ಲಿಂಗಾಯತರನ್ನು ಮೂಲೆಗುಂಪು ಮಾಡಿದ ಬಿಜೆಪಿಗೆ ತಕ್ಕ ಪಾಠ

ಚಿಂಚೋಳಿ,ಏ.25- ಕಳೆದ 2008 ರಲ್ಲಿ ಚಿಂಚೋಳಿ ವಿಧಾನ ಸಭಾ ಮತಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ನಂತರ, ಇಲ್ಲಿನ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷವು ಒಬ್ಬ ಲಿಂಗಾಯತರನ್ನು ಕಲಬುರಗಿ ಜಿಲ್ಲಾ ಪಂಚಾಯತಗೆ ಆರಿಸಿ ತರದೇ ಲಿಂಗಾಯತ ಸಮಾಜದ ಮುಖಂಡರನ್ನು ಮೂಲೆಗುಂಪು ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಶರಣು ಪಾಟೀಲ ಮೋತಕಪಲ್ಲಿ ಅವರು ಇಂದಿಲ್ಲಿ ಹೇಳಿದರು.
ಪಟ್ಟಣದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಸಮುದಾಯಕ್ಕೆ ಈ ಕ್ಷೇತ್ರದಲ್ಲಿ ರಾಜಕೀಯ ನೆಲೆ ಕೊಟ್ಟ ಪಕ್ಷ ಯಾವುದಾದರೂ ಇದ್ದಾರೆ ಅದು ಕಾಂಗ್ರೆಸ್ ಮಾತ್ರ ಎಂದರು.
ಕಾಂಗ್ರೆಸ್ ಪಕ್ಷದಿಂದ ಸಮಾಜದ ಪ್ರಮುಖರಾದ ಗೌತಮ ಪಾಟೀಲ, ಮತ್ತು ದೀಪಕನಾಗ ಪುಣ್ಯಶೆಟ್ಟಿ, ನಿಂಬೇನಪ್ಪ ಮಂಗಳಗಿ, ಬಸವರಾಜ ಪಾಟೀಲ ಹೇರೂರು, ರಾಜಶೇಖರ್ ತಿಮ್ಮನಯಕ್, ಇವರೆಲ್ಲರನ್ನು ಜಿಲ್ಲಾ ಪಂಚಾಯತ್ ಗೆ ಆರಿಸಿ ಬಂದರು. ಆದರೆ ಬಿಜೆಪಿ ಟಿಕೆಟ್ ಪಡೆದು ಸೋತವರು ಶಶಿಧರ್ ಸೋಗುರ, ಮಲ್ಲಿಕಾರ್ಜುನ್ ಪಾಟೀಲ್ ಹುಲಗೆರ, ರೇಖಾ ಜಗದೀಶ್ ಪಾಟೀಲ್ ಕಾಳಗಿ, ಶಶಿಕಲಾ ತೇಂಗಳಿ, ಬಸವರಾಜ ಶಿವಗೊಳ್ ಎಂದು ವಿವರಿಸಿದರು.
ಬಿಜೆಪಿ ಪಕ್ಷ ನಮ್ಮ ಕ್ಷೇತ್ರದಲ್ಲಿ ಲಿಂಗಾಯತರನ್ನು ಸುಳ್ಳು ಆಶ್ವಾಸನೆ ಕೊಟ್ಟು ಬಲಿಪಶು ಮಾಡುತ್ತಿದ್ದು, ಕೇವಲ ನಮ್ಮನ್ನು ಉಪಯೋಗಿಸಿ ಒಗೆಯುವ ಪರಿಪಾಠ ಹಾಕಿಕೊಂಡಿದೆ ಎಂದು ಹರಿಹಾಯ್ದರು.
ಲಿಂಗಾಯತ ಸಮುದಾಯದ ಬಗ್ಗೆ ಕಾಳಜಿ ಇರೋದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ, ದಿವಂಗತ ವೀರೇಂದ್ರ ಪಾಟೀಲ ಹಾಗೂ ದಿವಂಗತ ವೈಜನಾಥ ಪಾಟೀಲ ಅವರಂತಹ ರಾಜ್ಯ, ರಾಷ್ಟ್ರದಲ್ಲಿ ವಿಶೇಷ ಸ್ಥಾನಮಾನ ಹಾಗೂ ಕಾರ್ಯಗಳಿಂದ ಹೆಸರುವಾಸಿ ಯಾದ ಲಿಂಗಾಯತ ನಾಯಕರನ್ನು ಕೊಟ್ಟಂತ ಈ ಕ್ಷೇತ್ರದಲ್ಲಿ ಒಂದು ರಾಷ್ಟ್ರೀಯ ಪಕ್ಷ ಬಿಜೆಪಿಯು ಜಿಲ್ಲಾ ಪಂಚಾಯತ ಇತಿಹಾಸದಲ್ಲಿ ಬಹುಸಂಖ್ಯಾತ ಸಮುದಾಯದ ಲಿಂಗಾಯತ ಒಬ್ಬ ವ್ಯಕ್ತಿಯನ್ನು ಜಿಲ್ಲಾ ಪಂಚಾಯತಗೆ ಕಳಿಸಿಲ್ಲ ಯಾವ ಮುಖ ಹೊತ್ತು ನಮ್ಮ ಮತ ಕೇಳುತ್ತಾರೆ? ಅವರಿಗೆ ನಾಚಿಕೆ ಬರಬೇಕು. ನಾವು ಲಿಂಗಾಯತರು ಯಾರ ಸ್ವತ್ತು ಅಲ್ಲ, ಬಿಜೆಪಿಯವರೇ ಮುಂದಿನ ದಿನಗಳಲ್ಲಿ ತಾವು ಲಿಂಗಾಯತ ಸಮುದಯಕ್ಕೆ ಮಾಡಿದ ಅನ್ಯಾಯವನ್ನು ಮನೇ ಮನೆಗೆ ಹೋಗಿ ಮನವರಿಕೆ ಮಾಡಿಕೊಂಡು ನಿಮಗೆ ಲಿಂಗಾಯತರ ಶಕ್ತಿಯನ್ನು ತೋರಿಸಿಕೊಡಲಾಗುವುದು ಎಂದರು.
ಬಿಜೆಪಿಯ ಸುಳ್ಳು ಆಶ್ವಾಸನೆಯ ರಾಜಕೀಯ ಇನ್ನೂ ಮುಂದೆ ಇಲ್ಲಿ ನಡೆಯೋಲ್ಲ, ಜಾಗೊ ಲಿಂಗಾಯತ ಜಾಗೊ ಬಿಜೆಪಿ ಹಟಾವೋ ಸಬಕ್ ಸಿಕವೋ. ಎಂದು ಶರಣು ಪಾಟೀಲ ಮೋತಕಪಲ್ಲಿ ಅವರು ಸಮಾಜಕ್ಕೆ ಕರೆ ನೀಡಿದರು.