ಲಿಂಬೆಹಣ್ಣು ಮಾರಾಟ ಕೇಂದ್ರ ಪ್ರಾರಂಭಿಸಿ

ಕಲಬುರಗಿ:ಮೇ.3: ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಲಿಂಬೆ ಹಣ್ಣು ಮಾರಾಟ ಕೇಂದ್ರವನ್ನು ತಮ್ಮ ತಮ್ಮ ಜಿಲ್ಲೆಗಳಲ್ಲಿ ಪ್ರಾರಂಭಿಸಿ ಸಂಕಷ್ಟದಲ್ಲಿರುವ ಲಿಂಬೆ ಬೆಳೆಗಾರರಿಗೆ ನೆರವಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ರಾಜ್ಯದಲ್ಲಿಯೇ ಅತೀ ಹೆಚ್ಚಾಗಿ ಉತ್ಕ್ರಷ್ಟವಾದ ಲಿಂಬೆ ಹಣ್ಣನ್ನು ಬೆಳೆಯಲಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಲಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಬೇಸಿಗೆಯಲ್ಲಿ ಲಿಂಬೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಅತ್ಯಧಿಕ ದರವು ಇರುತ್ತದೆ. ಒಂದು ಲಿಂಬೆ ಹಣ್ಣಿನ ಡಾಗ್ (1000 ಲಿಂಬೆ ಹಣ್ಣಗಳಿರುವ ಚೀಲ) ಸುಮಾರು 5 ರಿಂದ 6 ಸಾವಿರ ರೂಪಾಯಿ ಬೆಲೆಗೆ ಮಾರಾಟವಾಗುತ್ತದೆ. ಆದರಿಗ ಲಾಕ್ ಡೌನ್ ನಿಂದಾಗಿ ಲಿಂಬೆಹಣ್ಣು ಮಾರುಕಟ್ಟೆ ಸ್ಥಗಿತಗೊಂಡಿದ್ದು , ಲಿಂಬೆಹಣ್ಣು ಯಾರು ಕೇಳದಂತಾಗಿದೆ . ಇದರಿಂದ ಲಿಂಬೆ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರ್ಷವಿಡೀ ಸಾಕಷ್ಟು ಹೈರಾಣಗಿ ಮತ್ತು ಸಾಲ – ಸೋಲವನ್ನು ಮಾಡಿಕೊಂಡು ಲಿಂಬೆ ಗಿಡಗಳನ್ನು ಬೆಳೆಸುವ ರೈತರ ಪಾಡು ಹೇಳತೀರದಾಗಿದೆ. ಏಕೆಂದರೆ ಲಾಕ್ ಡೌನ್ ಹಿನ್ನೆಲೆ ಲಿಂಬೆ ಹಣ್ಣಿನ ಮಾರುಕಟ್ಟೆ ಸ್ಥಗಿತಗೊಂಡು ಲಿಂಬೆ ಹಣ್ಣು ಮಾರಾಟವಾಗದೆ ಲಿಂಬೆಹಣ್ಣಿನ ಡಾಗಿಗೆ ಕೇವಲ 500 ದರವು ಸಿಗುತ್ತಿಲ್ಲ. ಇದರಿಂದ ಲಿಂಬೆ ಬೆಳೆಗಾರರು ಸಾಲದ ಸುಳಿಗೆ ಸಿಲುಕಿ ನರುಳವಂತಿದೆ. ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಗಳು ಇದ್ದರೂ ಕೂಡಾ ಲಿಂಬೆಹಣ್ಣು ಮಾರಾಟ ಕೇಂದ್ರವನ್ನು ಅದೆಷ್ಟೋ ಬೇಗ ತೆರೆಯಿಸಿ ಲಿಂಬೆ ಬೆಳಗಾರರ ಸಂಕಷ್ಟಕ್ಕೆ ನೆರವಾಗಬೇಕು. ಅಲ್ಲದೇ ನೆರೆ ರಾಜ್ಯಗಳಿಗೂ ಲಿಂಬೆಹಣ್ಣು ರಪ್ತು ಮಾಡುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಲಿಂಬೆ ಬೆಳೆಗಾರರು ಲಿಂಬೆಹಣ್ಣು ಸಾಗಾಟ ಮಾಡುವ ವಾಹನಗಳಿಗೆ ವಿನಾಯತಿ ನೀಡುವುದರ ಮೂಲಕ ಲಿಂಬೆ ಬೆಳೆಗಾರರ ಹಿತಕಾಯಬೇಕು ಎಂದು ಒತ್ತಾಯಿಸಿದ್ದಾರೆ.