ಲಿಖಿತ ಭರವಸೆಯನ್ನು ಮುರಿದ ಕೇಂದ್ರ ಸರ್ಕಾರದ ವಿರುದ್ದ ರೈತರ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,31- ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಒದಗಿಸಲು ಕಾನೂನು ಜಾರಿಮಾಡಿ ಎಂದು ಇಂದು ನಗರದ ಎಪಿಎಂಸಿಯ ಶ್ರಮಿಕರ ಭವನದ ಆವರಣದ ಬಳಿ ಸಂಯುಕ್ತ ಹೋರಾಟ – ಕರ್ನಾಟಕದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ 2021 ರ ಡಿಸೆಂಬರ್ 9 ರಂದು ಬೆಂಬಲ ಬೆಲೆಗಾಗಿ ಕಾನೂನು ರಚಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಹಿಡೇರಿಸುವುದಾಗಿ ತಾನು ಕೊಟ್ಟಿದ್ದ ಲಿಖಿತ ಭರವಸೆ ಈವರೆಗೆ ಈಡೇರಿಸಿಲ್ಲ. ಕೃಷಿ ಉತ್ಪನ್ನಗಳಿಗೆ `ಕನಿಷ್ಠ ಬೆಂಬಲ ಬೆಲೆ ಕಾನೂನು? ಜಾರಿಗಾಗಿ, ವಿದ್ಯುತ್ ಕಾಯ್ದೆ 2022, ಅಡುಗೆ ಅನಿಲ, ಡಿಸೇಲ್, ಪೆಟ್ರೋಲ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಇತ್ಯಾದಿ ಬೇಡಿಕೆಗಳನ್ನು ಪರಿಗಣಿಸಬೇಕೆಂದು
ರೈತರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಸ್ಸು ಪಡೆಯಿರಿ. ಲಖೀಂಪುರ್ ಖೇರಿ ರೈತರ ಹತ್ಯಾಕಾಂಡದ ಪ್ರಮುಖ ಪಿತೂರಿ ಆರೋಪಿ ಅಜಯ್ ಮಿಶ್ರಾ ರನ್ನು ಕೇಂದ್ರ ಸಂಪುಟದಿಂದ ವಜಾಗೊಳಿಸಿ, ಅಪರಾಧಿಗಳನ್ನು ಶಿಕ್ಷಿಸಿದೆಹಲಿ ಹೋರಾಟದಲ್ಲಿ ಮೃತಪಟ್ಟಿರುವ ರೈತರ ಕುಟುಂಬಗಳಿಗೆ ಪರಿಹಾರವನ್ನು ನೀಡಿರಿ. ಜನವಿರೋಧಿ, ರೈತ ವಿರೋಧಿ ವಿದ್ಯುತ್ ಕಾಯ್ದೆ 2022 ನ್ನು ಹಿಂಪಡೆಯಿರಿ. ಪೆಟ್ರೋಲ್, ಡಿಸೆಲ್, ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಿ. ಅವಶ್ಯಕ ಆಹಾರ ಖಾದ್ಯಗಳ ಮೇಲಿನ 5% ಜಿಎಸ್‍ಟಿ ಯನ್ನು ಕೈಬಿಡಿ.ಕರ್ನಾಟಕ ರಾಜ್ಯದ ರೈತರ ಬದುಕಿಗೆ ಕಂಟಕವಾಗಿರುವ ರಾಜ್ಯ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಲಾಯಿತು.
ಈ ಸಂದರ್ಭದಲ್ಲಿ ಕೆ.ಪಿ.ಆರ್ ಎಸ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶಿವಶಂಕರ್, ಎಐಕೆಕೆಎಂಎಸ್‍ನ ಜಿಲ್ಲಾ ಅಧ್ಯಕ್ಷ ಗೋವಿಂದ್, ಕಾರ್ಯದರ್ಶಿ ಗುರಳ್ಳಿ ರಾಜ  ಕರ್ನಾಟಕ ರಾಜ್ಯ ರೈತ ಸಂಘದ ಗೌವರಅಧ್ಯಕ್ಷ ಸಂಘನಕಲ್ಲು ಕೃಷ್ಣಪ್ಪ, ತಾಲೂಕು ಅಧ್ಯಕ್ಷ ಬೇವಿನಗಿಡದ ಎರ್ರಿಸ್ವಾಮಿ, ಮೆಣಸಿನ ಈಶ್ವರಪ್ಪ, ಮಾರೇಣ್ಣ ಆಂದ್ರಳ್, ಎ. ಐ. ಕೆ.ಕೆ.ಎಂ.ಎಸ್ ಜಿಲ್ಲಾ ಉಪಾಧ್ಯಕ್ಷ ಈರಣ್ಣ, ಸದಸ್ಯರಾದ ಬಸವರಾಜ್ ಮೊದಲಾದವರು ಇದ್ದರು. 

Attachments area