ಲಿಂಬೆ ಬೆಳಗಾರರ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷರಿಗೆ ಸನ್ಮಾನ

ವಿಜಯಪುರ:ಆ.3:ಕರ್ನಾಟಕ ರಾಜ್ಯ ಸರ್ಕಾರದ ಲಿಂಬೆ ಬೆಳಗಾರರ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ ಕವಟಗಿ ಅವರಿಗೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಹಾಗೂ ನಗರ ವಲಯ ವಿಜಯಪುರ ಇವರ ವತಿಯಿಂದ ವಿದ್ಯಾಭಾರತಿ ಶಾಲೆಯಲ್ಲಿ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಅನುದಾನಿತ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ನಮ್ಮ ಸಮಸ್ಯೆಗೆ ಸ್ಪಂದಿಸಿ ಮುಖ್ಯಮಂತ್ರಿಗಳ ಹಾಗೂ ಶಿಕ್ಷಣ ಮಂತ್ರಿಗಳ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶಿವಾನಂದ ಹಿರೇಕುರಬರ, ಪ್ರದಾನ ಕಾರ್ಯದರ್ಶಿ ಗಿರೀಶ ಬಿರಾದಾರ, ವಿದ್ಯಾಭಾರತಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ರಾಜಶೇಖರ ಉಮರಾಣಿ ವಿದ್ಯಾಭಾರತಿ ಜಿಲ್ಲಾಧ್ಯಕ್ಷರಾದ ಪ್ರಭು ಕಡಿ, ಕಾರ್ಯಾಧ್ಯಕ್ಷರಾದ ವಿಜಯಕುಮಾರ ವಪ್ಪಾರಿ, ನಗರ ವಲಯದ ಅಧ್ಯಕ್ಷರಾದ ಆನಂದ ಕುಲಕರ್ಣಿ, ಪ್ರದಾನ ಕಾರ್ಯದರ್ಶಿ ಮಹಾಂತೇಶ ಜತ್ತಿ, ಖಜಾಂಚಿ ಚನ್ನು ಬಿರಾದಾರ, ಸಂಘಟನೆ ಪದಾಧಿಕಾರಿಗಳಾದ ಸಿದ್ದಲಿಂಗ ಬಿರಾದಾರ, ವಿನೋದ್ ನಾಯ್ಕ, ಕಾಸಿನಾಥ ಉಮದಿ, ಮಹಾಂತೇಶ ಗುರವ, ನಿಂಗರಾಜ ಬಾಬಾನಗರ, ವಿದ್ಯಾಭಾರತಿ ಶಾಲೆಯ ಮುಖ್ಯ ಗುರುಗಳಾದ ಶಿವನಗೌಡ ಪಾಟೀಲ, ಅಶೋಕ ಕೊಡಗಾನೂರ ಹಲವಾರು ಶಿಕ್ಷಕರು ಉಪಸ್ಥಿತರಿದ್ದರು.