ಲಿಂ. ಶಿವಕುಮಾರ ಶ್ರೀಗಳ ಪುಣ್ಯಾರಾಧನೆ


ಲಕ್ಷ್ಮೇಶ್ವರ,ಜ.22: ತ್ರಿವಿಧ ದಾಸೋಹಿ, ನಡೆದಾಡುವ ದೇವರು ಪದ್ಮಭೂಷಣ ಪುರಸ್ಕೃತ, ಕರ್ನಾಟಕ ರತ್ನ, ಸಿದ್ದಗಂಗಾಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶ್ರೀಗಳವರ ನಾಲ್ಕನೆಯ ಪುಣ್ಯರಾಧನೆಯನ್ನು ಶಿಗ್ಲಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಮತ್ತು ಧಾರ್ಮಿಕ ಚಿಂತಕ ವೀರಣ್ಣ ಪವಾಡದ ಅವರ ನಿವಾಸದಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಯಿತು.
ಶ್ರೀಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದ ವೀರಣ್ಣ ಪವಾಡದವರು ಈ ನಾಡು ಕಂಡ ನಡೆದಾಡುವ ದೇವರು ಹಾಗೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ಧ್ಯಾನ, ವಸತಿ ನೀಡುವ ಮೂಲಕ ತ್ರಿವಿಧ ದಾಸೋಹಿಗಳಾಗಿ ಕೋಟಿ ಕೋಟಿ ಜನರಿಗೆ ವಿದ್ಯಾಧನ ಮಾಡಿದ್ದಾರೆ, ತಮ್ಮ ಜೀವಿತಕಾಲದ ಕೊನೆಯವರೆಗೂ ನಾಡಿನ ಎಲ್ಲ ಬಡವರ ಹಾಗೂ ಸಮಾಜಗಳ ಉದ್ಧಾರಕ್ಕಾಗಿ ಶ್ರಮಿಸಿದ ಪುಣ್ಯ ಪುರುಷರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೂಡ್ಲುಮಠ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಮಲ್ಲೇಶಪ್ಪ ಪಿ ಬಳಿಗಾರ ಪದವಿಪೂರ್ವ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲ ವಿದ್ಯಾರ್ಥಿಗಳಿಗೆ ಪ್ರಸಾದ ಹಾಗೂ ನೋಟುಬುಕ್ಕು ಮತ್ತು ಪೆನ್ನುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಿರ್ಮಲಾದೇವಿ ಪವಾಡದ, ಹಾಗೂ ಮಾಲತೇಶ ಕಳ್ಳಳಿ, ನೀಲಕಂಠ ಹಲ್ಗೋಡದ, ಬಸವರಾಜ ಡಂಬ್ರಹಳ್ಳಿ, ವಿಜಯ್ ವೀಣಾ ಪವಾಡದ, ಶಿವಯೋಗರಾಜ್ ಪವಾಡದ ,ಲಾವಣ್ಯ ಪವಾಡದ ಸೇರಿದಂತೆ ಅನೇಕರಿದ್ದರು