
ಸಿರವಾರ,ಏ.ಂ೨- ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ ಲಾಳಗೊಂಡ ಜಾತಿಯನ್ನು ಜಾತಿ ಪಟ್ಟಿಯ ೨ ಡಿಯಲ್ಲಿ ಸೇರಿಸಿರುವುದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಲಾಳಗೊಂಡ ಸಮಾಜದ ಸಿರವಾರ ನಗರ ಘಟಕ ಅಧ್ಯಕ್ಷ ಶರಣಗೌಡ ಶಾಖಾಪೂರು ಹೇಳಿದ್ದಾರೆ.
ಈ ಕುರಿತು ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ಲಾಳಗೊಂಡ ಸಮಾಜವನ್ನು ಜಾತಿಪಟ್ಟಿಯ ೨ಡಿ ಗೆ ಸೇರ್ಪಡೆ ಮಾಡಲು ಸಮಾಜದ ರಾಜ್ಯಾಧ್ಯಕ್ಷ ಬಸವಗೌಡ ಹರವಿ, ಜಿಲ್ಲಾಧ್ಯಕ್ಷ ವೀರಭದ್ರಪ್ಪಗೌಡ ಆಲ್ದಾಳ ಸೇರಿದಂತೆ ಸಮಾಜದ ಪ್ರಮುಖರು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹಾಕುತಾ ಬಂದಿದ್ದರಿಂದ ಸಂಸದರು, ಶಾಸಕರು ನಮ್ಮ ಹೋರಾಟಕ್ಕೆ ಕೈ ಜೊಡಿಸಿದರಿಂದ ೨ ಡಿ ಸಿಕ್ಕಿದೆ.
ಇದಕ್ಕೆ ಮುಖ್ಯಮಂತ್ರಿಗಳಿಗೆ, ಸಂಪುಟ ಸಚಿವರಿಗೆ, ಸಂಸದರಿಗೆ, ಶಾಸಕರಿಗೆ, ಸಮಾಜದ ಮುಖಂಡರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.