ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಆಗ್ರಹಿಸಿ ಧರಣಿ

ಕೊಟ್ಟೂರು ಅ 28 :ರಾಜ್ಯದಲ್ಲಿ ಗಣ ನೀಯ ಸಂಖ್ಯೆಯಲ್ಲಿರುವ ಲಿಂಗಾಯತ ಪಂಚಮಸಾಲಿ ಸಮಾಜವು ತನ್ನದೆ ಆದ ಐತಿಹಾಸಿಕ ಪರಂಪರೆ ಹೊಂದಿದೆ, ಲಿಂಗಾಯಿತ ಪಂಚಮಸಾಲಿ ಸಮಾಜಕ್ಕೆ
2 ಎ ಮೀಸಲಾತಿ ನೀಡಬೇಕೆಂದು ಕೂಡಲಸಂಗಮ ಲಿಂಗಾಯತ ಪಂಚಮ ಸಾಲಿ ಮಹಾಪೀಠದ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು. ಬೆಳಗಾವಿಯ ಸುವರ್ಣ ಸೌಧದ ಮುಂಭಾಗ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದರು. ಕೃಷಿಯಾಧಾರಿತ ಸಮಾಜವಾಗಿರುವ ಪಂಚಮಸಾಲಿ ಸಮಾಜ ರಾಜ್ಯದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದೆ, ಸಮಾಜಕ್ಕೆ ಸಿಗಬೇಕಾದ ನ್ಯಾಯಯುತವಾದ ಬೇಡಿಕೆಯ ಕುರಿತು 2012 ರ ಡಿಸೆಂಬರ್‍ನಲ್ಲಿ ನಡೆದ ಪ್ರತಿಭಟನೆಗೆ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ ಈ ಕುರಿತು ಕ್ರಮ ಕೈಗೊಳ್ಳಲು ಸೂಚಿಸಿತಾದರೂ ಸಹ ಅದು ಅನುಷ್ಠಾನ ಗೊಳ್ಳಲಿಲ್ಲ, ಈಗಲಾದರೂ ಸಮಾಜದ ಬೇಡಿಕೆಗೆ ಸ್ಪಂದಿಸಬೇಕು, ಇಲ್ಲದಿದ್ದರೆ ಮಾಡು ಇಲ್ಲವೇ ಮಡಿ ಎಂಬ ನಿಟ್ಟಿನಲ್ಲಿ ಆಮರಣ ಉಪವಾಸದಂತಹ ಉಗ್ರ ಸ್ವರೂಪದ ಹೋರಾಟವನ್ನು ಬರುವ ದಿನಗಳಲ್ಲಿ ಕೈಗೊಳ್ಳಲಾಗುವದೆಂದು ಪೂಜ್ಯರು ಸರಕಾರಕ್ಕೆ ಎಚ್ಚರಿಸಿದರು.ಶಾಸಕಿಲಕ್ಷ್ಮೀಹೆಬ್ಬಾಳ್ಕರ, ಮಾಜೀ ಶಾಸಕ ನಂದಿಹಳ್ಳಿ ಹಾಲಪ್ಪ, ಕಾರ್ಯದರ್ಶಿ ಪಂಪಾಪತಿ ಅಂಗಡಿ, ಕೋನಾಪುರ ಬಸವರಾಜ
ಸಚಿವ ರಮೇಶ ಜಾರಕಿ ಹೊಳೆ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಮನವಿ ಪತ್ರಸ್ವೀಕಾರ ಮಾಡಿದರು.