ಲಿಂಗಾರೆಡ್ಡಿ ಶೇರಿಯವರ ಮೂರು ಸಂಪಾದಿತ ಕೃತಿಗಳು ಜನಾರ್ಪಣೆ

ಸೇಡಂ,ಡಿ,31: ಪಟ್ಟಣದ ರಾಜಯೋಗಿನಿ ಬ್ರಹ್ಮಕುಮಾರಿ ಆಶ್ರಮದಲ್ಲಿಂದು (ಸಮ ಸಾಹಿತ್ಯ ವೇದಿಕೆ, ಸೇಡಂ ಜಿ. ಕಲಬುರ್ಗಿ) ಹಿರಿಯ ಲೇಖಕರಾದ ಲಿಂಗಾರೇಡ್ಡಿ ಶೇರಿಯವರ ಸಂಪಾದಿತ ವಚನ ದೀವಿಗೆ, ಭರಮನ ಶತಕ, ಕವಿ ಮೆಚ್ಚಿದ ಕವಿತೆ, ಕೃತಿಗಳ ಜನಾರ್ಪಣೆಯನ್ನು ಡಾ. ವಿಜಯಕುಮಾರ್ ಪರುತೆ ಬಿಡುಗಡೆಗೊಳಿಸಿ ಮಾತನಾಡಿದರು.ಈ ವೇಳೆಯಲ್ಲಿ ರಾಜಯೋಗಿನಿ ಬ್ರಹ್ಮಕುಮಾರಿ ಕಲಾವತಿ ಅಕ್ಕನವರು, ಕಸಾಪ ತಾಲೂಕ ಅಧ್ಯಕ್ಷರಾದ ಶ್ರೀಮತಿ ಸುಮಾ ಎಲ್, ಸಮ ಸಾಹಿತ್ಯ ವೇದಿಕೆ ಅಧ್ಯಕ್ಷರು ಪ್ರಾಧ್ಯಾಪಕರಾದ ಡಾ.ಬಿ ಆರ್ ಅಣ್ಣಾ ಸಾಗರ್, ಡಾ. ಪಂಡಿತ್ ಬಿ.ಕೆ, ಭೀಮರಾಯ ಹೇಮನೂರ್, ವೇದಿಕೆ ಮೇಲಿದ್ದರು. ತಾಲೂಕಿನ ಹಿರಿಯ ಸಾಹಿತಿಗಳು ಪತ್ರಕರ್ತರು ಇದ್ದರು.
ಸ್ವಾಗತ ನಿರೂಪಣೆ ಲಕ್ಷ್ಮಣ್ ರಂಜೋಳಕರ್ ಮಾಡಿದರು.