ಲಿಂಗಸಗೂರು:ಕಿವುಡ ಮಾಡಿದ ಕಿತಾಪತಿ ಪ್ರೇಕ್ಷಕರನ್ನು ನಕ್ಕು ನಲಿಸಿದ ಸಿದ್ದು ನಾಲತವಾಡ,ಸುಜಾತ ಗುಬ್ಬಿ

ಲಿಂಗಸಗೂರು.ನ.೧೦-ಪಟ್ಟಣದಲ್ಲಿ ವಿಶ್ವರಾಧ್ಯ ನಾಟ್ಯಸಂಘದಿಂದ ಪ್ರತಿದಿನ ನಾಟಕಗಳು ಪ್ರದರ್ಶನವಾಗುತ್ತಿದ್ದು ಅದರಲ್ಲಿ ಕಿವುಡ ಮಾಡಿದ ಕಿತಾಪತಿ ನಾಟಕದಲ್ಲಿ ಕಿವುಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹಾಸ್ಯನಟ ಸಿದ್ದು ನಾಲತವಾಡ ಹಾಗೂ ಸುಜಾತ ಗುಬ್ಬಿಯವರು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿ ನೋಡುಗರ ಮನಗೆದ್ದರು.
ಪಟ್ಟಣದ ಕಲಬುರ್ಗಿ ರಸ್ತೆಯ ಪಕ್ಕದಲಿ ಹಾಕಿರುವ ವಿಶ್ವರಾಧ್ಯ ನಾಟ್ಯಸಂಘದಲಿ ಪ್ರತಿದಿನ ಮಧ್ಯಾಹ್ನ ಮೂರಕ್ಕೆ ಹಾಗೂ ಸಂಜೆ ಆರುಮೂವತ್ತಕ್ಕೆ ಎರಡು ಪ್ರಯೋಗಗಳು ನಡೆಯುತ್ತಿದ್ದು ಈಗಾಗಲೆ ಶೆರೆ ಅಂಗಡಿ ಸಂಗವ್ವ, ಕುಂಟಕೋಣ ಮೂಕಜಾಣ ನಾಟಕಗಳು ಪ್ರದರ್ಶನವಾಗಿದ್ದು ಇದೀಗ ಕಿವುಡ ಮಾಡಿದ ಕಿತಾಪತಿ ನಾಟಕ ನಡೆಯುತ್ತಿದೆ ಇದರಲ್ಲಿ ಖ್ಯಾತ ಹಾಸ್ಯ ಕಲಾವಿದ ಸಿದ್ದು ನಾಲತವಾಡ ಕಿವುಡನ ಪಾತ್ರದಲ್ಲಿ ಹಾಗೂ ಸುಜಾತ ಗುಬ್ಬಿ ಹಾಸ್ಯ ಸಮ್ಮಿಳಿತವಾಗಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಾಡಿಸುತ್ತಾರೆ ನಾಟಕ ಪ್ರಾರಂಭದಿಂದ ಕೊನೆಯವರೆಗೂ ಅಷ್ಟೆ ಹಾಸ್ಯಭರಿತವಾಗಿ ನಗೆಚಟಾಕಿಗಳನ್ನು ಹಾರಿಸುತ್ತಾ ನೋಡುಗರನ್ನು ಸಂತಸದ ಕಡಲಿನಲ್ಲಿ ತೇಲಾಡಿಸುತ್ತಾರೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ನಾಟಕಗಳು ಬಂದ್ ಆಗಿರುವುದರಿಂದ ನಾಟಕ ಕಲಾವಿದರ ತುಂಬಾ ತೊಂದರೆಯಲ್ಲಿದ್ದರು ಇತ್ತೀಚೆಗೆ ಸ್ವಲ್ಪ ನಿರಾಳವಾಗಿರುವುದರಿಂದ ನಾಟ್ಯಸಂಘವು ಪಟ್ಟಣದಲ್ಲಿ ದಿನಾ ಎರಡು ಪ್ರಯೋಗಗಳನ್ನು ಮಾಡುತ್ತಿದ್ದು ನಾಟಕದಲ್ಲಿ ನುರಿತ ಕಲಾವಿದರಿದ್ದಾರೆ ರಾಜಣ್ಣಜೇವರ್ಗಿಯವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಸದರಿ ಕಂಪನೀಯಲ್ಲಿ ಸಜಾತ ಗುಬ್ಬಿ, ವೀರೇಶ ಬನ್ನೂರು,ಮಂಜು ದೊಡ್ಡಮನಿ, ಸಿದ್ದು ನಾಲತವಾಡ ಮಹಿಬೂಬ ಗೊಳಸಂಗಿ ಅಯ್ಯಣ್ಣಸ್ವಾಮಿ ಹಿರೇಮಠ ರಾಘವೇಂದ್ರ ಸೇರಿದಂತೆ ಹಲವಾರು ಜನ ನುರಿತ ಕಲಾವಿದರಿದ್ದಾರೆ.
ನವಂಬರ ೧೦ರಿಂದ ಮಜಾಟಾಕೀಜ್ ನ ಕಲಾವಿದೆ ನೀಲಾಜೇವರ್ಗಿಯವರು ಬರಲಿದ್ದಾರೆಂದು ಕಂಪನೀಯ ರಾಜಣ್ಣ ಜೇವರ್ಗಿಯವರು ನುಡಿಯುತ್ತಾರೆ.
ಕರೊನಾ ಸಂದರ್ಭದಲ್ಲಿ ನಾಟಕಗಳು ಬಂದ್ ಆಗಿರುವುದರಿಂದ ಕಲಾವಿದರು ತುಂಬಾ ತೊಂದರೆಯಲ್ಲಿದ್ದು ಕಲಾವಿದ ಮತ್ತು ಕಲೆಯನ್ನು ಬದುಕಿಸಲು ಪ್ರೇಕ್ಷಕರು ಬಂದು ನಾಟಕ ನೊಡಿ ಪ್ರೋತ್ಸಾಹಿಸಬೇಕೆಂದು ರಾಜಣ್ಣನವರು ಕಲಾರಾಧಾಕರಲ್ಲಿ ಮನವಿ ಮಾಡುತ್ತಾರೆ ಏನೆ ಆಗಲಿ ನಾಟಕ ನೊಡುತ್ತಾ ಕುಳಿತರೆ ನಕ್ಕುನಕ್ಕು ಮನ ಹಗುರವಾಗುತ್ತದೆ ಕಲಾವಿದರು ನೀಡುವ ಕಲೆಗೆ ಕಲಾರಸಿಕರ ಮನಸು ಖುಷಿಯಾಗುತ್ತದೆ ಮತ್ತೇಕೆ ತಡ ನೀವು ಒಮ್ಮೆ ನಾಟಕ ನೋಡಿಬನ್ನಿ.