ಲಿಂಗತ್ವ ಅಲ್ಪಸಂಖ್ಯಾತರಿಗೆ ಲಸಿಕೆ: ರಾಮಚಂದ್ರನ್ ಆರ್

ಬೀದರ‌:ಏ.05: ‘ಲಿಂಗತ್ವ ಅಲ್ಪಸಂಖ್ಯಾತರು ಕೋವಿಡ್‌ ಲಸಿಕೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಚಿದ್ರಿಯ ರುಬಿಯಾ ಫಂಕ್ಷನ್ ಹಾಲ್‍ನಲ್ಲಿ ಜಿಲ್ಲೆಯಲ್ಲಿರುವ 45 ವರ್ಷ ಮೇಲ್ಪಟ್ಟ ಲಿಂಗತ್ವ ಅಲ್ಪಸಂಖ್ಯಾತರಿಗೆ ಕೋವಿಡ್ ಲಸಿಕೆ ಪಡೆದುಕೊಳ್ಳಲು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೀದರ್‌ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್ ಮಾತನಾಡಿದರು.

ಜಿಲ್ಲಾಧಿಕಾರಿ ನಿರ್ದೇಶನದಂತೆ ಎ3 ಫೌಂಡೇಶನ್‍ನ ಸಂಸ್ಥಾಪಕ ಮಹಮ್ಮದ್ ಹಬೀಬ್, ಚಿಂತಕ ಈಶ್ವರ ಮಲ್ಕಾಪೂರೆ, ಯುವ ಹೋರಾಟಗಾರ್ತಿ ಲಕ್ಷ್ಮಿ ಬಾವುಗೆ ಸೇರಿ 10 ಜನರಿಗೆ ಲಸಿಕೆ ನೀಡಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪೂರೆ, ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕ ಯಲ್ಲಮ್ಮ, ಮಹಿಳಾ ಶಕ್ತಿ ಕೇಂದ್ರದ ಸಂಯೋಜಕ ಶಾರದಾ ಇದ್ದರು.