ಲಿಂಗಾಯಿತ, ಒಕ್ಕಲಿಗರಿಗೆ ಮೀಸಲಾತಿ: ಪ್ರತ್ಯೇಕ ವರ್ಗ ಸೃಷ್ಟಿ

ಬೆಂಗಳೂರು: ಮಾ.24- ರಾಜ್ಯದ ಬಿಜೆಪಿ ಸರ್ಕಾರ ಮೀಸಲಾತಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯ ತೀರ್ಮಾನ ಪ್ರಕಟಿಸಿದ್ದು ವೀರಶೈವ ಲಿಂಗಾಯಿತರಿಗೆ ಒಕ್ಕಲಿಗರಿಗೆ ಮೀಸಲಾತಿಗೆ ಪ್ರತ್ಯೇಕ ಪ್ರವರ್ಗವನ್ನೇ ಸೃಷ್ಟಿಸಲಾಗಿದೆ. ಹಾಗೆಯೇ ಪರಿಶಿಷ್ಟ ಜಾತಿಯಲ್ಲಿ ಒಳಮಿಸಲಾತಿ ಜಾರಿ ಮಾಡುವ ತೀರ್ಮಾನವನ್ನು ಕೈಗೊಂಡು ಮುಸ್ಲಿಮರನ್ನು ಹಿಂದುಳಿದ ವರ್ಗದ ಮೀಸಲಾತಿಯಿಂದ ಕೈ ಬಿಟ್ಟು ಅವರಿಗೆ ಆರ್ಥಿಕ ದುರ್ಬಲ ವರ್ಗ ಈ ಡಬ್ಲ್ಯೂ ಎಸ್ ಅಡಿಯಲ್ಲಿ ಬರುವ ಶೇಕಡ 10ರ ಮೀಸಲಾತಿ ವರ್ಗದಲ್ಲಿ ಸೇರ್ಪಡೆ ಮಾಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ

ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ವರ್ಗಗಳ ಮೀಸಲಾತಿ ಬಗ್ಗೆ ಮಹತ್ತರ ತೀರ್ಮಾನಗಳನ್ನ ಕೈಗೊಳ್ಳುವ ಮೂಲಕ ಮುಂದಿನ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ವರ್ಗ ಒಕ್ಕಲಿಗ ಲಿಂಗಾಯಿತ ಸಮುದಾಯಗಳನ್ನ ಓಲೈಸುವ ಪ್ರಯತ್ನವನ್ನು ಸರ್ಕಾರ ನಡೆಸಿದೆ.
ಚುನಾವಣೆಯ ಹೊತ್ತಿನಲ್ಲಿ ಸರ್ಕಾರ ಮೀಸಲಾತಿಯ ಬ್ರಹ್ಮಾಸ್ತ್ರದ ಮೂಲಕ ಚುನಾವಣೆಯನ್ನು ಗೆದ್ದು ಮತ್ತೆ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಿರುವುದು ಸ್ಪಷ್ಟವಾಗಿದೆ. ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ವಿವಿಧ ವರ್ಗಗಳ ಮೀಸಲಾತಿ ತೀರ್ಮಾನವನ್ನ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಎಸ್​ಸಿ ಸಮುದಾಯಕ್ಕೆ ಒಳಮೀಸಲಾತಿ ಘೋಷಣೆ ಘೋಷಣೆ ಮಾಡಿ ಅದನ್ನು ಜಾರಿ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ ಪರಿಶಿಷ್ಟ ಜಾತಿಯ ಶೇಕಡ 17ರಷ್ಟು ಮೀಸಲಾತಿ ಪೈಕಿ ಎಸ್​ಸಿ ಎಡಗೈಗೆ ಶೇ 6 ರಷ್ಟು ಮೀಸಲಾತಿ
ಎಸ್​ಸಿ ಬಲಗೈಗೆ ಶೇ 5.5 ರಷ್ಟು ಬೋವಿ ಲಂಬಾಣಿ ಮತ್ತಿತರ ಟಚಬಲ್ ಪರಿಶಿಷ್ಟ ವರ್ಗದವರಿಗೆ ಶೇಕಡ 4.5 ಪರಿಶಿಷ್ಟ ಜಾತಿಯ ಸಣ್ಣ ಪಂಗಡಗಳ ಜಾತಿಗಳಿಗೆ ಶೇಕಡ ಒಂದರಷ್ಟು ಮೀಸಲಾತಿ ನೀಡುವ ಶಿಫಾರಸ್ಸನ್ನ ಕೇಂದ್ರಕ್ಕೆ ತೀರ್ಮಾನ ಮಾಡಲಾಗಿದೆ ಎಂದರು .
ಪರಿಶಿಷ್ಟ ಜಾತಿಯ ಮೀಸಲಾತಿ ಒಳ ಮೀಸಲಾತಿ ಬೇಡಿಕೆ ಬಹಳ ದಶಕಗಳಿಂದ ಬಾಕಿ ಉಳಿದಿತ್ತು ಬಿಜೆಪಿ ಸರ್ಕಾರ ಈಗ ಅದನ್ನ ಈಡೇರಿಸಿದೆ ಎಂದರು ಒಕ್ಕಲಿಗರಿಗೆ ಮತ್ತು ವೀರಶೈವ ಲಿಂಗಾಯತ ಮೀಸಲಾತಿಗೆ 2 ಸಿ ಮತ್ತು 2ಡಿ ಎಂಬ ಪ್ರತ್ಯೇಕ ಪ್ರವರ್ಗಗಳನ್ನು ಸೃಷ್ಟಿ ಮಾಡಿ 2ಸಿಗೆ ಶೇಕಡ ಆರರಷ್ಟು 2ಡಿಗೆ ಶೇಕಡ ಏಳರಷ್ಟು ಮೀಸಲಾತಿ ನೀಡುವ ತೀರ್ಮಾನವನ್ನು ಸಂಪುಟ ಕೈಗೊಂಡಿದೆ ತಿಳಿಸಿದರು.
ಒಕ್ಕಲಿಗರು 2 ಬಿ ಯಲ್ಲಿ ಶೇಕಡ 4 ಮೀಸಲಾತಿ ಪಡೆಯುತ್ತಿದ್ದರು ಈಗ ಅವರಿಗೆ 2ಸಿಯಲ್ಲಿ ಶೇಕಡ 6 ಮೀಸಲಾತಿ ಸಿಗಲಿದೆ ಹಾಗೆಯೇ 3ಬಿಯಲ್ಲಿ ಶೇಕಡ ಐದರಷ್ಟು ಮೀಸಲಾತಿ ಪಡೆಯುತ್ತಿದ್ದ ವೀರಶೈವ ಲಿಂಗಾಯಿತ ಸಮುದಾಯಗಳಿಗೆ 2ಡಿ ಪ್ರವರ್ಗ ಸೃಷ್ಟಿಸಿ ಶೇಕಡ ಏಳರಷ್ಟು ಮೀಸಲಾತಿಯನ್ನು ಒದಗಿಸಲಾಗಿದೆ. ಇದರ ಜೊತೆಗೆ ಮುಸ್ಲಿಮ ಸಮುದಾಯದ ಶೇ 4 ರಷ್ಟು ಓಬಿಸಿ ಮೀಸಲಾತಿಯನ್ನು ರದ್ದುಪಡಿಸಲಾಗಿದೆ.
ಮುಸ್ಲಿಮರ ಮೀಸಲಾತಿಯ ಶೇಕಡ 4ರಷ್ಟನ್ನು2ಸಿ ಮತ್ತು 2ಡಿಗುಂಪುಗಳಿಗೆ ತರ ಶೇಖಡ ಎರಡರಂತೆ ಹಂಚಿಕೆ ಮಾಡಲಾಗಿದೆ ಧಾರ್ಮಿಕ ಸಮುದಾಯದವರಿಗೆ ಹಿಂದುಳಿದ ವರ್ಗದ ಅಡಿಯಲ್ಲಿ ಮೀಸಲಾತಿ ನೀಡಲು ಅವಕಾಶವಿಲ್ಲ ಹಾಗಾಗಿ ಅದನ್ನು ರದ್ದುಪಡಿಸಿ ಅವರಿಗೆ ಅನ್ಯಾಯವಾಗಬಾರದು ಎಂದು ಈ ಡಬ್ಲ್ಯೂ ಎಸ್ ಕೋಟಾದ ಶೇಕಡ 10ರಷ್ಟು ಮೀಸಲಾತಿ ಗುಂಪಿಗೆ ಸೇರ್ಪಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಹೇಳಿ ಸದ್ಯದಲ್ಲೇ ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ವಿವರಿಸಿದರು.
