ಲಿಂಗಾಯತ ಧರ್ಮ ಮಾನ್ಯತೆ ಕೇಳುವುದು ಧರ್ಮ ವಿಭಜನೆ-ರಾಷ್ಟ್ರದ್ರೋಹ ಕೆಲಸವಲ್ಲ: ಪಾಟೀಲ

ಆಳಂದ:ಎ.5: ಲಿಂಗಾಯತ ಧರ್ಮ ಮಾನ್ಯತೆ ಕೇಳುವುದು ಧರ್ಮ ವಿಭಜನೆ ಅಥವಾ ರಾಷ್ಟ್ರದ್ರೂಹದ ಕೆಲಸವಲ.್ಲ ನೆಲಮೂಲದ ಜನರನ್ನು ಒಗ್ಗೂಡಿಸಿ ಇದೊಂದು ರಾಷ್ಟ್ರಕಟ್ಟುವ ಕೆಲಸವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಸಂಚಾಲಕ ಜೆ.ಎಸ್.ಪಾಟೀಲ ಬಿಜಾಪೂರ ಅವರು ಇಂದಿಲ್ಲಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಜಾಗತಿಕ ಲಿಂಗಾಯತ್ ಮಹಾಸಭಾ ತಾಲೂಕು ಘಟಕ ಆಯೋಜಿಸಿದ್ದ ಒಂದು ದಿನದ ಶರಣರ ಚಿಂತನ ಗೋಷ್ಠಿಯ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಲಿಂಗಾಯತ ಧರ್ಮದ ಮಾನ್ಯತೆಯ ಬೇಡಿಕೆಯ ಸಂವಿಧಾನ ಬದ್ಧ ಹಕ್ಕಾಗಿದೆ. ಇದರ ಹೋರಾಟವೂ ರಾಷ್ಟ್ರೀಯತೆ ಮತ್ತು ಧರ್ಮ ಹೆಸರಿನಲ್ಲಿ ದೇಶದ ಜನರನ್ನು ವಿಭಜನೆ ಮಾಡುವ ಶಕ್ತಿಗಳ ವಿರುದ್ಧ ನೆಲಮೂಲದ ಎಲ್ಲ ಜನರನ್ನು ಒಗ್ಗೂಡಿಸುವ ಕೆಲಸವಾಗಿದೆ ಎಂಬುದು ವಿರೋಧಿಗಳು ಅರಿತುಕೊಳ್ಳಬೇಕು ಎಂದು ಹೇಳಿದರು.

ಸಮಾನತೆ, ನ್ಯಾಯ ಬಂಧುತ್ವ ಸಾಮರಸ್ಯದಿಂದ ಕಾಯಕ ದಾಸೋಹದಿಂದ ತತ್ವಗಳಾದರ ಮೇಲೆ ಕೂಡಿದ ಲಿಂಗಾಯತ್ ಧರ್ಮವೂ ವೈಚಾರಿಕೆ ತಳಹದ್ದಿಯ ಮೇಲೆ ನಿಂತುಕೊಂಡಿದೆ. ಲಿಂಗಾಯತ್ ಹೋರಾಟ ಆರಂಭಕ್ಕೆ ಬಹುದೊಡ್ಡ ಇತಿಹಾಸವಿದೆ. ಇಂದಿನ ಅವಶಕತೆ ಮನಗಂಡು ಇದರ ಸಂಘಟನೆ ವಿಸ್ತಾರಗೊಳ್ಳುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಕರ್ನಾಟಕದ ಏಕೀಕರಣದಲ್ಲಿ ಲಿಂಗಾಯತ ಜನಾಂಗವು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಸಾಲದಕ್ಕೆ ರಾಜ್ಯದಲ್ಲಿ ಸರ್ವವ್ಯಾಪಿಯಾಗಿ ಶಿಕ್ಷಣದ ಮುಖ್ಯವಾಹಿನಿಗೆ ಬರಲು ಲಿಂಗಾಯತ ಮಠಗಳು ಮತ್ತು ಶಿಕ್ಷಣ ಸಂಸ್ಥೆಗಳ ಹುಟ್ಟುಹಾಕಿದ ಪರಿಶ್ರಮದಿಂದಲೇ ನಾಡು ಉನ್ನತಕ್ಕೆರಲು ಸಾಧ್ಯವಾಗಿದೆ. ಲಿಂಗಾಯತ್ ರಾಷ್ಟ್ರೀಯವಾದಿ ಧರ್ಮವಾಗಿದೆ. ಭಾರತದ ಸಮಗ್ರತೆ ಮತ್ತು ಏಕತೆಗಾಗಿ ಶ್ರಮಿಸಿದ ಧರ್ಮವಾಗಿದೆ. ಈ ಧರ್ಮದ ಅಪಪ್ರಚಾರಕ್ಕೆ ಕಿವಿಗೊಡದೆ ಸಮಾನ ಮನಸ್ಕರರು ಒಗ್ಗಟ್ಟಿನಿಂದ ಮುನ್ನೆಡೆಯಬೇಕು ಎಂದು ಸಲಹೆ ನೀಡಿದರು.

ನ್ಯಾಯವಾದಿ ಸುಭಾಷ ಕೋಳಿ ಮಾತನಾಡಿ, ಶರಣರ ವೈಚಾರಿಕ ಚಿಂತನೆಗಳು ಮೈಗೂಡಿಸಿಕೊಂಡಾಗ ಸಮಾಜದಲ್ಲಿ ಸಾಮರಸ್ಯ ಶಾಂತಿ ಸಮಾನತೆ ಬರಲು ಸಾಧ್ಯವಿದೆ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಪಿ.ಎಸ್. ಮಹಾಗಾಂವಕರ್ ಅವರು ಮಾತನಾಡಿ, ಮಹಾಸಭಾ ಕಾರ್ಯವನ್ನು ಮುನ್ನೆಡೆಸಲು ಕಾರ್ಯಕರ್ತರು ಸಂಘಟಿತವಾಗಿ ಶ್ರಮಿಸಬೇಕು ಎಂದರು.

ಉಸ್ತುರಿ, ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮೀಜಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಅಧ್ಯಕ್ಷ ರಮೇಶ ಲೋಹಾರ, ಎಸ್.ಎಂ. ದುಲಂಗೆ ಪಡಸಾವಳಿ ಮತ್ತಿತರರು ಮಾತನಾಡಿದರು.

ಪಡಸಾವಳಿಯ ಶಿªಲಿಂಗಪ್ಪ ಚಾರೆ, ವಿಜಯಕುಮಾರ ಕೋರೆ, ಸಿದ್ಧಲಿಂಗ ಗುತ್ತೇದಾರ, ಪಂಡಿತ ಬಳಬಟ್ಟಿ, ಮಹಾದೇವ ಪೂಜಾರಿ, ಎಸ್.ಬಿ. ಪಾಟೀಲ, ಅಂಬರಾಯ ಚಲಗೇರಿ, ಗ್ರಾಪಂ ಸದಸ್ಯ ವೀರಭದ್ರ ಖೂನೆ, ಶೋಭಾ ಎಸ್. ಹತ್ತಿ ಮತ್ತಿತರು ಪಾಲ್ಗೊಂಡಿದ್ದರು.

ಕಲ್ಯಾಣಿ ತುಕಾಣಿ ನಿರೂಪಿಸಿದರು. ಜಿಪಂ ಮಾಜಿ ಸದಸ್ಯ ಪೂಜಾ ಲೋಹಾರ ಸ್ವಾಗತಿಸಿ ವಂದಿಸಿದರು.