ಲಿಂಗಾಯತ ಸಮುದಾಯ ಬಿಜೆಪಿಗೆ ಅಸ್ತ್ರವಲ್ಲ: ಜೋಶಿ


ಹುಬ್ಬಳ್ಳಿ, ಏ 24: ಲಿಂಗಾಯತ ಸಮುದಾಯ ನಮಗೆ ಅಸ್ತ್ರವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿಂಗಾಯಿತರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಎಂದು ನುಡಿದರು.
ನಾವು ಮೂರು ಜನ ಲಿಂಗಾಯಿತರನ್ನು ಮುಖ್ಯಂತ್ರಿ ಮಾಡಿದ್ದೇವೆ. ರಾಹುಲ್ ಗಾಂಧಿಗೆ, ಕಾಂಗ್ರೆಸ್‍ನವರಿಗೆ ಪ್ರೀತಿ ಇದ್ದರೆ ಲಿಂಗಾಯಿತ ಮುಖ್ಯಮಂತ್ರಿ ಮಾಡುತ್ತೇವೆಂದು ಹೇಳಲಿ ನೋಡೋಣ ಎಂದು ಅವರು ಸವಾಲು ಹಾಕಿದರು.
ನಾಯಕತ್ವದ ನಿರ್ಧಾರ:
ನಾವು ಸದ್ಯ ಬಸವರಾಜ ಬೊಮ್ಮಾಯಿಯವರ ಮಾರ್ಗದರ್ಶನದಲ್ಲಿ ಚುನಾವಣೆಗೆ ಹೋಗುತ್ತಿದ್ದೇವೆ. ಚುನಾವಣೆ ನಂತರ ನಾಯಕತ್ವ ವಿಷಯದ ನಿಧಾರ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಅವರು ಹೇಳಿದರು.
ಪರಿಣಾಮವಿಲ್ಲ:
ಜಗದೀಶ್ ಶೆಟ್ಟರ್ ಕಾಂಗ್ರೆಸ್‍ಗೆ ಹೋಗಿರುವುದರಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮವಿಲ್ಲ ಎಂದ ಅವರು, ಹಳೆಯ ಆಟಗಾರ'ರಿಗೆ ನಿವೃತ್ತಿ ಹೊಂದಲು ಹೇಳಿದರೆ ಅವರು ಮತ್ತೊಂದುತಂಡ’ದಲ್ಲಿ ಆಡಲು ಹೋಗಿದ್ದಾರೆ. ಆದರೆ ಈಸಲ `ಕಪ್’ ನಮ್ಮದೇ ಎಂದು ಸ್ಪಷ್ಟವಾಗಿ ನುಡಿದರು.
ಬಿ.ಎಲ್. ಸಂತೋಷ್ ವಿರುದ್ಧ ಶೆಟ್ಟರ್ ಆರೋಪ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ ಈ ಆರೋಪ ನಿರಾಧಾರವಾದದ್ದು, ಶೆಟ್ಟರ್‍ಗೆ ಟಿಕೆಟ್ ನಿರಾಕರಣೆ ನಿರ್ಧಾರ ನಡೆದದ್ದು ಮೋದಿ, ಅಮೀತ್ ಶಾ ಮಟ್ಟದಲ್ಲಿ. ಶೆಟ್ಟರ್ ಜೊತೆ ಸ್ವತ: ಅಮಿತ್ ಶಾ ಮಾತನಾಡಿ ನಿಮಗೆ ದೊಡ್ಡ ಸ್ಥಾನ ಕೊಡಲು ತೀರ್ಮಾನಿಸಿದ್ದೇವೆ ಎಂದರೂ ಶೆಟ್ಟರ್ ದುಡುಕಿನ ನಿರ್ಧಾರ ಕೈಗೊಂಡರು. ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಅವರು ಖಾರವಾಗಿ ಹೇಳಿದರು.
ಸಂಜೆ ನಗರಕ್ಕೆ ಶಾ:
ಇಂದು ಸಂಜೆ ನಗರಕ್ಕೆ ಆಗಮಿಸಲಿರುವ ಅಮೀತ್ ಶಾ ಅವರು ಜಿಲ್ಲಾ ಪದಾಧಿಕಾರಿಗಳ, ಮಂಡಳ ಅಧ್ಯಕ್ಷರ ಜೊತೆ ಸಭೆ ಮಾಡಲಿದ್ದಾರೆ. ಗದಗ, ಧಾರವಾಡ, ಹಾವೇರಿ ಜಿಲ್ಲೆಗಳ ಕುರಿತಂತೆ ಸಮಗ್ರ ಚರ್ಚೆ ಮಾಡಿ ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ ಎಂದ ಜೋಶಿ ದಿ. 29 ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಜಿಲ್ಲೆಯ ಕುಡಚಿಗೆ ಬರಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