ಎಸ್​ಟಿ ಸಮುದಾಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗುತ್ತದೆ. ಆರ್ಟಿಕಲ್​ 342 ಅನ್ವಯ 4 ಗುಂಪುಗಳಲ್ಲಿ ವರ್ಗೀಕರಣ ಮಾಡಿದ್ದರು. ಈ ಪೈಕಿ ಗುಂಪು ಒಂದು ಆದಿಜಾಂಬವ ಸಮುದಾಯಕ್ಕೆ ಶೇ 6ರಷ್ಟು ಮೀಸಲಾತಿ, ‘ಗುಂಪು 2’ ಆದಿಕರ್ನಾಟಕ ಸಮುದಾಯಕ್ಕೆ ಶೇ 5.5ರಷ್ಟು ಮೀಸಲಾತಿ, ಗುಂಪು 3 ಬಂಜಾರ, ಬೋವಿ, ಕೊರಚರಿಗೆ ಶೇ 4.5ರಷ್ಟು ಮೀಸಲಾತಿ, ಗುಂಪು 4ರಲ್ಲಿರುವ ಮತ್ತಿತರರಿಗೆ ಶೇ.1ರಷ್ಟು ಮೀಸಲಾತಿಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಕಾಡುಕುರುಬ, ಜೇನುಕುರುಬರನ್ನು ಎಸ್​​ಟಿಗೆ ಸೇರಿಸಬೇಕೆಂಬ ವಿಚಾರವಾಗಿ ಮೈಸೂರು ವಿವಿ ಸಮಿತಿ ನಿನ್ನೆಯಷ್ಟೇ ಸರ್ಕಾರಕ್ಕೆ ವರದಿ ನೀಡಿದೆ. ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದರು.
ಹಿಂದುಳಿದ ವರ್ಗದಲ್ಲಿ ಒಂದೇ ವರ್ಗೀಕರಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದ್ದು, ಧಾರ್ಮಿಕ ಅಲ್ಪಸಂಖ್ಯಾತರಿಗೆ 7 ರಾಜ್ಯಗಳಲ್ಲಿ ಒಬಿಸಿ ಮೀಸಲಾತಿ ಇಲ್ಲ. 2ಬಿ ಅಡಿ ಮೀಸಲಾತಿ ನೀಡಿಲ್ಲ. 2ಸಿ ಅಡಿ ಒಕ್ಕಲಿಗರಿಗೆ ಶೇಕಡಾ 6ರಷ್ಟು ಮೀಸಲಾತಿ ಹಾಗೂ 2ಡಿ ಅಡಿ ಲಿಂಗಾಯತರಿಗೆ ಶೇಕಡಾ 7ರಷ್ಟು ಮೀಸಲಾತಿ ನೀಡಲಾಗುವುದು ಎಂದು ಅವರು ಅಂಕಿಅಂಶ ನೀಡಿದರು.
ಸ್ವಾತಂತ್ರ್ಯ ನಂತರ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದರು.
ಕಾಲ ಕಾಲಕ್ಕೆ ಹಲವು ನಿರ್ಣಯ ಕೈಗೊಂಡು ಹಲವು ಸಮಿತಿಗಳನ್ನು ರಚಿಸಲಾಗಿದೆ. ಆದರೆ ಸಮಿತಿಗಳ ಶಿಫಾರಸ್ಸುಗಳನ್ನು ಜಾರಿ ಮಾಡಿರಲಿಲ್ಲ. ಆದರೆ ನಾವು ಎಸ್ ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವ ತೀರ್ಮಾನ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.