
ಇಲಕಲ್ಲ:ಸೆ.9:ಚಿತ್ತರಗಿ, ಇಳಕಲ್ಲ ಶ್ರೀಮಠಗಳ ಶಿವಯೋಗಿ, 16ನೇ ಪೀಠಾಧಿಪತಿ ಲಿಂಗೈಕ್ಯ ವಿಜಯ ಮಹಾಂತ ಶ್ರೀಗಳ ಜಾತ್ರಾ ಮಹೋತ್ಸವ ಸೆ. 11ರಂದು ನಡೆಯಲಿದೆ. ಜಾತ್ರೆಯ ಅಂಗವಾಗಿ ಅಡ್ಡಪಲ್ಲಕ್ಕಿ ಸೆ. 12ರಂದು ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ. ಮೂರು ದಿನಗಳ ಕಾಲ ನಡೆಯಲಿರುವ ಜಾತ್ರೆಯಲ್ಲಿ ಸೋಮವಾರ ಭಕ್ತರಿಗೆ ಹೋಳಿಗೆ ಊಟ, ಮಂಗಳವಾರ ಹಾಲುಗ್ಗಿ ಊಟ, ಬುಧವಾರ ಕರಿಗಡಬಿನ ಊಟ ಉಣಬಡಿಸಲು ತರುಣ ಸಂಘದ ಸಹಯೋಗದಲ್ಲಿ ತಯಾರಿ ಮಾಡಿಕೊಂಡಿದ್ದೇವೆ ಎಂದು ತರುಣ ಸಂಘದ ಅಧ್ಯಕ್ಷ ಶಂಕರ ತೋಟದ ವಿನಂತಿಸಿದ್ದಾರೆ.