
ರಾಯಚೂರು,ಜು.೧೦-
ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾದ ಸಭೆಯು ಗಣ್ಯರಿಗೆ ವಿದ್ಯಾರ್ಥಿನಿಯರು ಗೌರವಿಸುವ ಮೂಲಕ ವೇದಿಕೆಗೆ ಆಹ್ವಾನಿಸಲಾಯಿತು.
ಮಾಜಿ ಅಧ್ಯಕ್ಷರಾದ ಮಟಮಾರಿ ವೀರನಗೌಡರು ನೂತನ ಅಧ್ಯಕ್ಷರಾದ ಶರಣು ಭೂಪಾಲ ನಾಡಗೌಡ್ರು ಹಾಗೂ ಸರ್ವ ಸದಸ್ಯರಿಗೆ ಹೂಗುಚ್ಚವನ್ನು ನೀಡುವ ಮೂಲಕ ಅಧಿಕಾರವನ್ನು ಅಸ್ತಾಂತರಿಸಿದರು. ನಂತರ ಪದಗ್ರಹಣವೂ ಜರುಗಿತು.
ಸಮಾಜದ ಸರ್ವ ಹಿರಿಯ ಮತ್ತು ಕಿರಿಯ ಸದಸ್ಯರು ಸಮಾಜದ ಆಯ ವ್ಯಯಗಳ ಬಗ್ಗೆ ಚರ್ಚಿಸಲಾಯಿತು.
ಸುಮಾರು ೪೫ ವರ್ಷಗಳಿಂದ ಸಮಾಜದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ ಹಿರಿಯ ಶ್ರಮಜೀವಿ ಅಯ್ಯಪ್ಪ ಬಳ್ಳೂರ ಮತ್ತು ಸಮಾಜದ ಚುನಾವಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಶಶಿಧರಗೌಡ ಕೇಲೂರು ಇವರಿಗೆ ನಗರ ಶಾಸಕ ಡಾ. ಶಿವರಾಜ ಪಾಟೀಲ ಹಾಗೂ ಸಮಾಜದ ಸರ್ವ ಗಣ್ಯರು ಸೇರಿ ಗೌರವಿಸಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷರು ನೂರಾರು ವರ್ಷಗಳಿಂದ ನಮ್ಮ ಹಿರಿಯರು ಎಂತೆಂಥ ಕಸ್ಟ ಕಾಲದಲ್ಲಿಯೂ ಸಮಾಜಕ್ಕೋಸ್ಕರ ಹಗಲಿರುಳು ಶ್ರಮಿಸಿ ಇಂಥ ಒಂದು ವೀರಶೈವ ಲಿಂಗಾಯತ ಸಮಾಜವನ್ನು ಅಭಿವೃದ್ಧಿ ಪಡಿಸಿದ್ದಾರೆ ಅವರಿಗೆಲ್ಲ ಎಸ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು ಎಂದು ಹೇಳಿದರು. ಯಾವುದೇ ಒಂದು ಸಮಾಜವು ಅಭಿವೃದ್ಧಿ ಹೊಂದಬೇಕಾದರೆ ಹಿಂದೆ ದುಡಿದಂತ ಹಿರಿಯ ಮಾರ್ಗದರ್ಶನ ಮುಖ್ಯವಾಗುತ್ತೆ ಯಾಕೆಂದರೆ ಸಮಾಜ ಕಟ್ಟುವುದಕ್ಕೆ ಅವರ ಅನುಭವಗಳು ಈಗ ನಮಗೆ ಸಲಹೆಗಳಾಗಿ ಮಾರ್ಗದರ್ಶವಾಗುತ್ತವೆ. ಆದುದರಿಂದ ನಾವೆಲ್ಲ ಸರ್ವ ಸದಸ್ಯರು ಶ್ರಮವಹಿಸಿ ನಮ್ಮ ಸಮಾಜವನ್ನು ಇನ್ನೂ ಅಭಿವೃದ್ಧಿ ಪಡಿಸಲು ಮುಂದಾಗೋಣ ಏನಾದರೂ ಸಣ್ಣಪುಣ್ಣ ಗೊಂದಲಗಳಿದ್ದರೆ ಅವುಗಳನ್ನು ತಿದ್ದಿಕೊಂಡು ನಡೆಯೋಣ ಎಂದರು.
ನಮ್ಮ ಹಿರಿಯರಾದ ಮಟಮಾರಿ ವೀರನಗೌಡರ ಅವಧಿಯಲ್ಲಿ ಸಮಾಜವು ಸಾಕಸ್ಟು ಅಭಿವೃದ್ಧಿ ಹೋದಿದೆ ಅವರಿಗೂ ಮತ್ತು ಅವರ ಸರ್ವ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಕಾರ್ಯದರ್ಶಿ ಎಸ್.ಎಂ. ಸಿದ್ದಾರೆಡ್ಡಿ, ಗಿರಿಮಲ್ಲಪ್ಪ, ಎಸ್.ಎಲ್. ಕೇಶವರೆಡ್ಡಿ,
ವೀರೇಂದ್ರ ಪಾಟೀಲ ಹರವಿ, ಶರಣರೆಡ್ಡಿ, ಎಸ್.ಜಿ. ಕಲ್ಲಯ್ಯ ಸ್ವಾಮಿ, ವಿಶ್ವನಾಥ ಕ್ಯಾದಿಗ್ಗೇರಿ, ವಿಜಯಕುಮಾರ ಪಾಟೀಲ ಶಾವಂತಗೇರಿ, ರಾಜಶೇಖರ ಪಾಟೀಲ ಇಟಗಿ, ಆನಂದ ಪಾಟೀಲ ಅಸ್ಕಿಹಾಳ, ದಾನಮ್ಮ ಸುಭಾಶ್ಚಂದ್ರ ಕಡಗಂಚಿ, ಹಾಗೂ ಸಮಾಜದ ಮುಖಂಡರು, ಹಿರಿಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.