ಲಿಂಗಸುಗೂರು ವಿಧಾನ ಸಭಾ ಕ್ಷೇತ್ರಕ್ಕೆ ಸುರೇಶ್ ಕೋರೆಗೆ ಬಿಜೆಪಿ ಟಿಕೆಟ್ ನೀಡಲು ಒತ್ತಾಯ.

ಲಿಂಗಸುಗೂರು,ಮಾ.೧೦-
ಲಿಂಗಸುಗೂರು ತಾಲ್ಲೂಕಿನ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಯುವ ನಾಯಕ ಮಾದಿಗ ಸಮುದಾಯಕ್ಕೆ ಸೇರಿದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿ ಸುರೇಶ್ ಕೋರೆ ಇವರಿಗೆ ಬಿಜೆಪಿ ಪಕ್ಷದ ಟಿಕೇಟ್ ಕೊಡಬೇಕು ಎಂದು ಒತ್ತಾಯಿಸಿ ಬಿಜೆಪಿ ನಾಯಕರಿಗೆ ನೇಮರಾಜ ನಾಯಕ ಇವರು ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿ ಪಕ್ಷದ ನಾಯಕರು ಯುವ ಜನಾಂಗಕ್ಕೆ ರಾಜಕೀಯ ಸ್ಥಾನಮಾನ ನೀಡಲು ಲಿಂಗಸುಗೂರು ಮೀಸಲು ಕ್ಷೇತ್ರದಲ್ಲಿ ದಲಿತ ಅಸ್ಪುಶ್ಯರು ಜನಾಂಗದವರಿಗೆ ಸಾಮಾಜಿಕ ಪರಿಕಲ್ಪನೆ ಅಡಿಯಲ್ಲಿ ಶೋಷಣೆಗೊಳಗಾದ ಜನರಾದ ಎಡಗೈ ಸಮುದಾಯಕ್ಕೆ ಸೇರಿದ ಸುರೇಶ್ ಕೋರೆಗೆ ಪಕ್ಷದ ಹೈಕಮಾಂಡ್ ಮುಂದಿನ ಚುನಾವಣೆಯಲ್ಲಿ ಸಂವಿಧಾನದ ಪ್ರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಿದ್ರೆ ಪಕ್ಷದ ಗೆಲುವಿಗೆ ಸಹಕಾರಿಯಾಗುತ್ತದೆ ಎಂದರು.
ಸುರೇಶ್ ಕೋರೆಯರು ಲಿಂಗಸುಗೂರು ತಾಲ್ಲೂಕಿನ ಸರ್ವಜನಾಂಗದ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಕಾರಣ ಜನ ಸೇವೆ ಮಾಡಲಿಕ್ಕೆ ಬಂದಿದ್ದಾರೆ ಎಂದು ಲೋಕೇಶ್ ಅವರು ಹೇಳಿದರು.
ಯುವ ನಾಯಕ ಸುರೇಶ್ ಕೋರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುವ ಛಲಗಾರ ಸುರೇಶ್ ಕೋರೆಯರು ಕ್ಷೇತ್ರದಲ್ಲಿ ಯುವಕರ ಪಡೆಯನ್ನು ಕಟ್ಟಿಕೊಂಡು ಮಿಂಚಿನ ಸಂಚಲನ ಮೂಡಿಸಿರುವ ಕೋರೆಗೆ ಪಕ್ಷದ ಟಿಕೆಟ್ ನೀಡಬೇಕು ಎಂಬುದು ವಿದ್ಯಾರ್ಥಿ ಯುವ ಜನ ವೇದಿಕೆ ಯುವಕ ಮುಖಂಡರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಲಾಲಸಾಬ ಕಾರ್ತಿಕ ರಾಠೋಡ ಅಮರೇಶ ಪವಾರ್ ಪ್ರಸಾದ್ ಅನಿಲ್ ಕುಮಾರ್ ರೇಖಪ್ಪ ಚವಾಣ್ ಸಿದ್ದು ಜಾದವ್ ಬಲರಾಂ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.