ಲಾಳಸಂಗಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಲು ಮನವಿ

ಇಂಡಿ :ಸೆ.23:ತಾಲೂಕಿನ ಲಾಳಸಂಗಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವಂತೆ ಲಾಳಸಂಗಿ,ಗೊಳಸಾರ ಗ್ರಾಮದ ಮುಖಂಡರಾದ ಎಂ.ಆರ್.ಪಾಟೀಲ,ಬತ್ತುಸಾಹುಕಾರ ಹಾವಳಗಿ, ಸಿದ್ದಾರಾಮಗೌಡ ಬಿರಾದಾರ, ಸುಬ್ಬುಗೌಡ ಬಿರಾದಾರ,ಸಿದ್ದಾರ್ಥ ಮೈದರ್ಗಿ ನೇತ್ರತ್ವದಲ್ಲಿ ಸುಮಾರು 14 ಜನರ ನಿಯೋಗ ಮಂಗಳವಾರ ಬೆಂಗಳೂರಿಗೆ ತೆರಳಿ ಆರೋಗ್ಯ ಸಚಿವ ಡಾ.ಸುಧಾಕರ , ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಇಂಡಿ ತಾಲೂಕಿನ ಕೊನೆಯ ಗ್ರಾಮ ಲಾಳಸಂಗಿ ಗ್ರಾಮ ಗಡಿಭಾಗದಲ್ಲಿದ್ದು,ಲಾಳಸಂಗಿ ಗ್ರಾಮದ ಸುತ್ತಮುತ್ತಲು ಮಿರಗಿ,ಗೊಳಸಾರ,ಖೇಡಗಿ, ಸಾತಲಗಾಂವ, ಶಿವಪೂರ,ರೋಡಗಿ,ನಾದ ಗ್ರಾಮಗಳು ಬರುತ್ತಿದ್ದು, ಈ ಎಲ್ಲ ಗ್ರಾಮಗಳ ಒಂದರಲ್ಲಿಯೂ ಪ್ರಾಥಮಿಕ ಆರೋಗ್ಯ ಕೇಂದ್ರ ಇರುವುದಿಲ್ಲ. ಈ ಗ್ರಾಮಗಳ ಮಧ್ಯಬಿಂದು ಲಾಳಸಂಗಿ ಗ್ರಾಮಕ್ಕೆ ಪ್ರಾಥಮಿಕ ಆರೊಗ್ಯ ಕೇಂದ್ರ ಮಂಜೂರು ಮಾಡಿದರೆ ಈ ಎಲ್ಲ ಗ್ರಾಮಗಳಿಗೆ ಅನುಕೂಲವಾಗುತ್ತದೆ.ಸಧ್ಯ ಈ ಎಲ್ಲ ಗ್ರಾಮದ ಸಾರ್ವಜನಿಕರು ಚಿಕಿತ್ಸೆಗಾಗಿ 30 ಕಿಮೀ ದೂರದಲ್ಲಿರುವ ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಹೋಗಬೇಕಾಗಿದೆ.ಹೀಗಾಗಿ ಈ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅತೀ ಅವಶ್ಯಕವಾಗಿದೆ ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು.

ನಿಯೋಗದ ಮನವಿಯನ್ನು ಸ್ವೀಕರಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಲಾಳಸಂಗಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ನಿಯೋಗದ ಮುಖಂಡರಾದ ಎಂ.ಆರ್.ಪಾಟೀಲ,ಬತ್ತುಸಾಹುಕಾರ ಹಾವಳಗಿ,ಸಿದ್ದರಾಮಗೌಡ ಪಾಟೀಲ ಹೇಳಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,ಶಾಸಕ ಯಶವಂತರಾಯಗೌಡ ಪಾಟೀಲ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಯಾವುದೇ ಪರಿಸ್ಥಿತಿಯಲ್ಲಿಯೂ ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಂಜೂರು ಮಾಡುವ ಕೆಲಸ ಸರ್ಕಾರ ಮುಂದಾದರೆ ಮೊದಲು ಲಾಳಸಂಗಿ ಗ್ರಾಮಕ್ಕೆ ಪ್ರಾಆ ಕೇಂದ್ರ ಮಂಜೂರು ಮಾಡಲು ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರ ಮೇಲೆ ಒತ್ತಡ ಹೆರಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

ಎಂ.ಆರ್.ಪಾಟೀಲ, ಸಿದ್ದಾರಾಮಗೌಡ ಬಿರಾದಾರ, ಸುಭಾಷಗೌಡ ಬಿರಾದಾರ, ಬತ್ತುಸಾಹುಕಾರ ಹಾವಳಗಿ,ನಿಂಬಣ್ಣ ಹಿರೇಕುರಬರ,ಸಿದ್ದಾರ್ಥ ಮೈದರ್ಗಿ, ರಾವುತಪ್ಪ ಆಸಂಗಿಹಾಳ, ವಿಠಲ ಬೊಗೊಂಡಿ, ಯಲ್ಲಪ್ಪ ಗಜಾಕೋಶ, ಪ್ರಕಾಶ ಶಿವಪೂರ, ಪರಮೇಶ ಇಂಗಳೇಶ್ವರ,ಕಾಂತಪ್ಪ ಮಾಶ್ಯಾಳ,ಸಿದ್ದಪ್ಪ ಹದರಿ,ಪ್ರಭು ಬಬಲೇಶ್ವರ,ಚಂದ್ರಶೇಖರ ಇಂಗಳೇಶ್ವರ ನಿಯೋಗದಲ್ಲಿ ಇದ್ದರು.