ಲಿಂಗಾಯತ ಸಮುದಾಯದಿಂದ ಪ್ರತಿಭಟನೆ

ಚಿಂಚೋಳಿ ಸ 24: ಲಿಂಗಾಯತ ಸಮುದಾಯದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಚಿಂಚೋಳಿಯ ತಹಶೀಲ್ ಕಾರ್ಯಾಲಯ ಮುಂದೆ ಬಸವಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು
ಪ್ರತಿಭಟನೆ ನಿರತರನ್ನು ಉದ್ದೇಶಿಸಿ ಲಿಂಗಾಯತ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಪಾಲಮೂರ ಮಾತನಾಡಿ ಕೇಂದ್ರ ಸರ್ಕಾರದಲ್ಲಿ ಲಿಂಗಾಯತರಿಗೆ ಮತ್ತು ಅದರ ಉಪ ಪಂಗಡಗಳಾದ ಲಿಂಗಾಯತ ಕುಂಬಾರ. ಲಿಂಗಾಯತ ಕಂಬಾರ. ಲಿಂಗಾಯತ ಗಾಣಿಗ. ಲಿಂಗಾಯತ ಹೂಗಾರ ಹೀಗೆ ಮುಂತಾದ ರೀತಿಯ ಉಲ್ಲೇಖಿಸಿದ್ದು ಆದರೆ ಎಲ್ಲರಿಗೂ ಕೂಡ ವೀರಶೈವ ಲಿಂಗಾಯತ ಎಂದು ಉಲ್ಲೇಖವಿರುವುದಿಲ್ಲ. ಇದರಿಂದ ಎಷ್ಟು ವಿದ್ಯಾರ್ಥಿಗಳು ಸರಕಾರಿ ಸೌಲಭ್ಯಗಳು ಮತ್ತು ನವೋದಯ ಶಾಲೆ ಪ್ರವೇಶದಿಂದ ವಂಚಿತರಾಗಿದ್ದಾರೆ. ಅದರಿಂದ ಕಂದಾಯ ಇಲಾಖೆಯಿಂದ ಲಿಂಗಾಯತ ಜಾತಿಯವರಿಗೆ ಲಿಂಗಾಯತ ಎಂದು ಸರ್ಟಿಫಿಕೇಟ್ ನೀಡಬೇಕು . ಕರ್ನಾಟಕ ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಅನೇಕರು ಬಡತನದಿಂದ ಜೀವನ ಸಾಗಿಸುತ್ತಿದ್ದಾರೆ. ವಿವಿಧ ಕಸುಬುಗಳ ಜೊತೆಗೆ ಕೂಲಿಮಾಡಿ ಬದುಕುತ್ತಿದ್ದಾರೆ. ಇವರ ಜೀವನ ಮಟ್ಟದ ಸುಧಾರಣೆಗಾಗಿ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಸಮಸ್ತ ಲಿಂಗಾಯತರ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಹೇಳಿದರು. ತಹಸಿಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಲಿಂಗಾಯತ ಸಮಾಜದ ಮುಖಂಡರಾದ ಚಿತ್ರಶೇಖರ ಪಾಟೀಲ. ನಂದ ಕುಮಾರ್ ಪಾಟೀಲ. ರಮೇಶ ಸೀಳಿನ. ಮಲ್ಲಿಕಾರ್ಜುನ್ ಭೂಶಟ್ಟಿ. ನಾಗೇಶ ಭದ್ರಶೆಟ್ಟಿ. ಕಾಶಿನಾಥ ಹುಣಜೆ. ರಮೇಶ. ಶ್ರೀಶೈಲ. ಜಗನ್ನಾಥ ಶೇರಿಕರ. ಸಂಜೀವ ಕುಮಾರ ಪಾಟೀಲ. ಸುರೇಶ ದೇಶಪಾಂಡೆ. ಶಾಂತಕುಮಾರ. ಮತ್ತು ಅನೇಕ ಲಿಂಗಾಯತ ಸಮಾಜದ ಮುಖಂಡರು ಉಪಸ್ಥಿತರಿದ್ದರು