ಲಿಥಿಯಂ ಪ್ರವರ್ತಕ ಜಾನ್ ನಿಧನ

ನ್ಯೂಯಾರ್ಕ್,ಜೂ.೨೭-ಲಿಥಿಯಂ-ಐಯಾನ್ ಬ್ಯಾಟರಿ ಪ್ರವರ್ತಕ ಜಾನ್ ಬಿ ಗುಡ್ನೊಫ್ ನಿಧನರಾಗಿದ್ದಾರೆ.
ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ತಮ್ಮ ೧೦೦ ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಟೆಕ್ಸಾಸ್ ವಿಶ್ವವಿದ್ಯಾನಿಯದ ಮೂಲಗಳು ಅವರ ಸಾವನ್ನು ಖಚಿತಪಡಿಸಿವೆ.
ಲಿಥಿಯಂ-ಐಯಾನ್ ಬ್ಯಾಟರಿಯ ರಚನೆಗಾಗಿ ಜಾನ್ ಬಿ ಗುಡ್ನೊಫ್ ಅವರಿಗೆ ರಸಾಯನಶಾಸ್ತ್ರದಲ್ಲಿ ಹಂಚಿಕೆಯ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು.
೨೦೧೯ನೇ ಸಾಲಿನ ರಾಸಾಯನಿಕ ಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಈ ಪೈಕಿ ಜಾನ್ ಜಾನ್ ಬಿ ಗುಡ್ನೊಫ್ ಕೂಡ ಅತ್ಯುನ್ನತ್ತ ಪ್ರಶಸ್ತಿಗೆ ಭಾಜನರಾಗಿದ್ದರು. ಲಿಥಿಯಂ-ಐಯಾನ್ ಬ್ಯಾಟರಿಗಳ ಅಭಿವೃದ್ಧಿಗಾಗಿ
ಅವರು ನಡೆಸಿರುವ ಸಂಶೋಧನೆಗೆ ಆ ಸಾಲಿನ ಪ್ರತಿಷ್ಠಿತ ಗೌರವ ಸಿಕ್ಕಿತ್ತು. ಸ್ಮಾರ್ಟ್‌ಫೋನ್‌ಗಳಲ್ಲಿ ಅವಿಭಾಜ್ಯ ಅಂಗವಾಗಿರುವ ಬ್ಯಾಟರಿ ತಂತ್ರಜ್ಞಾನದ ಬಗ್ಗೆ ಅವರು ಮಾಡಿರುವ ಸಂಶೋಧನೆಗೆ ಎಲ್ಲೆಡೆಯಿಂದ ಅಪಾರ ಪ್ರಶಂಸೆಗೆ ಪಾತ್ರವಾಗಿತ್ತು.

ಇಲ್ಲಿ ಉಲ್ಲೇಖಿಸಲೇಬೇಕಾದ ಮಹತ್ವದ ಸಂಗತಿ ಎಂದರೆ ತಮ್ಮ ೯೭ನೇ ವಯಸ್ಸಿನಲ್ಲಿ ಜಾನ್ ಬಿ ಗುಡ್ಡೆಫ್ ಅವರು ನೊಬೆಲ್ ಪ್ರಶಸ್ತಿ ಪಡೆದರು.ಹೀಗಾಗಿ ಅವರು ನೋಬೆಲ್ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ವಿಜ್ಞಾನಿಯಾಗಿದ್ದರು..
ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳಲ್ಲಿ ಬ್ಯಾಟರಿಗಳನ್ನು ಬಳಸಲಾಗುತ್ತದೆ.
ನಮ್ಮ ಆವಿಷ್ಕಾರವು ಇಂದಿನ ಬ್ಯಾಟರಿಗಳಲ್ಲಿ ಅಂತರ್ಗತವಾಗಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ನಾವು ನಂಬುತ್ತೇವೆ ಎಂದು ಜಾನ್ ಗುಡ್ಕೋಫ್ ಅವರು ಹೇಳಿದ್ದರು.