ಲಾಳಗೊಂಡ ಸಮುದಾಯವನ್ನು ಉಪಜಾತಿ ಪಟ್ಟಿಯಲ್ಲಿ ಸೇರಿಸಲು ಪ್ರಾಮಣಿಕ ಯತ್ನ: ನಾಗೇಂದ್ರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.22: ರಾಜ್ಯದಲ್ಲಿನ ಲಾಳಗೊಂಡ ಸಮುದಾಯವನ್ನು ಉಪಜಾತಿ ಪಟ್ಟಿಯಲ್ಲಿ ಸೇರಿಸಲು ತಾವು ಪ್ರಾಮಣಿಕ ಯತ್ನ ಮಾಡುವುದಾಗಿ ಎಸ್ಟಿ ಕಲ್ಯಾಣ ಸಚಿವ ಬಿ.ನಾಗೇಂದ್ರ ಹೇಳಿದ್ದಾರೆ.
ಅವರು ಇಂದು ನಗರದ ಬಸವ ಭವನಲದಲ್ಲಿ ಅಖಿಲ ಕರ್ನಾಟಕ  ಲಿಂಗಾಯತ ಲಾಳಗೊಂಡರ ಸಂಘದ ಜಿಲ್ಲಾ ಘಟಕದಿಂದ 
ಹಮ್ಮಿಕೊಂಡಿದ್ದ.  ಜಿಲ್ಲೆಯ ಲಾಳಗೊಂಡ ಸಮಾಜದ ಪ್ರತಿಭಾವಂತ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ
ಕುರುಗೋಡು(ಸಿಂದಿಗೇರಿ) ಶಿವಶರಣೆ ನೀಲಮ್ಮನವರ ಹೆಸರಿನಲ್ಲಿ ನೀಡುತ್ತಿರುವ
ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಈ ಹಿಂದಿನ ಸರ್ಕಾರ ಈ ಬಗ್ಗೆ ಸಂಪುಟದಲ್ಲಿ ಒಪ್ಪಿಗೆ ನೀಡಿ ಆದೇಶವಾಗಿ ಪ್ರಕಟಿಸಿಲ್ಲ. ಆ ಕಾರ್ಯವನ್ನು ಮಾಡಲಿದೆಂದರು.
ಯಾವುದೇ ಸಮಾಜ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ  ಸ್ಪೂರ್ತಿದಾಯಕವಾದುದು. 
ನನ್ನ ಏಳಿಗೆಗೂ ಈ ಸಮುದಾಯದ ಶಕ್ತಿ ಲಭ್ಯವಾಗಿದೆ. ಅದನ್ನು ಮರೆಯದೆ ಸಮಯದಾಯಕ್ಕೆ ಅಗತ್ಯ ನೆರವನ್ನು ರಾಜಕೀಯವಾಗಿಯೂ ಮಾಡಲಿದೆ ಎಂಬ ಭರವಸೆ ನೀಡಿದರು.
ಭಾರತೀಯ ಲೆಕ್ಕ ಪರಿಶೋಧಕರ ಸಂಘದ ದಕ್ಷಿಣ ಪ್ರಾಂತ್ಯದ ಅಧ್ಯಕ್ಷ  ಸಿರಿಗೇರಿ ಪನ್ನರಾಜ್ ಮಾತನಾಡಿ,
ನಮ್ಮ ಸಮುದಾಯ ಇನ್ನೂ ಬಹು ಸಂಖ್ಯೆಯಲ್ಲಿ ಆರ್ಥಿಕವಾಗಿ ಹಿಂದುಳಿದಿದೆ. ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕು. ಅದಕ್ಕಾಗಿ ಇಡೀ ಸಮುದಾಯ  ಆರ್ಥಿಕ ಸ್ವಾಲಂಬನೆ ಆಗಬೇಕು. ಅದಕ್ಕೆ ನಾವು ಕೃಷಿ ಅಷ್ಟೇ ಅಲ್ಲದೆ, ವಾಣಿಜ್ಯ ಕ್ಷೇತ್ರಕ್ಕೂ ಕಾಲಿಡಬೇಕು ಎಂದರು.
ಎಮ್ಮಿಗನೂರಿನ ಮಹಾಂತ ಮಠದ ವಾಮದೇವ ಶ್ರೀಗಳು ಸಾನಿಧ್ಯವಹಿಸಿದ್ದರು.
ರಾಜ್ಯ ಅಧ್ಯಕ್ಷ ಅರವಿ ಬಸವನಗೌಡ ಅವರು ಸಮಾರಂಭಕ್ಕೂ ಮುನ್ನ ಕುರುಗೋಡಿನ ನೀಲಮ್ಮನ ಮಠದಿಂದ ತರುವ ಜ್ಯೋತಿಯನ್ನು ಎಸ್ಪಿ ಸರ್ಕಲ್ ಬಳಿ ಸ್ವಾಗತಿಸಿ ಬಸವ ಭವನದ ವರೆಗೆ ಹಮ್ಮಿಕೊಂಡಿರುವ ಮೆರವಣಿಗೆಗೆ ಚಾಲನೆ ನೀಡಿದರು.
ಸಮಾರಂಭದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್. ರಾಮನಗೌಡ, ಕಾರ್ಯದರ್ಶಿ ಗುರುಸಿದ್ದಸ್ವಾಮಿ,  ಬಿಜೆಪಿ ಮುಖಂಡ ಎಸ್.ಗುರುಲಿಂಗನಗೌಡ, ಬಿ.ವೆಂಕಟೇಶ್, ಘನಮಲ್ಲನಗೌಡ, ಸೋಮಲಿಂಗನಗೌಡ, ಮಹಾರುದ್ರಗೌಡ,  ಚೆನ್ನಬಸನಗೌಡ, ತಿಮ್ಮಗೌಡ ಸಿದ್ದಮ್ಮನಹಳ್ಳಿ, ಕೆ.ನಾಗನಗೌಡ, ಮಸೀದಿಪುರ ಸಿದ್ರಾಮನಗೌಡ, ಸಿಂದಿಗೇರಿ ವೀರೇಶ್ ಗೌಡ, ಎಂ.ಜಿ.ಗೌಡ,   ಡಾ. ಎಸ್.ಬಿ.ರಾಜಶೇಖರ ಗೌಡ, ಉದ್ಯಮಿ ಮುದ್ದಬಸವನಗೌಡ,  ಯಾಳ್ಪಿ ಮೇಟಿ ಪಂಪನಗೌಡ, ಅಧಿಕಾರಿಗಳಾದ ಕೆ.ಚೆನ್ನಪ್ಪ, ಪಂಪನಗೌಡ, ಗಂಗಾಧರಗೌಡ, ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಅಧ್ಯಕ್ಷತೆವಹಿಸಿದ್ದರು. ಗೌರವ ಅಧ್ಯಕ್ಷ ಮೀನಳ್ಳಿ ಚಂದ್ರಶೇಖರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಶರಣ ಅವರು ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಶಶಿಧರ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲಾನಿ ಭಾಷಾ ಮತ್ತು ತಂಡದಿಂದ ನೃತ್ಯ, ಯಲ್ಲನಗೌಡ ಶಂಕರಬಂಡೆ ಮತ್ತವರ ತಂಡದಿಂದ ಹಾಡುಗಾರಿಕೆ ನಡೆಯಿತು.