ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡಿದ ಡಿ.ಬಸವರಾಜ್; ಯಶವಂತ್ ರಾವ್ ಜಾಧವ್ ಆರೋಪ

ಸಂಜೆವಾಣಿ ವಾರ್ತೆ

ದಾವಣಗೆರೆ. ಜೂ.೧೧; ಕಾಂಗ್ರೆಸಿನ ಮುಖಂಡ. ಡಿ ಬಸವರಾಜ್ ಕೇಂದ್ರ ಸಚಿವ ಸಂಪುಟದಲ್ಲಿ ಲಿಂಗಾಯಿತ ಸಮಾಜಕ್ಕೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಕೊಟ್ಟಿಲ್ಲ ಎಂಬ ಹೇಳಿಕೆಯನ್ನ ಕೊಟ್ಟು ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್  ತಿಳಿಸಿದ್ದಾರೆ.  ರಾಜ್ಯದಲ್ಲಿ ಬಿಜೆಪಿ ಪಕ್ಷ  ಅಧಿಕಾರ ಬಂದಂತ ಸಂದರ್ಭದಲ್ಲಿ  ಮೂರು ಜನ ಮುಖ್ಯಮಂತ್ರಿಗಳನ್ನ ಮಾಡಿ ಆ ಸಮಾಜಕ್ಕೆ ಗೌರವ ಕೊಟ್ಟಂತ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ, ಪಕ್ಷ ಮತ್ತು ರಾಜ್ಯದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ಲಿಂಗಾಯಿತ ಸಮಾಜಕ್ಕೆ ಕೊಟ್ಟು ಆ ಸಮಾಜಕ್ಕೆ ಗೌರವನ್ನು ಸಲ್ಲಿಸಿದ ಪಕ್ಷ ಬಿಜೆಪಿ ಆದರೆ ಇಲ್ಲಿಯವರೆಗೂ ರಾಜ್ಯದ ಮುಖ್ಯಮಂತ್ರಿ ಸ್ಥಾನವಾಗಲಿ ರಾಜ್ಯಾಧ್ಯಕ್ಷರ ಸ್ಥಾನಮಾನವಾಗಲಿ ಇಲ್ಲಿವರೆಗೂ ಲಿಂಗಾಯಿತ ಸಮಾಜಕ್ಕೆ ಕೊಡದೆ ಅನ್ಯಾಯ ಮಾಡುತ್ತಾ ಇರುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್,  ಆದರೆ ತಮ್ಮ ತಟ್ಟೆಯಲ್ಲಿ ಬಿದ್ದಂತ ಹೆಗ್ಗಣವನ್ನು ನೋಡಿಕೊಳ್ಳದೆ ಇನ್ನೊಬ್ಬರ ತಟ್ಟೆಯಲ್ಲಿ ಬಿದ್ದಂತಹ ನೋಣವನ್ನು ನೋಡುವುದಕ್ಕೆ ಬರುವ ಡಿ ಬಸವರಾಜ್ ನಿನ್ನೆ ಮೊನ್ನೆ ಬಂದ ಬಾಲಂಗೋಚಿ ನಾಯಕರುಗಳಲ್ಲ ಕಾಂಗ್ರೆಸ್ಸಿನ ಎಮ್ಮೆಲ್ಲೆ ಟಿಕೆಟ್ ಗಳನ್ನು ಪಡೆದು ಶಾಸಕರಾದರು ಮತ್ತು ಜಿಲ್ಲಾಧ್ಯಕ್ಷರಾದ ಆದರೆ ಇಲ್ಲಿವರೆಗೂ ಸಹಿತ ಅವರ ಯೋಗ್ಯತೆಗೆ ಒಂದು ಜಿಲ್ಲಾಧ್ಯಕ್ಷ ಸ್ಥಾನ ಪಡೆಯುವುದಕ್ಕೆ ಆಗಿಲ್ಲ ಎಂದಿದ್ದಾರೆ.