ಲಿಂ. ಶಾಂತವೀರ ಶಿವಾಚಾರ್ಯರ 41ನೇ ಪುಣ್ಯಸ್ಮರಣೆ: ಗುಡ್ಡಾಪೂರ್ ದಾನಮ್ಮದೇವಿ ಪುರಾಣ ಆರಂಭ

ಕಲಬುರಗಿ, ಜ.16: ನಗರದ ಬ್ರಹ್ಮಪೂರದ ಚೌದಾಪುರಿ ಹಿರೇಮಠದಲ್ಲಿ ಶತಾಯುಷಿ ಲಿಂಗೈಕ್ಯ ಶಾಂತವೀರ ಶಿವಾಚಾರ್ಯರ 41ನೇ ಪುಣ್ಮಸ್ಮರಣೆ ಅಂಗವಾಗಿ ಜನವರಿ 18ರಿಂದ 31ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶರಣಬಸಪ್ಪ ಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 18ರಂದು ಸಂಜೆ 7 ಗಂಟೆಗೆ ವರದಾನಿ ಶ್ರೀ ಗುಡ್ಡಾಪೂರ್ ದಾನಮ್ಮದೇವಿ ಪುರಾಣವನ್ನು ಸಂಸದ ಡಾ. ಉಮೇಶ್ ಜಾಧವ್ ಅವರು ಉದ್ಘಾಟಿಸುವರು. ದಿವ್ಯ ಸಾನಿಧ್ಯವನ್ನು ಸುಲಫಲಮಠದ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ನೇತೃತ್ವವನ್ನು ಗುರುಬಸವ ಬ್ರಹನ್ಮಠದ ಗುರುಬಸವ ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಊಡಗಿ ಅವರು ವಹಿಸುವರು. ಯಡ್ರಾಮಿಯ ವಿರಕ್ತಮಠದ ಸಿದ್ದಲಿಂಗ್ ಮಹಾಸ್ವಾಮೀಜಿ ಪ್ರವಚನ ವಾಚಿಸುವರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷ ಡಾ. ಶರಣಕುಮಾರ್ ಮೋದಿ ಅವರು ಆಗಮಿಸುವರು ಎಂದರು.
ಜನವರಿ 29ರವರೆಗೆ ಪ್ರತಿ ದಿನ ಸಂಜೆ 7 ಗಂಟೆಗೆ ಪ್ರವಚನ ಜರುಗಲಿದೆ. ಜನವರಿ 27ರಂದು ಬೆಳಿಗ್ಗೆ 10-30 ಗಂಟೆಗೆ ಚೌದಾಪುರಿ ಹಿರೇಮಠ್ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಜರುಗಲಿದೆ. ದಿವ್ಯ ನೇತೃತ್ವವನ್ನು ರಾಜಶೇಖರ್ ಶಿವಾಚಾರ್ಯರು, ಅಧ್ಯಕ್ಷತೆಯನ್ನು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶಂಕ್ರಮ್ಮ ಢವಳಗಿ ಅವರು ವಹಿಸುವರು. ಉದ್ಘಾಟನೆಯನ್ನು ಉದಯಕುಮಾರ್ ಹಣಮಂತ್ ಮೆಕಾಲೆ ಅವರು ನೆರವೇರಿಸುವರು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯ ಅಧಿಕಾರಿ ಡಾ. ಪ್ರಕಾಶ್ ರಾಠೋಡ್, ಸಮೂಹ ಸಂಪನ್ಮೂಲ ವ್ಯಕ್ತಿ ಸಂಗನಬಸವ ಮುತ್ತಾ, ವೀರೇಶ್ ಬೀಳಗಿ, ಮುಖ್ಯ ಗುರುಗಳಾದ ಸುಧಾಕರ್ ಧನ್ನೂರ್ ಅವರು ಆಗಮಿಸುವರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ತಿಳಿಸಿದರು.
ಜನವರಿ 30ರಂದು ಸೋಮವಾರ ಸಂಜೆ 7 ಗಂಟೆಗೆ ಪುರಾಣ ಮಹಾಮಂಗಲ ಕಾರ್ಯಕ್ರಮ ಜರುಗಲಿದೆ. ದಿವ್ಯ ಸಾನಿಧ್ಯವನ್ನು ಡಾ. ಶರಣಬಸವಪ್ಪ ಅಪ್ಪಾ, ಮಾತೋಶ್ರೀ ಡಾ. ದಾಕ್ಷಾಯಣಿ ತಾಯಿ, ವೀರತಪಸ್ವಿ ವೀರಭದ್ರ ಶಿವಾಚಾರ್ಯರು, ಗುರುಪಾದಲಿಂಗ ಶಿವಯೋಗಿಗಳು, ಸಾನಿಧ್ಯವನ್ನು ಸೊನ್ನದ ಡಾ. ಶಿವಾನಂದ್ ಮಹಾಸ್ವಾಮೀಜಿ, ಜೇರಟಗಿಯ ಮಹಾಂತ ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ವಹಿಸುವರು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಲಾಪುರೆ, ಅತಿಥಿಗಳಾಗಿ ಶಾಸಕರಾದ ಎಂ.ವೈ. ಪಾಟೀಲ್, ಬಿ.ಜಿ. ಪಾಟೀಲ್, ಶಶೀಲ್ ಜಿ. ನಮೋಶಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೆಂಗಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಮಹಾಂತೇಶ್ ಎಂ. ಪಾಟೀಲ್ ಅವರು ಆಗಮಿಸುವರು ಎಂದು ಅವರು ತಿಳಿಸಿದರು.
ಜನವರಿ 31ರಂದು ಬೆಳಿಗ್ಗೆ 9 ಗಂಟೆಗೆ ಗದ್ದುಗೆಗೆ ಮಹಾರುದ್ರಾಭಿಷೇಕ, ನಾಮಾವಳಿ, ಮಹಾ ಮಂಗಳಾರುತಿ, ಬೆಳಿಗ್ಗೆ ಹತ್ತು ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗಲಿದೆ. ಜನವರಿ 29ರಂದು ಬೆಳಿಗ್ಗೆ 10 ಗಂಟೆಗೆ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಡಾ. ವಿರಾಜ್ ಕಲಬುರ್ಗಿ, ಡಾ. ಬಸವಪ್ರಭು ಅಮರಖೇಡ್, ಡಾ. ಸಿದ್ದಪ್ಪ ಮರಗೋಳ್, ಡಾ. ಈರಣ್ಣ ಹೀರಾಪೂರ್, ಡಾ. ಸಂಗೀತಾ ಪಾಟೀಲ್, ಡಾ. ಶಿಲ್ಪಾ ಕಲಬುರ್ಗಿ ಮುಂತಾದ ವೈದ್ಯರು ಶಿಬಿರದಲ್ಲಿ ಪಾಲ್ಗೊಳ್ಳುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಯಾಸಾಗರ್ ಫುಲಾರಿ, ರಮೇಶ್ ಹೊಸಪೇಟೆ, ಬಸವರಾಜ್ ಸಾಲಿಮಠ್, ಬಾಲಚಂದ್ರ ನೆಲ್ಲೂರ್, ರಾಮುರೆಡ್ಡಿ ಗುಮ್ಮಟ್ ಮುಂತಾದವರು ಉಪಸ್ಥಿತರಿದ್ದರು.