ಲಿಂಗಾಯತ ನೌಕರನ ಮೇಲೆ ಹಲ್ಲೆಗೆ ಖಂಡನೆ

ಕಲಬುರಗಿ: ಸೆ.2:ಪಾಲಿಕೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಆರೋಗ್ಯ ನಿರೀಕ್ಷಕ ಧನಶೆಟ್ಟಿ ಮೇಲೆ ಹಲ್ಲೆ ಮಾಡಿದವರ ವಿರುದ್ಧಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲ ಹಂಗರಗಾ ಒತ್ತಾಯಿಸಿದ್ದಾರೆ.

ನಗರದ ವೀರಶೈವ ಕಲ್ಯಾಣ ಮಂಟಪದ ಗುರುವಾರ ನಡೆದ ಸಭೆ ನಡೆಸಿದ ಮುಖಂಡರು, ಮಹಾನಗರ ಪಾಲಿಕೆಯ ಉಪ ಆಯುಕ್ತರ ಕಚೇರಿಯಲ್ಲಿ ಹಾಗೂ ಪಾಲಿಕೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಸಮುದಾಯದ ಧನಶೆಟ್ಟಿ ಅವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ್ ಮಳಖೇಡ, ಸಂಗಮೇಶ ನಾಗೇನಹಳ್ಳಿ, ಮಂಜು ರೆಡ್ಡಿ, ಶ್ರೀಶೈಲ, ಚಂದ್ರಶೇಖರ ತಳ್ಳಳ್ಳಿ, ರವಿ ಬಿರಾದಾರ, ಶಿವಪುತ್ರಪ್ಪ ಡೆಂಕಿ, ಜಗನ್ನಾಥ ಪಟ್ಟಣಶಟ್ಟಿ, ಶರಣು ಖಾನಾಪುರ ಇದ್ದರು.