
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.04: ನಗರದ ಕಪ್ಪಗಲ್ಲು ರಸ್ತೆಯಲ್ಲಿನ ವೀರಶೈವ ಸಮುದಾಯದ ಮುಖಂಡ ಕೋಳೂರು ಮಲ್ಲಿಕಾರ್ಜುನಗೌಡ ಅವರ ನಿವಾಸದಲ್ಲಿ ಇಂದು ಲಿಂಗಾಯತ ಸಮುದಾಯದ ಮುಖಂಡರ ಸಭೆಯಲ್ಲಿ ತಮ್ಮ ಪುತ್ರ ಭರತ್ ರೆಡ್ಡಿ ಮತ ನೀಡುವಂತೆ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಮನವಿ ಮಾಡಿದ್ದಾರೆ.
ಮಗನ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ನಾರಾಯಣ ರೆಡ್ಡಿ ಅವರು. ನಿನ್ನೆ ವಿಶಾಲನಗರ ನಿವಾಸ ಒಂದರಲ್ಲಿ ಉದ್ಯಮಿಗಳ ಸಭೆ ನಡೆಸಿ ಭರತ್ ಗೆ ಮತ ನೀಡಿ ಆಯ್ಕೆ ಮಾಡಿ ನಗರದಲ್ಲಿನ ಉದ್ಯಮಗಳ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಿದೆಂದರು.
ಇನ್ನು ಇಂದು ಬೆಳಿಗ್ಗೆ ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಖಜಾಂಚಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಕೋಳೂರು ಮಲ್ಲಿಕಾರ್ಜುನಗೌಡ ಅವರ ಮನೆಯಲ್ಲಿ ಸಭೆ ನಡೆಸಿ. ಲಿಂಗಾಯತ ಸಮುದಾಯದ ಬಗ್ಗೆ ನಮ್ಮ ವಿರೋಧಿ ಭಾವನೆ ಇದೆ ಎಂಬ ಆರೋಪಗಳಿಗೆ ಕಿವಿಗೊಡಬೇಡಿ. ಎಲ್ಲರನ್ನು ಸಮಾನಭಾವದಿಂದ ಕಾಣುತ್ತೇವೆ ಇದಕ್ಕೆ ಸಂಶಯ ಬೇಡ, ಯುವಕ ಭರತ್ ಗೆ ಮತ ನೀಡಿ ಆಯ್ಕೆ ಮಾಡಿ ಎಂದರು
ಸಮುದಾಯದ ಮುಖಂಡರು ಮತ ನೀಡುವ ಭರವಸೆ ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಆಂದ್ರ ಪ್ರದೇಶದ ಅಧ್ಯಕ್ಷ ದಂಡಿನ ಶಿವಾನಂದ, ಭಾರತೀಯ ಲೆಕ್ಕ ಪರಿಶೋಧಕರ ಸಂಘದ ದಕ್ಷಿಣ ಪ್ರಾಂತೀಯ ಘಟಕದ ಅಧ್ಯಕ್ಷ ಸಿರಿಗೇರಿ ಪನ್ನರಾಜ್, ಜಾನೆಕುಂಟೆ ಬಸವರಾಜ್, ಬಣಾಪುರ ಮಲ್ಲಿಕಾರ್ಜುನಗೌಡ ಸೇರಿದಂತೆ ಅನೇಕ ಜನ ಸಮುದಾಯದ ಮುಖಂಡರು ಇದ್ದರು.