ಲಿಂಗಾಯತ ಸಮುದಾಯದ ವ್ಯಕ್ತಿಗೆ ಕಾಂಗ್ರೇಸ್ ನೀಡುವಂತೆ ಒತ್ತಾಯ

ಬಸವಕಲ್ಯಾಣ:ನ.18: ಮುಂಬರುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ಲಿಂಗಾಯತ ಸಮುದಾಯದ ವ್ಯಕ್ತಿಗೆ ಟಿಕೇಟ್ ನೀಡಬೇಕು ಎಂದು ಒತ್ತಾಯಿಸಿ ಇಲ್ಲಿಯ ವೀರಶೈವ ಲಿಂಗಾಯತ ಹೋರಾಟ ಸಮಿತಿಯ ವತಿಯಿಂದ ಮುಖಂಡರು ಸೇರಿ ನಗರದಲ್ಲಿ ಸಭೆ ನಡೆಸಿ ಚರ್ಚಿಸಿದರು.

ಕಾಂಗ್ರೇಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಆರ್. ಪಾಟೀ¯ ಅವರು ಸಭೆಯ ನೇತ್ರತ್ವ ವಹಿಸಿ ಮಾತನಾಡಿ, ಸುಮಾರು ಐವತ್ತು ವರ್ಷಗಳಿಂದ ಲಿಂಗಾಯತ ಮುಖಂಡರು ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವು ಲಿಂಗಾಯತರಿಗೆ ಟಿಕೇಟ್ ನೀಡುತ್ತಿಲ್ಲ ಹೀಗಾಗಿ ಸುಮಾರು 70 ಸಾವಿರ ಜನ ಲಿಂಗಾಯತ ಮತಗಳು ಇದ್ದರು ಸಹ ನಮಗೆ ಪಕ್ಷವು ಕಡೆಗಣಿಸುತ್ತಾ ಬರುತ್ತಿದೆ ಎಂದು ತಮ್ಮ ಅಸಮಧಾನ ಹೊರ ಹಾಕಿದರು.

ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರಿಗೆ ಟಿಕೇಟ್ ನೀಡುವಂತೆ ಪಕ್ಷದ ಹೈಕಮಾಂಡಗೆ ಮನವರಿಕೆ ಮಾಡುವ ದೃಷ್ಠಿಯಿಂದ ಈ ಸಭೆ ನಡೆಸಿ ಈ ನಿರ್ಣಯಕ್ಕೆ ಬರಲಾಗಿದೆ ಎಂದರು. ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ಮುಖಂಡರ ಸಬೆ ನಡೆಸಲಾಗುವದು ಎಂದು ತಿಳಿಸಿದ್ದಾರೆ.

ಈ ವೇಳೆ ಮುಖಂಡ ಶೇಷಪ್ಪ ಗುರಣ್ಣಾ ಮುಚಳಂಬ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ದುರ್ಗೆ, ಮುಖಂಡರಾದ ಬಸವರಾಜ ಮುರುಡ, ವೀರಣ್ಣ ಪಾಟೀಲ್ ಮೋರಖಂಡಿ, ವಿವೇಕ ಚಳಕಾಪುರೆ ಹುಲಸೂರು, ಚನ್ನು ಸ್ವಾಮಿ ಬೇಲೂರ, ಶರಣಯ್ಯ ಸ್ವಾಮಿ, ರಾಜಕುಮಾರ ಹೊಳಕಡೆ, ಸುರೇಶ ಚಕುರ್ತೆ ಗೋರ್ಟಾ (ಬಿ) ಬಾಬುರಾವ ದೇವಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.