ಲಿಂಗ ಪತ್ತೆ, ಭ್ರೂಣ ಹತ್ಯೆ ಶಿಕ್ಷಾರ್ಹ ಅಪರಾಧ

(ಸಂಜೆವಾಣಿ ವಾರ್ತೆ)
ರಾಯಚೂರು,ಮಾ.೧೫-
ಭ್ರೂಣ ಹತ್ಯೆ ಹಾಗೂ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಈ ಹಿನ್ನಲೆ ವೈದ್ಯರು ಕಾಯ್ದೆಯನ್ನು ಕಟ್ಟುನಿಟ್ಟಿಗಿ ಪಾಲಿಸಬೇಕು ಎಂದು ಜಿಲ್ಲಾ ಹೆಚ್ಚುವರಿ ನ್ಯಾಯಧೀಶ ದಯಾನಂದ ಬೇಲೂರು ಹೇಳಿದರು.
ಅವರಿಂದು ನಗರದ ಐಎಂಎ ಹಾಲ್ ನಲ್ಲಿ ಆಯೋಜಿಸಿದ ಭ್ರೂಣ ಹತ್ಯೆ ಹಾಗೂ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟನೆ ಮಾತನಾಡುತ್ತಾ, ಗಂಡು ಮತ್ತು ಹೆಣ್ಣು ನಾಣ್ಯದ ಎರಡು ಮುಖಗಳು . ಇದನ್ನು ಅರಿತು ಎಲ್ಲರೂ ಅಸಮತೋಲನ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಹೆಣ್ಣು ಭ್ರೂಣ ಹತ್ಯೆಯಿಂದ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಲಿಂಗ ಅನುಪಾತದಲ್ಲಿ ಏರುಪೇರಾಗಿ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳು ಸಷ್ಟಿಯಾಗುತ್ತವೆ. ಮಹಿಳೆಯರ ಮೇಲೆ ಅತ್ಯಾಚಾರ, ವಿವಾಹ ವಿಚ್ಛೇದನ ಹೆಚ್ಚಾಗುತ್ತವೆ. ಕುಟುಂಬ ಹದಗೆಡುತ್ತದೆ.ದೇಶದ ಅಭಿವದ್ಧಿ ಕುಂಠಿತವಾಗುತ್ತದೆ. ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾದಲ್ಲಿ ಗಂಡು ಮಕ್ಕಳಿಗೆ ಮದುವೆಯ ಕೊರತೆಯುಂಟಾಗುತ್ತದೆ ಎಂದರು. ೧೨೬ ಸ್ಕ್ಯಾನಿಂಗ್ ಸೇಂಟರ,ಇವೆ ನಾಲ್ಕೈದು ಯಂತ್ರಗಳಿಟ್ಟಿರುತ್ತಾರೆ.ಗುಣಮಟ್ಟದ ಮತ್ತು ಅಧಿಕೃತ ಪಡೆಯಬೇಕು.ಪ್ರಾದಿಕಾರದ ಅನುಮತಿ ಪಡೆಯಬೆಕು.ನ್ಯೂನ್ಯತೆಗಳಿರುತ್ತವೆ. ನಾವು ಪರಿಶೀಲಿಸಬೇಕಾಗುತ್ತದೆ.ರೋಗಿಯ ಅನುಮತಿ, ಸಹಿ ಪಡೆಯಬೆಕು. ಯಂತ್ರಗಳ ನೊಂದಣಿ ಸಂಖ್ಯೆಯ ವ್ಯತ್ಯಾಸವಿರುತ್ತದೆ ಎಂದರು.
ಕಾಯ್ದೆಯ ಅನುಸಾರ ಯಂತ್ರ ಇದೆಯೇ ನೋಡಬೇಕು.ಇಲ್ಲದಿದ್ದರೆ, ಇದು ಕಾನೂನುಬಾಹಿರವಾಗಿರುತ್ತದೆ. ಇದು ನೀವು ತಪ್ಪಿತಸ್ಥರಾಗುತ್ತಿರಿ ಎಚ್ಚರವಹಿಸಿ ಎಂದರು.ಲಿಂಗಾನುಪಾತ ಕಡಮೆಯಾಗುತ್ತಿದೆ. ೯೬೫, ಇರಬೇಕಾಗುತ್ತದೆ. ಅನುಪಾತದಲ್ಲಿ ಬಹಳ ವ್ಯತ್ಯಾಸ ಬರುತ್ತಿದೆ. ಜನ್ಮ ನೊಂದಣಿ ಆಗಬೇಕು.ನಮ್ಮಲ್ಲಿ ಅನುಪಾತದಲ್ಲಿ ಅಷ್ಠೇನು ವ್ಯತ್ಯಾಸಬೇಕು. ಪ್ರಸೂತಿ ತಜ್ಞರು ಎಚ್ಚರಿಕೆವಹಿಸಲು ಕೋರಿದರು.ದೇವದುರ್ಗದಲ್ಲಿ ವ್ಯತ್ಯಾಸ ಬಹಳ ಬಂತು,ನೊಂದಣಿ ಕೊರತೆ ಹೆಚ್ಚಾಗಿ ಕಾಣುತ್ತದೆ.ಜನ್ನ ನೊಂದಣಿ ಬೇಗ ಕೊಡಿ, ನರ್ಸಿಂಗ್ ಹೋಮ್ ಎಚ್ಚರಿಕೆವಹಿಸಬೇಕು.ಕ್ಲಿನಿಕಗಳ ರಿನಿವಲ್ ಆಗುತ್ತಿಲ್ಲ. ಆನಲೈನ್ ರಿನಿವಲ್ ಗೆ ಅರ್ಜಿ ಹಾಕಿ , ಇಲ್ಲದಿದ್ದರೆ, ದಂಡ ಮತ್ತು ಅದು ಮಿರಿದರೆ, ಸೀಜ್ ಮಾಡಬೇಕಾಗುತ್ತದೆ ಎಚ್ಚರಿಕೆವಹಿಸಿ, ಕೆಪಿಎಂ ಕಾಯ್ದೆ ಆನಲೈನ್ ನಲ್ಲಿ ಎಲ್ಲ ಮಾಹಿತಿ, ಆಯ್ಕೆಗಳಿರುತ್ತವೆ.ಆರೋಗ್ಯ ಇಲಾಖೆಯಡಿ ಬರುವ ಎಲ್ಲ ಚಟುವಟಿಕೆ ಸಂಸ್ಥೆಗಳು ಕಾನೂನು ಪಾಲನೆಗೆ ಸೂಚನೆ ಕೊಟ್ಟರು. ಕಾಯ್ದೆ ಮೀರಿದರೆ,ಆರೋಗ್ಯ ಅದಿಕಾರಿ ಮತ್ತು ಕೋರ್ಟ್ ಸುತ್ತ ಅಲೆದಾಡಬೇಕು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು, ವೈದ್ಯರು ಸೇರಿದಂತೆ ಉಪಸ್ಥಿತರಿದ್ದರು.