆ.ಅವರು ಇಂದು ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಹಮ್ಮಿಕೊಂಡಿದ್ದ  ಇತಿಹಾಸ ಸಂಶೋಧನಾ ಕಾರ್ಯಗಾರ ಮತ್ತು ನಾಮಫಲಕ ಅನಾವರಣ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡುತ್ತಿದ್ದರು.ಶಾಸನಗಳಲ್ಲಿ ಎಷ್ಟು ವಿಧಗಳಿವೆ ಅವುಗಳನ್ನು ಓದುವುದು ಹೇಗೆ ಎಂದು ಹೇಳುತ್ತ  ಚಿತ್ರದ ಮೂಲಕ ತೋರಿಸಿದರು.ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಟಿ. ಹೆಚ್‌ ಎಂ. ಬಸವರಾಜ್ ಅವರು  ಲಾವಣಿ ಓದುತ್ತಾ, ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮ್ಯೂಸಿಯಂ ಸ್ಥಾಪಿಸಬೇಕೆಂದು ವಿನಂತಿಸಿದರು.  ಇತಿಹಾಸ ಓದದವನು ಇತಿಹಾಸವನ್ನು ಸೃಷ್ಟಿಸಲಾರ.  ಕಾರಣ ಸಂಶೋಧನಾ ವಿದ್ಯಾರ್ಥಿಗಳು ಇತಿಹಾಸದ ಬಗ್ಗೆ ಹೆಚ್ಚು ಆಸಕ್ತಿವಹಿಸಿ  ಪ್ರವಾಸದ ಮೂಕ ಅಧ್ಯಯನ ಮಾಡಬೇಕೆಂದರು.ಇತಿಹಾಸ ಸಂಶೋಧಕ ವೈ ಹನುಮಂತರೆಡ್ಡಿ  ಮಾತನಾಡಿ, ಕುರುಗೋಡಿನ ಇತಿಹಾಸವನ್ನು ಗ್ರಂಥಗಳ ಮೂಲಕ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ‌  ಅನಂತ ಎಲ್ ಜಂಡೆಕರ್,  ಮುಂದಿನ ದಿನಗಳಲ್ಲಿ ನಮ್ಮ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಸ್ತು ಸಂಗ್ರಹಾಲಯವನ್ನು ಆರಂಭಿಸುವ ಪ್ರಯತ್ನ ಮಾಡುತ್ತೇವೆ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಸಂಪನ್ಮೂಲಗಳನ್ನು ಕ್ರೂಢೀಕರಿಸಿ ಇತಿಹಾಸದ ಅಧ್ಯಯನ ನಡೆಸಲಿದೆಂದು ಹೇಳಿದರು.ಈ ಸಂದರ್ಭದಲ್ಲಿ ಅಕಾಡೆಮಿಯ ಪರವಾಗಿ ಕುಲಪತಿಗಳಿಗೆ ವಿಲಿಯಂ ಶೇಕ್ಸ್ಪಿಯರ್ ಪ್ರಶಸ್ತಿ ಬಂದಿರುವುದರಿಂದ  ಟಿ.ಹೆಚ್ ಎಂ ಬಸವರಾಜ್ ಸನ್ಮಾನಿಸಿ ಗೌರವಿಸಿದರು.ಇತಿಹಾಸ ಪ್ರಾಧ್ಯಾಪಕ ಡಾ. ಹೆಚ್. ತಿಪ್ಪೇಸ್ವಾಮಿ ಸಂಯೋಜಕ ಸಂತೋಷ್ ಕುಮಾರ್, ಪ್ರಸಾರಂಗದ ನಿರ್ದೇಶಕ ಕನಕೇಶಮೂರ್ತಿ,  ನಂದಿಹಳ್ಳಿ ಪಿಜಿ ಕೇಂದ್ರದ ನಿರ್ದೇಶಕ ರವಿಯವರು ಉಪಸ್ಥಿತರಿದ್ದರು. ಬೇಗಂ ಕಾರ್ಯಕ್ರಮ ನಿರೂಪಿಸಿದರು  ಸಂತೋಷ್ ಕುಮಾರ್ ವಂದಿಸಿದರು ಇತಿಹಾಸ ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಗಾರ ನಡೆಯಿತು ಇದೇ ಸಂದರ್ಭದಲ್ಲಿ ಸಂಶೋಧನಾ ಕೇಂದ್ರದ ನಾಮಫಲಕ ಅನಾವರಣ ಮಾಡಲಾಯಿತು