ಲಾಳಗೊಂಡ ಸಮಾಜ ಜಾತಿಪಟ್ಟಿ ಸೇರ್ಪಡೆಗೆ ಸರ್ಕಾರ ಗಮನ ಸೆಳೆಯಲು ಶಾಸಕರಿಗೆ ಮನವಿ

ಮಾನ್ವಿ.ಸೆ.೧೮-ಲಿಂಗಾಯತ ಲಾಳಗೊಂಡ ಸಮಾಜವನ್ನು ಸರಕಾರದ ಜಾತಿ ಪಟ್ಟಿಯಲ್ಲಿ ಸೇರಿಸಲು ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ಜಾತಿ ಪಟ್ಟಿಯಲ್ಲಿ ಸೇರ್ಪಡೆಗೆ ಮಾಡಲು ಒತ್ತಾಯಿಸಬೇಕು ಎಂದು ಒತ್ತಾಯಿಸಿ ಶಾಸಕ ರಾಜಾ ವೆಂಕಟಪ್ಪ ನಾಯಕಗೆ ಲಿಂಗಾಯತ ಲಾಳಗೊಂಡ ಸಮಾಜದ ಮಾನ್ಚಿ ಮತ್ತು ಸಿರವಾರ ತಾಲೂಕು ಘಟಕದಿಂದ ಶನಿವಾರ ಮನವಿ ಸಲ್ಲಿಸಲಾಯಿತು.
ಲಿಂಗಾಯತ ಲಾಳಗೊಂಡ ಸಮಾಜವು ೮೦೦ ವರ್ಷಗಳಿಂದ ರಾಜರ ಕಾಲದಿಂದಲು ನಮ್ಮ ಜನಾಂಗವು ಲಿಂಗಾಯತ ಲಾಳಗೊಂಡ ಎಂದು ಗುರುತಿಸಿಕೊಂಡಿದ್ದು, ನಾವು ಕೂಡ ಅಂದಿನಿಂದ ಇಂದಿನವರೆಗು ಲಿಂಗಾಯತ ಲಾಳಗೊಂಡ ಜಾತಿಯಲ್ಲಿ ಮುಂದುವರಿಯುತ್ತಿದ್ದೆವೆ. ಸ್ವಾತಾಂತ್ರ ನಂತರ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಜಾತಿಗಳನ್ನು ಗುರುತಿಸಿ ಜಾತಿ ಪಟ್ಟಿಯಲ್ಲಿ ಅನುಮೊದಿಸಿವೆ. ಅದರೆ ನಮ್ಮ ಲಿಂಗಾಯತ ಲಾಳಗೊಂಡ ಜಾತಿಯ ಸೇರಿಸಿರುವುದಿಲ್ಲಾ. ಆದ್ದರಿಂದ ನಮ್ಮ ಸಮಾಜದ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಉದ್ಯೋಗ ಪಡೆಯುವಲ್ಲಿ ಜಾತಿ ಪಟ್ಟಿಯಲ್ಲಿ ಹೆಸರು ಇಲ್ಲದೆ ಸರಕಾರದ ಯೋಜನೆಗಳನ್ನು ಪಡೆಯುವಲ್ಲಿ ವಂಚಿತರಾಗುತ್ತೀದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ೧೫ ಲಕ್ಷ ಕಿಂತ ಅಧಿಕ ಜನಸಂಖ್ಯೆ ಇದ್ದು ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ೪೦ ಸಾವಿರ ಕಿಂತ ಅಧಿಕ ಜನಸಂಖ್ಯೆ ಇದ್ದು. ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಅದರಂತೆ ದೇಶದ ವಿವಿಧ ರಾಜ್ಯಗಳಲ್ಲಿ ನಮ್ಮ ಜಾತಿ ಜನಾಂಗ ಜೀವನ ಸಾಗಿಸುತ್ತೀದ್ದರೆ, ನಮ್ಮ ಜನಾಂಗದ ಮೂಲ ವೃತ್ತಿ ಕೃಷಿ ಮತ್ತು ಕೂಲಿ ಕಾರ್ಮಿಕರಾಗಿದ್ದು, ನಮ್ಮನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾತಿ ಪಟ್ಟಿಯಲ್ಲಿ ಹೆಸರು ಸೇರಿಸದೆ ಮಲತಾಯಿ ದೊರಣೆ ತೊರುತ್ತಿವೆ.
ಈ ಅಧಿವೇಶ ನಡಿಯುತ್ತಿದ್ದು, ಅಧಿವೇಶನದಲ್ಲಿ ನಮ್ಮ ಲಿಂಗಾಯತ ಲಾಳಗೊಂಡ ಸಮಾಜವನ್ನು ಜಾತಿ ಪಟ್ಟಿಯಲ್ಲಿ ಸೇರಿಸುವ ವಿಷಯ ಕುರಿತು ಸರಕಾರವನ್ನು, ಒತ್ತಾಯಿಸಬೇಕು ಎಂದು ಮನವಿ ಮಾಡಲಾಯಿತು.
ಲಿಂಗಾಯತ ಲಾಳಗೊಂಡ ಸಮಾಜದ ತಾಲೂಕು ಅಧ್ಯಕ್ಷ ಮಹಾದೇವಪ್ಪ ಹಿರೇಕೊಟ್ನೆಕಲ್, ಸಿರವಾರ ತಾಲೂಕು ಅದ್ಯಕ್ಷ ಶಶಿದರಗೌಡ ಹರವಿ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ, ಮುಖಂಡರಾದ ವೀರನಗೌಡ ಪೋತ್ನಾಳ, ಚನ್ನಬಸವ ಬೆಟ್ಟದೂರು, ರಾಮನಗೌಡ ಜಾನೇಕಲ್, ಶರಣಬಸವ, ಅಮರೇಶಗೌಡಹರವಿ, ಚಂದ್ರು ಮಾಡಗಿರಿ, ಸಂತೋಷ ಮಾಡಗಿರಿ, ನವೀನ್ ಗೌಡ ಅತ್ತನೂರು, ಅನೀಲ್, ಶರಣಬಸವ ಮಾಡಗಿರಿ ಇನ್ನಿತರರು ಇದ್ದರು.