ಲಿಂಬೆ ಬೆಳೆಯಲ್ಲಿ ಆಧುನಿಕ ಬೇಸಾಯ ತಾಂತ್ರಿಕತೆ

ಬೀದರ ಸೆ.20: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಬೀದರ ತೋಟಗಾರಿಕೆ ಮಹಾವಿದ್ಯಾಲಯ ಬೀದರ ಹಾಗೂ ತೋಟಗಾರಿಕೆ ಇಲಾಖೆ ಔರಾದ್ ಇವರುಗಳ ಸಂಯುಕ್ತಾಶ್ರಯದಲ್ಲಿ ಲಿಂಬೆ ಮಂಡಳಿ ಪ್ರಾಯೋಜಿತ ರೈತರ ತರಬೇತಿ ಕಾರ್ಯಕ್ರಮ ಲಿಂಬೆ ಬೆಳೆಯಲ್ಲಿ ಆಧುನಿಕ ಬೇಸಾಯ ತಾಂತ್ರಿಕತೆಗಳ ಕಾರ್ಯಕ್ರಮವು ಸೆ.18ರಂದು ಬಾಪೂರಾವ್ ಪಾಟೀಲ ತೋಟ, ಜೋಜನಾ ಗ್ರಾಮ, ತಾ:ಔರಾದನಲ್ಲಿ ನಡೆಯಿತು.

ಗ್ರಾಮ ಪಂಚಾಯತದ ಜೋಜನಾ ಅಧ್ಯಕ್ಷೆ ಶ್ರೀಮತಿ ಸಂಪತಾ ಗಂಡ ಸಂತೋಷ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಸಹಾಯಕ ತೋಟಗಾರಿಕೆ ನಿದೇಶಕರಾದ ಶ್ರೀ ಶಿವಾನಂದ ಕಸ್ತೂರಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಜಿಲ್ಲೆಯ ರೈತ ಸಮೂಹಕ್ಕೆ ತೋಟಗಾರಿಕೆ ಇಲಾಖೆಯಿಂದ ದೊರಕುವ ಯೋಜನೆಗಳಾದ ಹನಿ ನೀರಾವರಿ, ಕೃಷಿ ಹೊಂಡ ಹಾಗೂ ಪ್ರದೇಶ ಅಭಿವೃದ್ಧಿ ಈರುಳ್ಳಿ ಶೇಖರಣಾ ಘಟಕಗಳ ನಿರ್ಮಾಣ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ತಿಳಿಸಿದರು.

ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರದ ಡಾ. ಸುನಿಲಕುಮಾರ ಎನ್.ಎಂ. ಅವರು ಮಾತನಾಡಿ, ಲಿಂಬೆ ಬೆಳೆಯು ನಮ್ಮ ಪ್ರದೇಶದಲ್ಲಿ ಪ್ರಮುಖ ಹಣ್ಣಿನ ಬೆಳೆಯಾಗಿ ಬೆಳೆಯುತ್ತಿದ್ದು, ರೈತರಿಗೆ ಅಧಿಕ ಲಾಭ ತಂದುಕೊಡುತ್ತಿದೆ. ಅಂತೆಯೇ ವರ್ಷದ ಮೂರು ಋತುಮಾನದಲ್ಲಿ ಇಳುವರಿ ಬರುತ್ತಿದ್ದು, ಮಾರುಕಟ್ಟೆಯಲ್ಲಿ ಚಳಗಾಲ ಮತ್ತು ಮಳೆಗಾಲದಲ್ಲಿ ಹೆಚ್ಚಿನ ಬೇಡಿಕೆ ಇಲ್ಲದ ಕಾರಣ ಸಂಸ್ಕರಿಸಿ ಉತ್ಪನ್ನಗಳಾದ ಪಾನೀಯ, ಉಪ್ಪಿನಕಾಯಿ, ಇನ್ನಿತರ ಪದಾರ್ಥಗಳನ್ನು ಸಂಸ್ಕರಿಸಿದ ಪದಾರ್ಥಗಳನ್ನು ತಯಾರು ಮಾಡುವ ಮೂಲಕ ಆರ್ಥಿಕ ವೃದ್ಧಿ ಸಾಧಿಸಬಹುದೆಂದು ತಿಳಿಸಿದರು. ವಿಜ್ಞಾನಿಗಳು ರೈತರ ತಾಕುಗಳಿಗೆ ಭೇಟಿ ನೀಡಿ ರೈತರಿಗೆ ಸ್ಪಂದಿಸುತ್ತಿರುವುದ ಸ್ವಾಗತಾರ್ಹವಾಗಿದ್ದು, ವಿಜ್ಞಾನಿಗಳ ನಡೆ ರೈತರ ಕಡೆ ಸಾಗುತ್ತಿರುವುದು ಬಹಳ ಸಂತೋಷದ ವಿಷಯವಾಗಿದ್ದು, ಇಂತಹ ಕಾರ್ಯಕ್ರಮಗಳ ಸದುಪಯೋಗ ರೈತರು ಪಡೆದುಕೊಳ್ಳಬೇಕೆಂದರು.

