ಲಿಂಗನಮಠ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ


(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಜು.26: ಸಮೀಪದ ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾ.ಪಂ.ಗೆ ಎರಡನೇ ಅವಧಿಗೆ ಜಿದ್ದಾ-ಜಿದ್ದಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಶಿಮ್ ಹಟ್ಟಿಹೊಳಿ ಅಧ್ಯಕ್ಷರಾಗಿ ಹಾಗೂ, ಉಪಾಧ್ಯಕ್ಷರಾಗಿ ಶ್ರೀಮತಿ ಸರೋಜಾ ನಾಯ್ಕರ ಆಯ್ಕೆಯಾಗಿದ್ದರೆ.
ಕಾಶಿಮ್ ಹಟ್ಟಿಹೊಳಿಯವರು ಈ ಹಿಂದೆ ಉಪಾಧ್ಯಕ್ಷರಾಗಿದ್ದರು.
ಒಟ್ಟು ಸದಸ್ಯರು ಸಂಖ್ಯೆ 14, ಅಧ್ಯಕ್ಷ ಸ್ಥಾನಕ್ಕಾಗಿ ಕಾಶಿಮ್ ಹಟ್ಟಿಹೊಳಿ ಹಾಗೂ ಮುಬಾರಕ ಚಿಕ್ಕೋಡಿ ನಾಮಪತ್ರ ಸಲ್ಲಿಸಿದ್ದರು. ಆಕಾಂಕ್ಷಿಗಳಿಬ್ಬರು ಸಮನಾಗಿ 7-7 ಮತಗಳನ್ನು ಪಡೆದರು. ಸಮವಾದ ಕಾರಣ ಚೀಟಿ ಹಾಕುವುದರ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವದಕ್ಕೆ 14 ಜನ ಸದಸ್ಯರು ಒಪ್ಪಿಗೆ ನೀಡಿದಾಗ ಕಾಶಿಮ್ ಅವರು ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಯ್ಕರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಎಲ್ಲ ಸದಸ್ಯರು ಒಗ್ಗೂಡಿ ಮತ ಚಲಾಯಿಸುವ ಮುಖಾಂತರ ಅವರನ್ನೇ ಆಯ್ಕೆ ಮಾಡಿದರು.
ಚುನಾವಣಾಧಿಕಾರಿಯಾಗಿ ಲೋಕೊಪಯೋಗಿ ಇಲಾಖೆಯ ಎಇಇ ರಾಜೇಂದ್ರ ಹೊನಕಂಡೆ, ಸಹಾಯಕ ಚುನಾವಣಾಧಿಕಾರಿಯಾಗಿ ಪಿಡಿಓ ಕಾವೇರಿ ಹಿಮೇಕರ ಕರ್ತವ್ಯ ನಿರ್ವಹಿಸಿದರು. ಕ್ಲರ್ಕ ನಾರಾಯಣ ತೊಲಗಿ ಸಿಬ್ಬಂದಿಯವರು ಆಯ್ಕೆಯಾದ ಅಭ್ಯರ್ಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.
ಈ ವೇಳೆ ಸದಸ್ಯರುಗಳಾದ ರಾಜೇಂದ್ರ ರಪಾಟಿ, ಮಾರುತಿ ಹರಿಜನ, ಪಾಡುರಂಗ ಪಾಟೀಲ, ಶಿವಾನಂದ ಬಾಗೇವಾಡಿ, ರತ್ನಾ ಮಾಟೋಳಿ, ಸೋನಾಬಾಯಿ ವಾಯ್ದಂಡೆ, ಶೋಭಾ ಮಾಟೋಳಿ, ಬೀಬಿಹಜರಾ ದಾಸ್ತಿಕೊಪ್ಪ, ಶಾಂತವ್ವ ಹಿರೇಮಠ, ಫಾತೀಮಾ ಅಳವಾಡ, ಮುಬಾರಕ ಚಿಕ್ಕೋಡಿ, ಭೈರು ಮಾಡಂವಿ, ಸೇರಿದಂತೆ ಸಾರ್ವಜನಿಕರಿದ್ದರು.