ಲಿಡಕರ್ ಚರ್ಮಕಾರ ನಿರ್ಮಿಸಿ ಭದ್ರತೆ ನೀಡಲು ಆಗ್ರಹ

ಧಾರವಾಡ,ಜ2: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಚರ್ಮಕಾರರಿಗೆ ಲೀಡ್ಕರ್ ಚರ್ಮಕಾರ ಕುಟೀರ ನಿರ್ಮಿಸಿ ಸಾಮಾಜಿಕ ಭದ್ರತೆ ಒದಗಿಸಲು ಆಗ್ರಹಿಸಿ ಕರ್ನಾಟಕ ಸಮತಾ ಸೈನಿಕ ದಳ ಹಾಗೂ ಡಾ. ಅಂಬೇಡ್ಕರ್ ಲಿಡ್ಕರ್ ಹಿತಾಭಿವೃದ್ಧಿ ಸಂಘದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಕಲಾಭವನದಿಂದ ಮೆರವಣಿಗೆ ಕೈಗೊಂಡ ಪ್ರತಿಭಟನಾಕಾರರು, ಜ್ಯುಬ್ಲಿ ವೃತ್ತ, ಕೋರ್ಟ್ ಸರ್ಕಲ್ ಮಾರ್ಗವಾಗಿ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕೆಲಕಾಲ ಪ್ರತಿಭಟಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ವಾಪ್ತಿಯ 330 ಚರ್ಮಕಾರರಿಗೆ 2,700 ಚಿಕ್ಕ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ನಿರಂತರ ಹೋರಾಟ ಮಾಡಿದರೂ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಈ ಹಿಂದೆ ಪೆÇಲೀಸ್ ಇಲಾಖೆ 2005ರಲ್ಲಿ ಫುಟ್-ಪಾತ್ ಕಾರ್ಯಾಚರಣೆ ನಡೆಸಿದ ವೇಳೆ ಬೀದಿ ಬದಿಯ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿ, ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ನ್ಯಾಯಾಲಯದಲ್ಲಿ ನ್ಯಾಯ ಹೂಡಿದ್ದು, ಸೂಕ್ತ ವ್ಯವಸ್ಥಗೆ ಸ್ಪಷ್ಟ ಮಾರ್ಗದರ್ಶಿ ಹಾಗೂ ಷರತ್ತುಗಳೊಂದಿಗೆ ನಿರ್ದೇಶನ ನೀಡಿದ್ದು ಪಾಲಿಸಿಲ್ಲ ಎಂದು ಆಪಾದಿಸಿದರು.
ಕೋವಿಡ್ ಹಿನ್ನಲೆ ಚರ್ಮಕಾರಿ ಕೆಲಸ ಮಾಡವ ಬಹುತೇಕರು ಯಾವುದೇ ಸಂಪಾದನೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಮಯದಲ್ಲಿ ಕಾರ್ಯಾಚರಣೆ ಕೈಗೊಂಡ ಪಾಲಿಕೆ ಈ ಜನತೆ ಒಕ್ಕಲೆಬ್ಬಿಸುವ ಹುನ್ನಾರ್ ನಡೆಸಿದೆ. ತಕ್ಷಣೇ ಚರ್ಮಕಾರಿ ಉದ್ಯೋಗತಾದರಿಗೆ, ಸಣ್ಣ ವ್ಯಾಪಾರಸ್ಥರಿಗೆ ಕುಟೀರ ನಿರ್ಮಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಡಾ. ವೆಂಕನಗೌಡ ಪಾಟೀಲ ಲಕ್ಷ್ಮಣ ಬಕ್ಕಾಯಿ, ಅಶೋಕ ಭಂಡಾರಿ, ಸಿದ್ದಪ್ಪ ಕಲಘಟಗಿ, ಪರಶುರಾಮ ಒಕ್ಕುಂದ, ಪರಶುರಾಮ ಬೆಳಗಾಂವ, ಪುಂಡಲಿಕ ಸವದತ್ತಿ, ಪರಶುರಾಮ ಬೆಣಗಿ, ರಮೇಶ ದೊಡವಾಡ ಮತ್ತಿತರರು ಉಪಸ್ಥಿತರಿದ್ದರು.