ಲಾಸ್ಯ ಫೌಂಡೇಶನ್ ನಿಂದ ಉಪಹಾರ ಸೇವೆ

ದಾವಣಗೆರೆ.ಡಿ.೯;  ಶ್ರೀ ಗುರು ಪಂಡಿತ ಪಂಚಾಕ್ಷರಿ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ, ಶ್ರೀ ವಿರೇಶ್ವರ ಪುಣ್ಯಾಶ್ರಮ, ಬಾಡಾಕ್ರಾಸ್, ದಾವಣಗೆರೆ ಬಳಿ  ಲಾಸ್ಯ ಫೌಂಢೇಶನ್ ಮಾಲೀಕರು ಶ್ರೀ ಲಲಿತ ಎಜ್ಯುಕೇಷನಲ್  & ಪಬ್ಲಿಕ್  ಚಾರಿಟೆಬಲ್ ಸಂಸ್ಥೆ  ನೋಂ ಸದಸ್ಯರೂ ಆದ ಚಿ.ಕುಮಾರಿ ಲಾಸ್ಯ ಎಸ್ ಎಸ್  ತಮ್ಮ 2ನೇ ವರ್ಷದ ಹುಟ್ಟುಹಬ್ಬವನ್ನು ಅಂಧ ವಿದ್ಯಾರ್ಥಿಗಳೊಂದಿಗೆ ಆಚರಿಸಿಕೊಂಡಿದ್ದು, ಅಲ್ಲಿಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಉಪಾಹಾರ ಸೇವನೆ ಕಾರ್ಯ ಮಾಡಿದ್ದು, ಕಾರ್ಯಕ್ರಮಕ್ಕೆ ಆವರಗೊಳ್ಳದ ಓಂಕಾರೇಶ್ವರ ಸ್ವಾಮೀಜಿಗಳು, ಸಮಿತಿಯ ಕಾರ್ಯದರ್ಶಿಗಳು  ಎ ಹೆಚ್ ಶಿವಮೂರ್ತಿಸ್ವಾಮಿಗಳು, ಕರಿಬಸಪ್ಪ, ಬ್ರಹ್ಮಕುಮಾರಿ ಸಮಾಜದ ಸದಸ್ಯರು, ಮತ್ತು ಲಾಸ್ಯ ಫೌಂಢೇಶನ್ ಸಂಸ್ಥೆಯ ಸಂಸ್ಥಾಪಕರಾದ ಸೂರ್ಯಪ್ರಕಾಶ್ ಆರ್, ಸಂಸ್ಥೆಯ ಕಾರ್ಯದರ್ಶಿ ಸುಮಲತ ಜಿ ಎಸ್, ಹಾಗೂ  ಎಸ್ ಪಿ ಸಾರ್ವಜನಿಕ ಮಾಹಿತಿ ಹಾಗೂ ಗ್ರಾಹಕರ ಸೇವಾ ಕೇಂದ್ರದ ಸಿಬ್ಬಂಧಿಗಳು ಮತ್ತು ಪುಣ್ಯಾಶ್ರಮದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Attachments area