ಲಿಂಗಸೂಗೂರು ಕ್ಷೇತ್ರ ಮಾದಿಗರಿಗೆ ಟಿಕೆಟ್ ಗೆ ಆಗ್ರಹ

ರಾಯಚೂರು, ಏ.೬- ಪರಿಶಿಷ್ಟ ಜಾತಿಗೆ ಮೀಸಲಾದ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಮಾದಿಗ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಿಜೆಪಿ ಸಹಕಾರಿ ಪ್ರಕೋಷ್ಠದ ಸಂಚಾಲಕ ವಿರುಪಾಕ್ಷಪ್ಪ ಪತ್ತೇಪೂರು ಆಗ್ರಹಿಸಿದರು.ಲಿಂಗಸೂಗೂರು ಮೀಸಲು
ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಬಹುಸಂಖ್ಯಾತರಾದ ಮಾದಿಗ ಸಮುದಾಯಕ್ಕೆ
ಟಿಕೆಟ್ ನೀಡುವ ಮೂಲಕ ನ್ಯಾಯ ಒದಗಿಸಬೇಕು. ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮಾಜದ ಮತದಾರರು ಇದ್ದರೂ ಕೂಡ ಸ್ಪಶ್ಯ
ಸಮುದಾಯಗಳಿಗೆ ಟಿಕೆಟ್ ನೀಡಿ ಮಾದಿಗ ಸಮುದಾಯಕ್ಕೆಮೋಸಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೩.೧೧ ಲಕ್ಷ ಮಾದಿಗ ಸಮಾಜದ ಮತದಾರರು ಇದ್ದಾರೆ. ಮಾದಿಗರಿಗೆ ರಾಜಕೀಯ ಪ್ರಾತಿನಿಧ್ಯ ನೀಡದೆ ಉದ್ದೇಶಪೂರ್ವಕವಾಗಿಯೇ ವಂಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಭಾರೀಯಾದರೂ ಬಹುಸಂಖ್ಯಾತರಾದ ಮಾದಿಗರಿಗೆ ಟಿಕೆಟ್ ನೀಡಿ ನ್ಯಾಯ ಒದಗಿಸಬೇಕೆಂದು ವಿರುಪಾಕ್ಷಪ್ಪ ಪತ್ತೇವೂರು ಅವರು ಮನವಿ ಮಾಡಿದ್ದಾರೆ.