ಲಿಂಗಾಯತರ ಹೆಸರಲ್ಲಿ ವರಿಷ್ಠರಿಗೆ ಬ್ಲ್ಯಾಕ್ ಮೇಲ್ ಸಿಎಂ ರಾಜೀನಾಮೆಗೆ ಯತ್ನಾಳ್ ಆಗ್ರಹ

ವಿಜಯಪುರ , 13- ಸಿಎಂ ವೀರಶೈವ ಲಿಂಗಾಯಿತರ ಹೆಸರಿನಲ್ಲಿ ಕೇಂದ್ರ ನಾಯಕರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಮನಸ್ಲಿಲ್ಲದಿದ್ದರೂ ಸಚಿವ ಸಂಪುಟಕ್ಕೆ ಮೂರು ಜನರನ್ನು ಸೇರಿಸಿಕೊಳ್ಳಲು ಅನುಮತಿ ನೀಡಿದ್ದಾರೆ. ಹೀಗಾಗಿ ಹೈಕಮಾಂಡ್​ ಗೆ ಬ್ಲ್ಯಾಕ್​ಮೇಲ್​ ಮಾಡಿದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.
ಇತ್ತೀಚೆಗಷ್ಟೆ ಬಹಿಂರಗ ಹೇಳಿಕೆ ನೀಡದಂತೆ ವರಿಷ್ಠರು ಸೂಚನೆ ನೀಡಿದ್ದರೂ ಸಂಪುಟ ವಿಸ್ತರಣೆ ಬೆನ್ನಲ್ಲೇ ಸ್ಪೋಟಕ ಹೇಳಿಕೆ ನೀಡಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲ್ಯಾಕ್ ಮೇಲ್ ಮಾಡುವವರನ್ನು ಸಿಎಂ ಸಚಿವರನ್ನಾಗಿ ಮಾಡಿದ್ದಾರೆ. ಒಬ್ಬರು ಸಂಸದೀಯ ಕಾರ್ಯದರ್ಶಿಯಾಗಿದ್ದಾರೆ, ಇನ್ನಿಬ್ಬರು ಸಚಿವರಾಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಮೂರೂ ಜನ ಮೂರು ತಿಂಗಳ ಹಿಂದೆ ತಮ್ಮನ್ನು
ಭೇಟಿ ಮಾಡಿ ನೀವಾದರೂ ಸಿಎಂ ಆಗಿ
ನಮಗಾದರೂ ಅವಕಾಶ ನೀಡಿ. ನೂರಾರು ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ತಿಳಿಸಿದ್ದರು.
ಅಂದೇ ನಾನು ಆಶ್ಚರ್ಯ ಪಟ್ಟಿದ್ದೆ. ಯಡಿಯೂರಪ್ಪ ರಕ್ತ ಸಂಬಂಧಿ, ಅವರ ಮೊಮ್ಮಗ ವಿಎಸ್​ಟಿ ಎಂದು ಹೇಳುತ್ತಿದ್ದರು. ಆ ಮೂರೂ ಜನರ ಹೆಸರು ಹೇಳುವುದಿಲ್ಲ
ಎಂದು ಅಚ್ಚರಿ ಮೂಡಿಸಿದರು.