ಲಿಂಗಾಯತರಿಗೆ ಮೀಸಲಾತಿ ಹೆಚ್ಚಳ 2ಡಿಗೆ ಸೇರ್ಪಡೆ: ವಿಜಯೋತ್ಸವ

ಚಾಮರಾಜನಗರ, ಮಾ.27:- ಲಿಂಗಾತರಿಗೆ ಇದುವರೆಗೆ ನೀಡುತ್ತಿದ್ದ ಮೀಸಲಾತಿ ಪ್ರಮಾಣವನ್ನು ರಾಜ್ಯ ಸರ್ಕಾರ ಏರಿಕೆ ಮಾಡಿ, ಶೇ. 7 ರಷ್ಟು ಮೀಸಲಾತಿ ನೀಡಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 2ಡಿಗೆ ಲಿಂಗಾಯತರನ್ನು ಸೇರ್ಪಡೆ ಮಾಡಿಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ನಗರದಲ್ಲಿ ಇಂದು ಗೌಡ ಲಿಂಗಾಯತ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಅಮ್ಮನಪುರ ಮಲ್ಲೇಶ್ ನೇತೃತ್ವದಲ್ಲಿ ಇಂದು ನಗರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಲಾಯಿತು.
ನಗರದ ಶ್ರೀಮಠದ ಮುಂಭಾಗ ಸಮಾವೇಶಗೊಂಡು ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಯುವಕರು ಹೋರಾಟ ನೇತೃತ್ವದ ವಹಿಸಿದ್ದ ಬಸವ ಜಯ ಮೃತ್ಯುಂಜಯಸ್ವಾಮಿ, ಬಸವನಗೌಡ ಪಾಟೀಲ್ ಯತ್ನಾಳ್, ವಿಜಯನಂದ ಕಾಶಪ್ಪನವರ್ ಪರ ಹಾಗೂ ಮೀಸಲಾತಿಯನುಜಾರಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಪರ ಘೋಷಣೆಗ¼ನ್ನು ಕೂಗಿದರು. ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಮ್ಮನಪುರ ಮಲ್ಲೇಶ್, ಅಂದರೆಗೌಡ ಲಿಂಗಾಯಿತ ದಿಕ್ಷೆ ಲಿಂಗಾಯತ ಮಲ್ಲೇಗೌಡ ಲಿಂಗಾಯಿತ ಸಮಾಜದ ಪಂಚಮಸಾಲಿ ಹಾಗೂ ಕೂಡಲಸಂಗಮ ಪೀಠದಧರ್ಮ ಗುರುಗಳಾದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಹಾಗೂ ಶಾಸಕರಾದ ಬಸವರಾಜ ಪಾಟೀಲ್ ಯತ್ನಾಳ್, ವಿಜಯನಂದಕಾಶಪ್ಪನವರ್‍ಸೇರಿದಂತೆ ಅನೇಕ ನಾಯಕರ ಮುಂಚೂಣಿ ನಾಯಕತ್ವದಲ್ಲಿ ನಡೆದ ಹೋರಾಟಕ್ಕೆ ಕೊನೆಗೂ ಜಯದೊರೆತಿದೆ. ಸ್ವಾಮೀಜಿಗಳು ಕಳೆದ ಎರಡು ವರ್ಷಗಳಿಂದಲೂ ಪಾದಯಾತ್ರೆ ಧರಣಿ ವಿಧಾನಸೌಧ ಮುತ್ತಿಗೆಯಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಪರಿಣಾಮವಾಗಿ ರಾಜ್ಯ ಸರ್ಕಾರ ಕೊನೆಗೂ ಮೀಸಲಾತಿಯನ್ನು ಮಾರ್ಪಡಿಸಿ ಲಿಂಗಾಯಿತರಿಗೆ 3ಬಿ ಬದಲಿಗೆ 2ಡಿ ರಚಿಸಿ ಶೇಕಡ 5 ರಿಂದ 7 ಕ್ಕೆ ಏರಿಕೆ ಮಾಡುವ ಮೂಲಕ ಬಡ ಲಿಂಗಾಯತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಈ ಮೀಸಲಾತಿ ಹೆಚ್ಚಳದಿಂದ ಬಡ ಲಿಂಗಾಯಿತರ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ಅನುಕೂಲ ಮಾಡಿಕೊಡುವುದರ ಮೂಲಕ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಕೈಗೊಂಡುಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಲಿಂಗಾಯತರ ಮೀಸಲಾತಿ ಹೋರಾಟಫಲವಾಗಿ ಎಲ್ಲಾ ವರ್ಗದವರಜನರಿಗೆ ನ್ಯಾಯದೊರೆತಿದೆ. ಬಸವರಾಜ ಬೊಮ್ಮಾಯಿಅವರುಎಲ್ಲಾ ವರ್ಗದವರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದ್ದಾರೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಲಿಂಗಾಯತರಿಗೆ ಮೀಸಲಾತಿಗಾಗಿ ಹೋರಾಟ ಮಾಡಿದ ಮೃತ್ಯುಂಜಯ ಸ್ವಾಮೀಜಿ, ಬಸನಗೌಡ ಪಾಟೀಲ್ ಯತ್ನಾಳ್, ಕಾಶಪ್ಪ ಅವರನ್ನು ಜಿಲ್ಲೆಗೆ ಆಹ್ವಾನಿಸಿ, ದೊಡ್ಡ ಅಭಿನಂದನೆ ಸಮಾರಂಬವನ್ನು ಆಯೋಜನೆ ಮಾಡೋಣ. ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ, ಲಿಂಗಾಯತರುದೊಡ್ಡ ಮಟ್ಟದ ಸಮಾವೇಶವನ್ನು ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಬಂಧುಗಳು ಹೋಗಬೇಕು ಎಂದು ಮಲ್ಲೇಶ್ ಮನವಿ ಮಾಡಿದರು.
ವಿಜಯೋತ್ಸವದಲ್ಲಿ ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್, ಮುಖಂಡರಾದ ಕುದೇರು ರಾಜೇಂದ್ರ, ಬೇಡರಪು ಬಸವಣ್ಣ, ಆರ್.ವಿ. ಮಹದೇವಸ್ವಾಮಿ, ದಯಾನಿಧಿ, ಭೋಗಾಪುರಕುಮಾರಸ್ವಾಮಿ, ನಟರಾಜು, ಕೊತ್ತಲವಾಡಿ ಕುಮಾರ್, ಗೌಡಿಕೆ ನಾಗೇಶ್, ವೀರನಪುರ ಮಹಾಲಿಂಗಪ್ಪ, ಕಾಳನಹುಂಡಿ ಮಹದೇವಸ್ವಾಮಿ, ನಾಗೇಂದ್ರ, ದಡದಹಳ್ಳಿ ಮಹದೇವಪ್ಪ, ಕಾವುದವಾಡಿಗುರು, ಮರಿಯಾಲ ಮಹೇಶ್, ಹಿರಿಬೇಗೂರು ಗುರುಸ್ವಾಮಿ, ತೊರವಳ್ಳಿ ಕುಮಾರ್, ಕಾಗಲವಾಡಿ ಮಹೇಶ್, ಮಹದೇವಸ್ವಾಮಿ ಮೊದಲಾದವರು ಇದ್ದರು.