ಲಿಂಗಾಯತ ಸಮಾಜದ ಎಲ್ಲ ಪಂಗಡಗಳಿಗೆ ಓಬಿಸಿ ಮೀಸಲಾತಿ ಸಿಗಬೇಕು

ಸಿಂದಗಿ;ಡಿ.30: ರಾಜ್ಯದಲ್ಲಿ ಸುಮಾರು 20 ವರ್ಷಗಳಿಂದ ಆಡಳಿತದಲ್ಲಿರುವ ಎಲ್ಲ ಸರಕಾರಗಳಿಗೆ ಪಂಚಮಸಾಲಿ ಸಮಾಜವನ್ನು 2ಎಗೆ ಮೀಸಲಾತಿ ನೀಡುವಂತೆ ಮನವಿ ಸಲ್ಲಿಸುತ್ತಾ ಬರಲಾಗಿದ್ದರು ಕೂಡಾ ಯಾವುದೇ ಸರಕಾರಗಳು ಮನ್ನಣೆ ನೀಡಿಲ್ಲ ಆ ಕಾರಣಕ್ಕೆ ಜ. 14ರಿಂದ ಕೂಡಲಸಂಗಮದಿಂದ ಬೆಂಗಳೂರು ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯಬಸವ ಮೃತ್ಯುಂಜಯ ಸ್ವಾಮಿಗಳು ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರದಲ್ಲಿ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳಿಗೆ ಓಬಿಸಿ ಮೀಸಲಾತಿಯು ಸಿಗುವಂತಾಗಬೇಕು. ರಾಜ್ಯದಲ್ಲಿ ಲಿಂಗಾಯತ 108 ಪಂಗಡಗಳಲ್ಲಿಯೇ ಪಂಚಮಸಾಲಿ ಸಮಾಜ ತೀರ ಹಿಂದುಳಿದ ಪಂಗಡವಾಗಿದೆ. ರಾಜ್ಯದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಜ.14 ರಿಂದ ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಬ್ರಹತ್ ಪ್ರಮಾಣದ ಪಾದಯಾತ್ರೆಯನ್ನು ಆಯೋಜಿಸಲಾಗಿದ್ದು ಅಂದು ಸುಮಾರು 2 ರಿಂದ 3 ಲಕ್ಷ ಜನರ ಸಮ್ಮುಖದಲ್ಲಿ ಪಾದಯಾತ್ರೆಗೆ ಚಾಲನೆ ದೊರೆಯಲಿದೆ. ಪ್ರತಿದಿನ 20 ಕೀಮೀ. ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಮುಕ್ತಾಯದ ದಿನದಂದು ಸಮಾಜದ ಬಂಧುಗಳು ಕನಿಷ್ಠ 5.6 ಲಕ್ಷ ಜನರು ಸೇರಬೇಕು ಎಂದು ಶ್ರೀಗಳು ಕರೆ ನೀಡಿದರು.
ಇಲ್ಲಿಯವರೆಗೆ ಆಡಳಿತ ನಡೆಸಿದ ಸರಕಾರಗಳಿಗೆ ಪಂಚಮಸಾಲಿ ಸಮಾಜ ಎಲ್ಲ ರೀತಿಯಲ್ಲಿ ಮುಂದುವರೆದಿದೆ ಎಂದು ತಿಳಿದುಕೊಂಡಿದ್ದು ವಾಸ್ತವದಲ್ಲಿ ಪ್ರತಿಶತ 5 ರಷ್ಟು ಜನ ಶ್ರೀಮಂತರೆಂದು ಎದ್ದು ಕಾಣುತ್ತಾರೆ ಆದರೆ 95% ರಷ್ಟು ಜನರು ಹಿಂದುಳಿದವರಿದ್ದು ಕಡು ಬಡತನದಲ್ಲಿ ಜೀವನ ನಡೆಸುತ್ತಾ ಸರಕಾರದ ಯಾವುದೇ ಸೌಲಭ್ಯಗಳು ಸಿಗದೇ ಸಮಾಜದ ಮಕ್ಕಳು ಶಿಕ್ಷಣ, ಉದ್ಯೋಗದಲ್ಲಿ ವಂಚಿತರಾಗಿದ್ದಾರೆ. ಪಂಚಮಸಾಲಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಯಡಿಯೂರಪ್ಪನವರು ಮುಖ್ಯಮಂತ್ರಿ ಇರುವದರೊಳಗಾಗಿ ಈ ಸಮಾಜಕ್ಕೆ 2ಎ ಮೀಸಲಾತಿ ಸಿಗಬೇಕು ಇಲ್ಲದಿದ್ದರೆ ಮೀಸಲಾತಿ ಎನ್ನುವುದು ಮರೆತು ಬಿಡಬೇಕಾಗುತ್ತದೆ ಕಾರಣ ಮುಖ್ಯಮಂತ್ರಿಗಳಿಗೆ ಹಿಂದುಳಿದ ಸಮಾಜಗಳನ್ನು ಗುರತಿಸಿ ಮೀಸಲಾತಿ ನೀಡುವ ಪರಮಾಧಿಕಾರವಿದೆ ಆ ನಿಟ್ಟಿನಲ್ಲಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಪಾದಯಾತ್ರೆ ಹಮ್ಮಿಕೊಳ್ಳುವ ಕುರಿತು ಇಂದಿನಿಂದ 20 ದಿನಗಳ ಕಾಲ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಜ.5 ರಂದು ವಿಜಯಪುರದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಇನ್ನೂ ಮೀಸಲಾತಿ ಪಡೆಯುವುದಕ್ಕಗಿ ಹಮ್ಮಿಕೊಂಡಿರುವ ಆಂದೋಲನಕ್ಕೆ ಪಂಚಮಸಾಲಿ ಸಮಾಜದ ಪ್ರತಿ ಮನೆಯಿಂದ ಓರ್ವ ಯುವಕನ್ನು ಕಳುಹಿಸಿ ರಾಜ್ಯದಲ್ಲಿ ಸಮಾಜದ ಶಕ್ತಿ ಪ್ರದರ್ಶಿಸಬೇಕಾಗಿದ್ದು ಅದಕ್ಕೆ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧÀ್ಯಕ್ಷ ಅಶೋಕ ಅಲ್ಲಾಪುರ, ಪಂಚಮಸಾಲಿ ನೌಕರರ ಸಂಘದ ಅಧÀ್ಯಕ್ಷ ಜಿ.ಎನ್.ಪಾಟೀಲ, ಯುವ ಘಟಕದ ಅಧ್ಯಕ್ಷ ವಿರಾಜ ಪಾಟೀಲ, ನ್ಯಾಯವಾದಿ ಎಸ್.ಬಿ.ಪಾಟೀಲ(ಗುಂದಗಿ), ಅವರಿಗೆ ಪಾದಯಾತ್ರೆಯ ರೂಪರೇಷ ಕುರಿತು ಮಾಹಿತಿ ನೀಡುವಂತೆ ಸೂಚಿಸಿದರು.
ಮುಖ್ಯಮಂತ್ರಿಗಳ ಮನವಿ; ಮುಖ್ಯಮಂತ್ರಿ ಯಡಿಯೂರಪ್ಪನವರು ಪಾದಯಾತ್ರೆ ಮುಂದಕ್ಕೆ ಹಾಕುವಂತೆ ಖುದ್ದಾಗಿ ಮೋಬಾಯಿಲ್ ಕರೆಯ ಮುಖಾಂತರ ಮನವಿ ಮಾಡುತ್ತಿದ್ದು ಸಮಾಜದ ಮುಖಂಡರ ಜೊತೆ ಚರ್ಚಿಸಿ ತಿಳೀಸುತ್ತೇನೆ ಎಂದು ತಿಳಿಸಿದ್ದು ಅಲ್ಲದೆ ಸಚಿವ ಸಿ.ಸಿ.ಪಾಟೀಲರ ನೆತೃತ್ವದಲ್ಲಿ ಸರಕಾರದ ನಿಯೋಗವೊಂದು ಕೂಡಲಸಂಗಮ ಪೀಠಕ್ಕೆ ಆಗಮಿಸಿ ಸರಕಾರದ ನಿರ್ಣಯಗಳನ್ನು ತಿಳಿಸಲಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಅಧÀ್ಯಕ್ಷ ಎಂ.ಎಂ.ಹಂಗರಗಿ, ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ, ಮುಖಂಡರಾದ ಸೋಮನಗೌಡ ಬಿರಾದಾರ, ಡಾ. ಚನ್ನಬಸವ ಸೋಲಾಪುರ, ಅರವಿಂದ ಹಂಗರಗಿ, ಗೋಲ್ಲಾಳಪ್ಪಗೌಡ ಪಾಟೀಲ( ಗೋಲಗೇರಿ), ಶಿವರಾಜ ಪೊಲೀಸಪಾಟೀಲ, ಗುರು ಬಸರಕೋಡ, ಕಾಳಪ್ಪಗೌಡ ಬಗಲಿ, ಶ್ರೀಶೈಲ ಯಳಮೇಲಿ, ರವಿ ಬಿರಾದಾರ, ಸುರೇಶ ಮಲಗೊಂಡ, ಸಂಗನಗೌಡ ಬಿರಾದಾರ, ಎಂ.ಬಿ.ಯಡ್ರಾಮಿ, ಚಂದ್ರಶೇಖರ ನಾಗರಬೇಟ್ಟ ಸೇರಿದಂತೆ ಅನೇಕರು ಇದ್ದರು.