
ಬೀದರ್,ಮೇ.16: 2023ರ ವಿಧಾನ ಸಭೆ ಸಾರ್ವತ್ರೀಕ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಪ್ರಚಂಡ ಬಹುಮತದಿಂದ ಗೆದ್ದು 224 ಸ್ಥಾನಗಳಲ್ಲಿ 135 ಸ್ಥಾನಗಳು ಗಳಿಸಿ ನಿಚ್ಚಳ ಬಹುಮತ ಪಡೆದಿದೆ. ಲಿಂಗಾಯತ ಸಮುದಾಯ ಕಾಂಗ್ರೇಸ್ ಅಭ್ಯರ್ಥಿಗಳಿಗೆ ಬೆಂಬಲಿಸಿ ಗೆಲ್ಲಿಸಿರುವುದರಿಂದ ಮುಖ್ಯಮಂತ್ರಿ ಸ್ಥಾನವನ್ನು ಲಿಂಗಾಯತ ಸಮುದಾಯದ ವ್ಯಕ್ತಿಗಳಿಗೆ ನೀಡಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ರಾಷ್ಟ್ರೀಯ ಬಸವದಳದ ಅಧ್ಯಕ್ಷರಾದ ಬಸವರಾಜ ಧನ್ನೂರ ಅವರು ಬೀದರ ನಗರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಹೈಕಮಾಂಡಿಗೆ ಒತ್ತಾಯಿಸಿದರು.
ಈ ಸಲದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ವರಿಷ್ಠರು 51 ಲಿಂಗಾಯತ ಅಭ್ಯರ್ಥಿಗಳಿಗೆ ಟೀಕೇಟ್ ನೀಡಿದರು. ಅವರಲ್ಲಿ 39 ಜನ ಲಿಂಗಾಯತರು ಮತ್ತು ಇಬ್ಬರು ರೆಡ್ಡಿ ಲಿಂಗಾಯತರು ಜಯ ಸಾಧಿಸಿದ್ದು, ಹೀಗೆ 41 ಜನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಹೆಚ್ಚಿನ ಸಂಖ್ಯೆ ಹೊಂದಿರುವ ಲಿಂಗಾಯತ ಶಾಸಕರಲ್ಲಿ ಕೆಲವು ಹಿರಿಯರು ಮಾಜಿ ಸಚಿವರರಾಗಿದ್ದಾರೆ. ಅವರಲ್ಲೋಬ್ಬರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ಎಂದ ಅವರು ಈ ಹಿಂದೆ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ನಂತರ ಮುಖ್ಯಮಂತ್ರಿಗಳ ಸ್ಥಾನಕ್ಕೆ ಯಾವುದೇ ಲಿಂಗಾಯತ ವ್ಯಕ್ತಿಗಳು ಆಯ್ಕೆಗೊಂಡಿರಲಿಲ್ಲ. ಪಕ್ಷಕ್ಕೆ ಬಹುಮತದಿಂದ ಬೆಂಬಲಿಸಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಗೆಲ್ಲಿಸಿರುವುದರಿಂದ ಸಿಎಂ ಸ್ಥಾನ ನೀಡಬೇಕೆಂದು ಲಿಂಗಾಯತ ಸಮಾಜ ಅಧ್ಯಕ್ಷ ಕುಶಾಲರಾವ ಪಾಟೀಲ ಖಾಜಾಪೂರ ಅವರು ಕಾಂಗ್ರೇಸ್ ವರಿಷ್ಠರಿಗೆ ಆಗ್ರಹಿಸಿದರು. ಸಚಿವ ಸಂಪುಟದಲ್ಲಿ 15 ಜನ ಲಿಂಗಾಯತರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಲಿಂಗಾಯತ ಸಮಾಜದ ಯುವ ಮುಖಂಡರಾದ ಬಸವರಾಜ ಭತಮುರ್ಗೆ,
ಪ್ರತಿಕಾ ಗೋಷ್ಠಿಯಲ್ಲಿ ಲಿಂಗಾಯತ ಸಮಾಜದ ಯುವ ಮುಖಂಡರಾದ ಬಸವರಾಜ ಭತಮುರ್ಗೆ, ರವಿ ಪಾಪಡೆ, ವೀರಶೆಟ್ಟಿ ಪಾಟೀಲ ಮರಕಲ್, ಚನ್ನಬಸವ ಜನವಾಡಾ ಅವರುಗಳು ಉಪಸ್ಥಿತರಿದ್ದರು.