ಲಿಂಗಸುಗೂರು:ಸಂತ್ರಸ್ತ ಬೈಲಪ್ಪ ಮನೆಗೆ ಅಧಿಕಾರಿ ಭೇಟಿ

ದುರಗಪ್ಪ ಹೊಸಮನಿ.
ಲಿಂಗಸುಗೂರು.ನ.೨೦-ಲಿಂಗಸುಗೂರ ತಾಲೂಕಿನ ಕಿಲ್ಲರ್ ಹಟ್ಟಿ ಗ್ರಾಮದ ಸರ್ವಾಣಿಯರ ಜನರಿಂದ ದೌರ್ಜನ್ಯಕ್ಕೆ ಒಳಗಾದ ಹಲ್ಲೆಗೆ ಈಡಾದ ದಲಿತ ಮಾದಿಗ ಸಮಾಜದ ಬೈಲಪ್ಪ ಇವರ ಮನೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರವಿ.ಎಮ್.ಅವರು ಗ್ರಾಮದ ವಾಸ್ತವ ಸ್ಥಿತಿಗತಿ ಮಾಹಿತಿ ತಿಳಿಯಲು ಭೇಟಿ ನೀಡಿ ಸಂತ್ರಸ್ತ ಬೈಲಪ್ಪ ಕುಟುಂಬಕ್ಕೆ ಸಾಂತ್ವನ ನೀಡಿ ಕುಟುಂಬಕ್ಕೆ ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಾಗ್ರಿ ಕಿಟ್‌ಗಳನ್ನು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿ.ಎಮ್. ನೀಡಿದರು.
ಹಲ್ಲೆಗೊಳಗಾದ ಸಂತ್ರಸ್ತ ಬೈಲಪ್ಪ ಕುಟುಂಬದ ಜೊತೆ ತಾಲೂಕು ದಂಡದಿಕಾರಿ ಶಂಶಾಲಂ ಮಾತುಕತೆ ನೆಡೆಸಿ ಸರಕಾರದ ಸೌಲಭ್ಯ ಒದಗಿಸಲು ತಾಲೂಕು ಆಡಳಿತ ಸಂಪೂರ್ಣವಾಗಿ ನೆರವು ನೀಡುವುದಾಗಿ ಭರವಸೆ ನೀಡಿದರು.
ತಾಲೂಕು ದಂಡಾಧಿಕಾರಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಂಟಿ ಭೇಟಿ!!
ಕಿಲ್ಲಾರಹಟ್ಟಿ ಗ್ರಾಮದ ದಲಿತ ಕುಟುಂಬಕ್ಕೆ ಅನ್ಯಾಯದ ಘಟನೆಯನ್ನು ಖಂಡಿಸಿ ತಾಲೂಕಿನಾದ್ಯಂತ ದಲಿತ ಸಂಘಟನೆಗಳು ಮಾದಿಗ ಮತ್ತು ಚಲುವಾದಿ ಒಕ್ಕೂಟದ ಮುಖಂಡರು ಕಳೆದ ಮೂರು ದಿನಗಳ ಹಿಂದೆ ಲಿಂಗಸುಗೂರ ಡಿ.ವಾಯ್.ಎಸ್.ಪಿ. ಕಚೇರಿ ಎದುರು ಧರಣಿ ಸತ್ಯಾಗ್ರಹ ನೆಡೆಸಿ ಆರೋಪಿಗಳ ಬಂಧನಕ್ಕೆ ಹಾಗೂ ಇನ್ನು ಉಳಿದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ದಲಿತರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಮುದಗಲ್ ಭಾಗದ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದು ವೈಫಲ್ಯವೇ ಪ್ರಮುಖ ಕಾರಣ ಎಂದು ಹೋರಾಟ ನಡೆಸಿ ಲಿಂಗಸುಗೂರು. ಡಿ.ವಾಯ್.ಎಸ್.ಪಿ. ಹುಲ್ಲೂರು ಅವರಿಗೆ ಮನವಿ ಸಲ್ಲಿಸಿ ಮುದಗಲ್ ಪಿ.ಎಸ್.ಐ. ಅಮಾನತ್ತಿಗೆ ಆಗ್ರಹಿಸಿದ್ದಾರೆ.
ದಲಿತ ಮುಖಂಡರ ಹೋರಾಟ ವನ್ನು ಸೂಕ್ಷ್ಮವಾಗಿ ಗಮನಿಸಿದ ತಾಲೂಕು ದಂಡಾಧಿಕಾರಿ ಹಾಗೂ ಸಮಾಜ ಕಲ್ಯಾಣ ಅಧಿಕಾರಿ. ಇವರುಗಳು ಜಂಟಿ ಭೇಟಿ ನೀಡಿದಾಗ ಬೈಲಪ್ಪನ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಲು ಮುಂದಾಗಿದ್ದಾರೆ. ಭೇಟಿ ನೀಡಿ ಮಾಹಿತಿ ಕಲೆಹಾಕಿದ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕರಿಗೆ ವರದಿ ಸಲ್ಲಿಸಲಾಗುವುದು ಎರಡು ಮೂರು ದಿನಗಳಲ್ಲಿ ಸಂತ್ರಸ್ತ ಬೈಲಪ್ಪ ಕುಟುಂಬಕ್ಕೆ ಸರಕಾರದಿಂದ ಬರುವ ಸೌಲಭ್ಯಗಳು ಹಾಗೂ ಪರಿಹಾರದ ಧನವನ್ನು ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿ.ಎಮ್. ಸಂಜೆವಾಣಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.