ಲಿಂಗನಖಾನ್‌ದೊಡ್ಡಿಯಲ್ಲಿ ಕ್ಲಸ್ಟರ್ ತರಗತಿ

ರಾಯಚೂರು,ಆ.೧೭-
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ ರಾಯಚೂರು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಲಿಂಗನಖಾನ್‌ದೊಡ್ಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಡಳಿತ ಮಂಡಳಿ ಸದಸ್ಯರಿಗೆ ಕ್ಲಸ್ಟರ್ ಕಾರ್ಯಕ್ರಮವನ್ನು ರಾಯಚೂರು ತಾಲೂಕಿನ ಎಲ್.ಕೆ.ದೊಡ್ಡಿ ಗ್ರಾಮದ ಪ್ಯಾಕ್ಸ್‌ನಲ್ಲಿ ಜರುಗಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ನಿರ್ದೇಶಕರಾದ ಜಂಬಯ್ಯ ನಾಯಕ್ ಇವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತ, ಸುಧಾರಿತ ಮತ್ತು ಸಾವಯವ ಕೃಷಿ ಪದ್ದತಿಯಲ್ಲಿ ಸಿರಿಧಾನ್ಯಗಳ ಉತ್ಪಾದನೆಗೆ ಆದ್ಯತೆ ನೀಡಿ, ಸಿರಿಧಾನ್ಯಗಳ ಮಹತ್ವ ಮತ್ತು ಉಪಯೋಗದ ಬಗ್ಗೆ ತಿಳಿಸಿ, ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು. ತರಬೇತಿಯ ಮಹತ್ವವನ್ನು ಆಡಳಿತ ಮಂಡಳಿಯ ಸದಸ್ಯರು ಸಂಘದಲ್ಲಿ ಅಳವಡಿಸಿಕೊಂಡು ಸಂಘವನ್ನು ಸದೃಢವಾಗಿ ಬೆಳೆಸಲು ಪಣ ತೊಡೋಣ, ಸಂಘದಲ್ಲಿ ಬೇರೆ ಬೇರೆ ಲಾಭದಾಯಕ ಯೋಜನೆಗಳನ್ನು ಹಾಕಿಕೊಂಡು ಸಂಘವನ್ನು ಮಾದರಿಯಾಗಿಸಲು ಮುಂದಾಗೋಣ ಎಂದು ಹೇಳಿದರು.
ಅತಿಥಿಗಳಾಗಿ ಸಂಘದ ನಿರ್ದೇಶಕರಾದ ಆದಮ್ಮಪ್ಪ, ಲಲಿತಮ್ಮ, ರಂಗಪ್ಪ, ಆಶಾ ಕಾರ್ಯಕರ್ತೆಯಾದ ಈರಮ್ಮ ಮುಂತಾವವರು ಉಪಸ್ಥಿತರಿದ್ದು. ಶೋಷಿತ ಮತ್ತು ದುರ್ಬಲ ವರ್ಗದವರ ಏಳಿಗೆಗಾಗಿ ಸಹಕಾರ ಸಂಘಗಳ ಉದಯವಾಗಿವೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಮಂಜುಳಾ ಜಿಲ್ಲಾ ಸಹಕಾರ ಶಿಕ್ಷಕರು ಸರ್ವರನ್ನು ಸ್ವಾಗತಿ, ಕ್ಲಸರ್ ತರಗತಿಯ ಉದ್ಧೇಶ, ಮಹತ್ವ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಆಡಳಿತ ಮಂಡಳಿ ಸದಸ್ಯರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸಿ, ಜಿಲ್ಲಾ ಸಹಕಾರ ಒಕ್ಕೂಟದಿಂದ ಜರುಗುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ನಿರೂಪಿಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವೆಂಕಟೇಶ ಮಾತನಾಡಿ ರಾಜ್ಯ ಸಹಕಾರ ಮಹಾಮಂಡಳದಿಂದ ಜರುಗುವ ಕ್ಲಸ್ಟರ್ ತರಬೇತಿ ಕಾರ್ಯಕ್ರಮಗಳು ಗ್ರಾಮೀಣ ಜನರಿಗೆ ಅತ್ಯಂತ ಉಪಯುಕ್ತವಾಗಿದ್ದು, ಸಹಕಾರದ ಬಗ್ಗೆ ಜಾಗೃತಿ (ಅರಿವು) ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ತಿಳಿಸಿ, ವಂದಿಸಿದರು.