ಲಿಂ.ಶ್ರೀವಿರೂಪಾಕ್ಷ ಮಹಾಸ್ವಾಮಿಗಳ ಪುಣ್ಯಸ್ಮರಣೆ ಅಂಗವಾಗಿ ರಕ್ತದಾನ ಶಿಬಿರ

ಮಾನ್ವಿ,ಮಾ.೧೭- ತಾಲೂಕಿನ ಚೀಕಲಪರ್ವಿ ಗ್ರಾಮದ ಸುಕ್ಷೇತ್ರ ಶ್ರೀರುದ್ರಮುನೀಶ್ವರ ಮಠದ ಲಿಂ.ಶ್ರೀವಿರೂಪಾಕ್ಷ ಮಹಾಸ್ವಾಮಿಗಳ ೯ನೇ ಪುಣ್ಯ ಸ್ಮರಣೆ ಹಾಗೂ ಸಾರ್ಥಕ ದಿನ ಎಂಬ ನಾಮದೊಂದಿಗೆ ಪಟ್ಟಣದ ಕಳಿಂಗ ಪಿಯು ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಶ್ರೀಮಠದ ಶ್ರೀಸದಾಶಿವ ಮಹಾಸ್ವಾಮಿಗಳು ಅವರು ರಕ್ತದಾನ ಶ್ರೇಷ್ಠದಾನವಾಗಿದ್ದು ರಕ್ತದಾನ ಮಾಡುವುದರಿಂದ ಅನೇಕ ರೋಗಿಗಳಿಗೆ ಮತ್ತು ಅಪಘಾತದ ವೇಳೆ ರಕ್ತದ ಅವಶ್ಯಕತೆ ಇರುವವರಿಗೆ ವರದಾನವಾಗಿ ಪರಿಣಮಿಸಲಿದೆ ಎಂದರು.
ಪ್ರತಿಯೂಬ್ಬರು ಪ್ರತಿ ೬ ತಿಂಗಳಗೊಮ್ಮೆಯಾದರು ರಕ್ತದಾನ ನೀಡುವುದರಿಂದ ದೇಹವು ನವೋಲ್ಲಾಸ ಮತ್ತು ಹೃದಯಾಘಾತ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ದೂರವಿರಬಹುದು. ಚೀಕಲಪರ್ವಿ ಶ್ರೀರುದ್ರಮುನೀಶ್ವರ ಮಠದ ಲಿಂ.ಶ್ರೀವಿರೂಪಾಕ್ಷ ಮಹಾಸ್ವಾಮಿಗಳ ೯ನೇ ಪುಣ್ಯ ಸ್ಮರಣೆ ಅಂಗವಾಗಿ ಸಾರ್ಥಕ ದಿನ ಎಂಬ ನಾಮದೊಂದಿಗೆ ಕಳಿಂಗ ಪಿಯು ಕಾಲೇಜಿನಲ್ಲಿ ಏರ್ಪಡಿಸಿರುವ ರಕ್ತದಾನ ಶಿಬಿರದಲ್ಲಿ ಅನೇಕರು ಭಾಗವಹಿಸಿ ರಕ್ತದಾನ ಶಿಬಿರ ಯಶಸ್ವಿಗೊಳಿಸಿರುವುದು ತುಂಬಾ ಸಂತಸ ತಂದಿದೆ ಎಂದರು.
ಮಾ.೧೭ ರಂದು ಶುಕ್ರವಾರದಂದು ಚೀಕಲಪರ್ವಿ ಶ್ರೀರುದ್ರಮುನೀಶ್ವರ ಮಠದ ಲಿಂ.ಶ್ರೀವಿರೂಪಾಕ್ಷ ಮಹಾಸ್ವಾಮಿಗಳ ೯ನೇ ಪುಣ್ಯ ಸ್ಮರಣೆ ನಡೆಯಲಿದೆ. ಪುಣ್ಯಸ್ಮರಣೋತ್ಸವದಂದು ಬೆಳಿಗ್ಗೆ ಉಭಯ ಗದ್ದುಗೆಗಳಿಗೆ ರುದ್ರಾಭಿಷೇಕ, ಗಣಾರಾಧನೆ ನೇರವೇರಲಿದ್ದು ಈ ಎಲ್ಲಾ ಭಕ್ತಿಪೂರ್ವಕ ಕಾರ್ಯಕ್ರಮಗಳಲ್ಲಿ ಸಕಲ ಸದ್ಬಕ್ತಾದಿಗಳು ಭಾಗವಹಿಸಿ ಶ್ರೀಗಳ ಕೃಪೆಗೆ ಪಾತ್ರರಾಗುವಂತೆ ಶ್ರೀಸದಾಶಿವ ಮಹಾಸ್ವಾಮಿಗಳು ಹೇಳಿದರು.
ಈ ಸಂದರ್ಭದಲ್ಲಿ ಮಾಜಿಶಾಸಕ ಗಂಗಾಧರನಾಯಕ, ಕಳಿಂಗ ಪಿಯು ಕಾಲೇಜಿನ ಅಧ್ಯಕ್ಷ ಚಂದ್ರಶೇಖರ ಬಲ್ಲಟಗಿ, ಬಸವಶ್ರೀ ಬ್ಯಾಂಕಿನ ಅಧ್ಯಕ್ಷ ಡಾ.ಶಂಕರಗೌಡ ಎಸ್.ಪಾಟೀಲ್, ತಾಲೂಕ ವೈಧ್ಯಾಧಿಕಾರಿ ಡಾ.ಚಂದ್ರಶೇಖರಯ್ಯಸ್ವಾಮಿ, ಮುಖಂಡರಾದ ದೊಡ್ಡಬಸ್ಸಪ್ಪಗೌಡ ಭೋಗಾವತಿ, ಬಿಜೆಪಿ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಡಾ.ಚಂದ್ರಶೇಖರ ಸುವರ್ಣಗಿರಿಮಠ, ಅರುಣ್ ಚಂದಾ, ಶ್ರೀಕಾಂತಪಾಟೀಲ್ ಗೂಳಿ, ವಿರೇಶ ಎನ್.ಹೊಸೂರು, ಚಂದ್ರಮೌಳೇಶ್ವರ ಬೆಟ್ಟದೂರು, ಚಂದ್ರಪ್ಪಗೌಡ ಚೀಕಲಪರ್ವಿ, ಕಳಿಂಗ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಜಿ.ವಿ.ಎನ್.ರೆಡ್ಡಿ, ಶರಣಬಸವ ನೀರಮಾನ್ವಿ ಸೇರಿದಂತೆ ಇನ್ನಿತರರಿದ್ದರು.