ಲಿಂಬಾವಳಿಯವರಿಗೆ ಒಲಿದ ಸಚಿವ ಸ್ಥಾನ:ವಿಜಯೋತ್ಸವ

ಕಲಬುರಗಿ.ಜ.13:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅರವಿಂದ್ ಲಿಂಬಾವಳಿ ಅವರನ್ನು ಪರಿಗಣಿಸಿದ್ದರಿಂದ ಉತ್ತರ ಕರ್ನಾಟಕದ ಅಭಿಮಾನಿ ಬಳಗವು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಶಿವಯೋಗಿ ನಾಗನಹಳ್ಳಿ, ಅನಿಲ್ ಜಾಧವ್, ಸಂಜು ಮಂಜಳಕರ್, ಸಿದ್ದು ಸಾಲಿಮನಿ, ಅಂಬಾದಾಸ್ ಕುಲಕರ್ಣಿ, ಅವಿನಾಶ್ ಕುಲಕರ್ಣಿ, ಅರುಣ್ ಕುಲಕರ್ಣಿ, ಸಿದ್ದು ಪಾಟೀಲ್, ಸಂತೋಷ್ ಹಾದಿಮನಿ, ಎಸ್.ಜಿ. ಭಾರತಿ, ವಿಜಯಲಕ್ಷ್ಮಿ ಗೊಬ್ಬುರಕರ್, ಮಲ್ಲು ಜಿಂಕೆರಿ, ರಾಣೋಜಿ ದೊಡ್ಡಮನಿ, ಹಣಮಂತ್ ವಚ್ಚಾ, ಪ್ರಲ್ಹಾದ್ ಹಡಗಿಲಕರ್, ಬಸವರಾಜ್ ಬಾರಡ್, ಗುಂಡು ಬಸವನಗರ, ವಿಠಲ್ ನೆಲೋಗಿ ಶ್ರೀಹರಿ ಮುಂತಾದವರು ಉಪಸ್ಥಿತರಿದ್ದರು.