ಪ್ರಗತಿಪರ ರೈತರು, ಜೋಜನಾ ಗ್ರಾಮದ ಶ್ರೀ. ಬಾಪುರಾವ ಪಾಟೀಲ್ ಅವರು ಮಾತನಾಡಿ, ಹಣ್ಣುಗಳು ಸರಿಯಾದ ಶೇಖರಣಾ ಸೌಲಭ್ಯಗಳು ಇಲ್ಲದ ಕಾರಣ ಹಾಳಾಗುತ್ತಿದ್ದು, ಅವುಗಳನ್ನು ಶೇಖರಣೆ ಮಾಡಲು ಸೂಕ್ತ ಶೀತಲ ಗೃಹಗಳನ್ನು ನಿರ್ಮಾಣದ ಅವಶ್ಯಕತೆವಿರುವುದಾಗಿ ಮನವಿ ಸಲ್ಲಿಸಿದರು.

ಡೀನ್ ತೋಟಗಾರಿಕೆ ಮಹಾವಿದ್ಯಾಲಯ ಬೀದರದ ಡಾ. ಎಸ್.ವಿ. ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಮುಖ ತೋಟಗಾರಿಕೆ ಬೆಳೆಗಳನ್ನು ಅವುಗಳ ಸೂಕ್ತತೆ ಅನುಸಾರ ಮತ್ತು ತಾಂತ್ರಿಕತೆಗಳನ್ನು ಅನುಸರಿಸಿಕೊಂಡು ಎಎಪ್‍ಪಿಐಓಗಳ ಮುಖಾಂತರ ಸಂಘಟನಾತ್ಮವಾಗಿ ಬೆಳೆದು ಮಾರುಕಟ್ಟೆಯಿಂದ ಕಲ್ಪಿಸಿಕೊಳ್ಳಲು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಗಳಿಂದ ರೈತರು ಹೆಚ್ಚಾಗಿ ತೊಂದರೆ ಅನುಭವಿಸುತ್ತಿದ್ದಾರೆ. ರೈತರು ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಪರಿಹಾರ ಕಂಡುಕೊಳ್ಳಲು ತಿಳಿಸಿದರು. ಜೊತೆಗೆ ಸರ್ಕಾರದ ಯೋಜನೆಯಾದಂತಹ ಬೆಳೆ ವಿಮೆ, ಕೃಷಿ ಸಿಂಚಾಯಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಬಳಸಿಕೊಂಡು ಸುಸ್ಥೀರ ಹಾಗೂ ಸಮೃದ್ಧಿ ಜೀವನ ನಡೆಸಲು ಸಲಹೆ ಮಾಡಿದರು.

ಡಾ. ಮೊಹಮ್ಮದ ಫಾರೂಕ್, ಡಾ. ಶ್ರೀನಿವಾಸ್ ಎನ್., ಡಾ. ಪ್ರವೀಣ ಜೋಳಗೀಕರ, ಡಾ. ಪ್ರವೀಣ ನಾಯಿಕೋಡಿ, ಡಾ. ಪ್ರಶಾಂತ, ಡಾ. ಅಶೋಕ ಸೂರ್ಯವಂಶಿ, ಡಾ. ಅರುಣಾಕುಮಾರ ಕೆ.ಟಿ.,
ಡಾ. ಮಲ್ಲಿಕಾರ್ಜುನ್ ಅವರು ಲಿಂಬೆ ಬೆಳೆಯಲ್ಲಿ ಆಧುನಿಕ ಬೇಸಾಯ ತಾಂತ್ರಿಕೆತೆಗಳು ಕುರಿತ ತರಬೇತಿ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.

ಡಾ. ಪ್ರಶಾಂತ, ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ಮಹಾವಿದ್ಯಾಲಯ, ಬೀದರ ಅವರು ನಿರೂಪಿಸಿ ವಂದಿಸಿದರು. ಡಾ. ಶ್ರೀನಿವಾಸ್ ಎನ್., ವಿಸ್ತರಣಾ ಮುಂದಾಳು, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಬೀದರ ಅವರು ಪ್ರಾಸ್ತಾವಿಕ ನುಡಿದರು. ಶ್ರೀಮತಿ ಪ್ರಿಯಾಂಕ ಹಾಗೂ ರವೀಂದ್ರ, ಸಹಾಯಕ ತೋಟಗಾರಿಕೆ ಅಧಿಕಾರಿಗಳು ವಂದಿಸಿದರು. ಔರಾದ್ ತಾಲೂಕಿನ ಸುಮಾರು 100 ರೈತರು ಭಾಗಿಯಾಗಿ ಪ್ರಯೋಜನೆಯನ್ನು ಪಡೆದರು.

ಕೈಪಿಡಿ ಬಿಡುಗಡೆ: ಕಾರ್ಯಕ್ರಮದಲ್ಲಿ ಲಿಂಬೆ ಬೆಳೆಯ ಬೇಸಾಯ ಕುರಿತು ನೂತನ ತಾಂತ್ರಿಕತೆ ಬಗ್ಗೆ ತಾಂತ್ರಿಕ ಕೈಪಿಡಿ ಬಿಡುಗಡೆಗೊಳಿಸಲಾಯಿತು.