ಲಿಂಗಾರೆಡ್ಡಿ ಪುಣ್ಯಸ್ಮರಣೆ
 ಸಹಕಾರ ತತ್ವಕ್ಕೆ ಮಾದರಿಯಾಗಿದ್ದವರವರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.25: ನಗರದ  ರಾಘವ ಮೆಮೋರಿಯಲ್ ಅಸೋಶಿಯೇಶನ್ ಸಂಸ್ಥೆಯ ಅಮೃತ ಮಹೋತ್ಸವ ಪ್ರಯುಕ್ತ ಹಾಗೂ ದಿ‌ ಹೆಚ್ ಲಿಂಗಾರೆಡ್ಡಿ ಅವರ 47 ನೇ  ಪುಣ್ಯತಿಥಿ ಸಮಾರಂಭ ನಿನ್ನೆ ಸಂಜೆ ನಡೆಯಿತು.
ಕಾರ್ಯಕ್ರಮವನ್ನೂ ಸಂಸ್ಥೆಯ ಪದಾಧಿಕಾರಿಗಳು ಮತ್ತು ದಿವಂಗತ ಹೆಚ್. ಲಿಂಗಾ ರೆಡ್ಡಿ ಕುಟುಂಬದವರು ಉದ್ಘಾಟಿಸಿದರು.
ಸಂಸ್ಥೆಯ ಸದ್ಯಸ ಎನ್, ಬಸವರಾಜ  ಕನ್ನಡದಲ್ಲಿಮತ್ತು ಸಂಸ್ಥೆಯ ಜಂಟಿ ಕಾರ್ಯದರ್ಶಿ  ಎಂ. ರಾಮಾಂಜನೇಯಲು  ಅವರು ದಿವಂಗತ ಹೆಚ್ ಲಿಂಗಾ ರೆಡ್ಡಿ ರವರ ಸಾಧನೆಯನ್ನು ಕುರಿತು ತೆಲುಗಿನಲ್ಲಿ ಉಪನ್ಯಾಸ ನೀಡಿ. ಲಿಂಗಾರೆಡ್ಡಿ ಅವರು ಕುರುಗೋಡು ಶಾಸಕರಾಗಿದ್ದರು.
ಕಂಪ್ಲಿ ಸಕ್ಕರೆ ಕಾರ್ಖಾನೆ, ಬಳ್ಳಾರಿ ನಗರದಲ್ಲಿ ದಾರದ ಮಿಲ್, ಜನತಾ ಬಜಾರ್ ಸ್ಥಾಪನೆ ಮಾಡಿದರು. ರಾಘವ ಕಲಾ ಮಂದಿರಕ್ಕೂ ಅವರ ಕೊಡುಗೆ ಇದೆ.  ವಕೀಲರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕಂಪ್ಲಿ ಸಕ್ಕರೆ ಕಾರ್ಖಾನೆ ಸಂಕಷ್ಟದಲ್ಲಿದ್ದಾಗ ಮನೆಯಲ್ಲಿನ ಚಿನ್ನಾಭರಣವನ್ನು ಬಳಸಿಕೊಂಡವರು.‌ವಂಶ ರಾಜಕೀಯವನ್ನು ಅವರು ದೂರವಿಟ್ಟಿದ್ದರು. ಇಂತಹವರು ಸದಾ ಸ್ಮರಣೀಯರು.‌ಇವರ ಬಗ್ಗೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಕಿರು ಪುಸ್ತಕ ತರಲು ಸಿದ್ದವಿದೆಂದರು.
ನಂತರ ಹವಾಲ್ದಾರ್ ರಘುನಾಥ ಸರೋಜ ಸಂಗೀತ ವಿದ್ಯಾಲಯ ಬಳ್ಳಾರಿ ಇವರಿಂದ ಗಾಯನ  ಪ್ರದರ್ಶಿಸಲಾಯಿತು. ಯೋಗೀಶ್ ಸಂಗನಕಲ್ಲು ತಬಲಾ,  ಶಿವಕುಮಾರ್ ಕೆ. ಜಿ. ಇವರು ಹಾರ್ಮೋನಿಯಂ ಸಾಥ್  ನೀಡಿದರು.
ಹೈದ್ರಾಬಾದಿನ ಗೋವಾಡ ಕ್ರಿಯೇಷನ್ಸ್ ಅಸೋಸಿಯೇಷನ್ ಇವರಿಂದ ಗೋವಿಂದ ರಾಜಲು ನಾಗೇಶ್ವರ ರಾವ್  ರಚನೆ ಮತ್ರು ನಿರ್ದೇಶನದಲ್ಲಿ
“ನೆಟ್ಟಿಂಟಿ ಭಾಗೋತಂ” ತೆಲುಗು ಸಾಮಾಜಿಕ ನಾಟಕ ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಕೆ. ಚನ್ನಪ್ಪ, ಅಧ್ಯಕ್ಷ ಕೆ. ಕೊಟೆಶ್ವರ ರಾವ್, ಉಪಾಧ್ಯಕ್ಷರಗಳಾದ ರಮೇಶ್ ಗೌಡ ಪಾಟೀಲ್, ಹೆಚ್. ವಿಷ್ಣುವರ್ಧನ್ ರೆಡ್ಡಿ, ಗೌರವ ಕಾರ್ಯದರ್ಶಿ  ಎನ್. ಪ್ರಕಾಶ್, ಖಜಾಂಚಿ  ಪಿ ಧನಂಜಯ, ಸದಸ್ಯರುಗಳಾದ ಕೆ ರಾಮಾನುಜಂನೇಯಲು,ಎಂ ರಮೇಶ್ ಬಾಬು, ಎಂ ಹೇಮ ಚಂದ್ರ ರೆಡ್ಡಿ,ಹೆಚ್ ರಾಮ ಪ್ರಕಾಶ್ ರೆಡ್ಡಿ, ಸುರೇಂದ್ರ ಬಾಬು,ವಿ ರಾಮಚಂದ್ರ,  ಶೇಷ ರೆಡ್ಡಿ , ಗೋಪಾಲ ಕೃಷ್ಣ,ಜಿ ಪ್ರಭಾಕರ, ಟಿ ವಿರುಪಾಕ್ಷ ಗೌಡ, ಕೆ ಕೃಷ್ಣ, ರಮಣಪ್ಪ ಭಜಂತ್ರಿ ಮತ್ತು ಕಲಾಭಿಮಾನಿಗಳು ಇದ್ದರು.