ಲಾಳಗೊಂಡ ಸಮಾಜ ಜಾತಿ ಪಟ್ಟಿಗೆ ಸೇರ್ಪಡೆ: ಸಂತಸ


ಸಂಜೆವಾಣಿ ವಾರ್ತೆ
ಕುರುಗೋಡು:ಏ.06: ಲಾಳಗೊಂಡ ಸಮಾಜವನ್ನು ಜಾತಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಕೆ ಮೇರೆಗೆ ಸರ್ಕಾರ ಸ್ಪಂದಿಸಿ ಲಾಳಗೊಂಡ ಜಾತಿಯನ್ನು ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದು ಸಂತಸ ತಂದಿದೆ ಸರ್ಕಾರಕ್ಕೆ ಅಭಿನಂದನೆಗಳು ತಿಳಿಸುತ್ತೇವೆ ಎಂದು ತಾಲೂಕು ಲಾಳಗೊಂಡ ಸಮಾಜ ಸಂಘದ  ಗೌರವ ಅಧ್ಯಕ್ಷರ ಕೆ.ಎಂ.ಮಲ್ಲಪ್ಪ ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ರಾಘವಂಕ ಮಠದ ಪ್ರಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಲಾಳಗೊಂಡ ಸಮಾಜವನ್ನು ಜಾತಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಸುಮಾರು ಅಲವು ವರ್ಷಗಳಿಂದ ಮನವಿ ಸಲ್ಲಿಸುತ್ತ ಬಂದಿದ್ದು ಸಹ ಸರ್ಕಾರ ಸಕಾರತ್ಮಕವಾಗಿ ಸ್ಪಂದನೆ ನೀಡಿರಲಿಲ್ಲ, ಆದರೆ ಕಳೆದ ಒಂದು ತಿಂಗಳಲ್ಲಿ  ಪದಾದಿಕಾರಿಗಳ ನಿರಂತರ ಸಂಪರ್ಕ ದೊಂದಿಗೆ ಸರಕಾರ ಸ್ಪಂದಿಸಿ ಲಾಳಗೊಂಡ ಜಾತಿಯನ್ನು ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದು ಸಂತಸ ತಂದಿದೆ.
ಲಾಳಗೊಂಡ ಸಮಾಜವನ್ನು 2ಡಿ ಜಾತಿ ಪಟ್ಟಿಗೆ ಸೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರಿಗೆ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು ಎಲ್ಲಾರ ಸಹಕಾರದಿಂದ  ಲಾಳಗೊಂಡ ಸಮಾಜವನ್ನು ಜಾತಿ ಪಟ್ಟಿಗೆ ಸೇರ್ಪಡೆ ಮಾಡಿರುವುದಕ್ಕೆ ಹೋರಾಟಕ್ಕೆ ಸಂದ ಗೌರವವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಲಾಳಗೊಂಡ ಸಮಾಜ ಸಂಘದ ಅಧ್ಯಕ್ಷರು ಅರವಿ ದೊಡ್ಡ ಬಸವನ ಗೌಡ, ಮುಖಂಡರಾದ ಆರ್. ಸೋಮನಗೌಡ, ಎಂ.ಪಂಪಾಪತಿ ಗೌಡ, ಜಿ.ಪಾಲಾಕ್ಷಿ ಗೌಡ, ಜಿ.ಬಸವನ ಗೌಡ, ವೀರಭದ್ರಗೌಡ, ಎಂ. ಸುರೇಶ್ ಗೌಡ, ಸಿ. ಬಸವರಾಜ, ತುಂಗಭದ್ರಾ ರೈತ ಸಂಘ ತಾಲೂಕು ಅಧ್ಯಕ್ಷ ಎಸ್. ಭೀಮನಗೌಡ, ಹನುಮನ ಗೌಡ ಇತರರು ಇದ್ದರು.