ಲಾಳಗೊಂಡ ಸಮಾಜದ ಸಮಾವೇಶ ಯಶಸ್ವಿ : ಅಭಿನಂದನಾ ಸಮಾರಂಭ

ಮಾನ್ವಿ,ಮಾ.೦೪- ಟಿಎಪಿಸಿಎಂಎಸ್ ಮೈದಾನದಲ್ಲಿ ನಡೆದ ರಾಯಚೂರು ಜಿಲ್ಲಾ ಮಟ್ಟದ ಲಾಳಗೊಂಡ ಸಮಾಜದ ಸಮಾವೇಶ ಅತ್ಯಂತ ಯಶಸ್ವಿಯಾಗಿ ಜರುಗಲು ಕಾರಣಿಭೂತರಾದ ಲಾಳಗೊಂಡ ಸಮಾಜದ ಜಿಲ್ಲಾಧ್ಯಕ್ಷ ಡಾ.ವೀರಭದ್ರಗೌಡ ಆಲ್ದಾಳ್, ಜಿ.ಪಂ.ಮಾಜಿ ಸದಸ್ಯರಾದ ಮಹಾಂತೇಶ ಪಾಟೀಲ್ ಅತ್ತನೂರು, ವೀರಭದ್ರಗೌಡ ಭೋಗಾವತಿ, ಮಾನ್ವಿ ತಾಲೂಕಾಧ್ಯಕ್ಷ ಮಹಾದೇವಪ್ಪಗೌಡ ಕೊಟ್ನೆಕಲ್, ಸಿರವಾರ ತಾಲೂಕಾಧ್ಯಕ್ಷ ಶಶಿಧರಗೌಡ ಹರವಿ, ಜಗದೀಶ ವಕೀಲ, ಸೇರಿದಂತೆ ಗ್ರಾಮ ಘಟಕಗಳ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣದ ವೀರಭದ್ರೇಶ್ವರ ರೈಸ್‌ಮಿಲ್ ಸಭಾಂಗಣದಲ್ಲಿ ಲಾಳಗೊಂಡ ಸಮಾಜದ ಮುಖಂಡರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಲಾಳಗೊಂಡ ಸಮಾಜದ ಜಿಲ್ಲಾಧ್ಯಕ್ಷ ಡಾ.ವೀರಭದ್ರಪ್ಪಗೌಡ ಆಲ್ದಾಳ್ ಅವರು, ರಾಯಚೂರು ಜಿಲ್ಲೆಯಾದ್ಯಂತ ಸಮಾಜದ ಸಂಘಟನೆ ಮತ್ತು ಸಮಾಜದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ ಲಾಳಗೊಂಡ ಸಮಾಜವನ್ನು ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮತ್ತು ಕಲುದೇವತೆ ನೀಲಮ್ಮ ತಾಯಿ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುವುದು ಕುರಿತಂತೆ ಇನ್ನಿತರ ಹಕ್ಕೋತ್ತಾಯಗಳ ಬಗ್ಗೆ ಸಮಾಜದ ಪರವಾಗಿ ನಿರಂತರವಾಗಿ ಶ್ರಮಿಸುವುದಾಗಿ ಹೇಳಿದರು.
ರಾಯಚೂರು ಜಿಲ್ಲಾ ಮಟ್ಟದ ಲಾಳಗೊಂಡ ಸಮಾಜದ ಸಮಾವೇಶ ಅತ್ಯಂತ ಯಶಸ್ವಿಯಾಗಲು ಸಂಸದರು, ಶಾಸಕರು, ಮಾಜಿಶಾಸಕರು, ಲಾಳಗೊಂಡ ಸಮಾಜದ ರಾಜ್ಯಾಧ್ಯಕ್ಷರು, ವಿವಿಧ ಸಮಾಜದ ಮುಖಂಡರು, ಜನಪ್ರತಿನಿಧಿಗಳು, ಸಮಾಜದ ಶಾಸಕರು, ಮುಖಂಡರು, ಮಹಿಳೆಯರು, ಯುವಕರು ಸೇರಿದಂತೆ ಜಿಲ್ಲಾ, ತಾಲೂಕ, ಗ್ರಾಮ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಪರಿಶ್ರಮವೇ ಪ್ರಮುಖ ಕಾರಣವಾಗಿದ್ದು, ಈ ಎಲ್ಲಾ ಮಹನೀಯರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಎಂದು ಡಾ.ವೀರಭದ್ರಪ್ಪಗೌಡ ಆಲ್ದಾಳ ತಿಳಿಸಿದರು.
ಈ ಅಭಿನಂದನಾ ಸಮಾರಂಭದಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಮಹಾಂತೇಶ ಪಾಟೀಲ್ ಅತ್ತನೂರು, ವೀರಭದ್ರಗೌಡ ಭೋಗಾವತಿ, ಮಾನ್ವಿ ತಾಲೂಕಾಧ್ಯಕ್ಷ ಮಹಾದೇವಪ್ಪಗೌಡ ಕೊಟ್ನೆಕಲ್, ಸಿರವಾರ ತಾಲೂಕಾಧ್ಯಕ್ಷ ಶಶಿಧರಗೌಡ ಹರವಿ, ಮುಖಂಡರಾದ ಜಗದೀಶ ವಕೀಲ, ನಾಗನೌಡ ಅತ್ತನೂರು, ಸಿದ್ದಲಿಂಗಪ್ಪ ವಕೀಲ, ಸಿದ್ದಪ್ಪಗೌಡ ಆಲ್ದಾಳ್, ಬಸನಗೌಎ ಆಲ್ದಾಳ್ ಸೇರಿದಂತೆ ಜಿಲ್ಲಾ ಮತತು ತಾಲೂಕಿನ ಪದಾಧಿಕಾರಿಗಳು, ಗ್ರಾಮ ಘಟಕಗಳ ಅಧ್ಯಕ್ಷರು, ಸದಸ್ಯರು, ಮುಖಂಡರು ಇದ್ದರು.