
ಮಾನ್ವಿ ಪೆ ೨೮ :- ಭಾನುವಾರ ನಡೆದ ಲಾಳಗೊಂಡ ಸಮಾಜದ ರಾಯಚೂರು ಜಿಲ್ಲಾ ಸಮಾವೇಶ ಯಶಸ್ವಿಯಾಗಲು ಜಿಲ್ಲೆಯ ಎಲ್ಲ ತಾಲೂಕಿನ,ಗ್ರಾಮ ಘಟಕದ ಮುಖಂಡರ, ಪ್ರಮುಖವಾಗಿ ಸಮಾಜದ ಏಕೈಕ ಶಾಸಕ ಡಾ ಶಿವರಾಜ ಪಾಟೀಲ ಹಾಗೂ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಗೌಡ ಆಲ್ದಾಳ್ ಇವರ ಸಹಕಾರವೇ ಕಾರಣದಿಂದ ಸಮಾವೇಶ ತುಂಬಾ ಯಶಸ್ವಿಯಾಗಲು ಕಾರಣವಾಯಿತು ಎಂದು ತಾಲೂಕ ಅಧ್ಯಕ್ಷ ಮಹಾದೇವ ಕಟಾಲಿ ಹೇಳಿದರು.
ಪಟ್ಟಣದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಸಿರವಾರ ಹಾಗೂ ಮಾನ್ವಿ ತಾಲೂಕಿನ ಲಾಳಗೊಂಡ ಸಮಾಜದ ಮುಖಂಡರ ನಿರಂತರ ಶ್ರಮದಿಂದಾಗಿ ಭಾನುವಾರ ನಡೆದ ಪ್ರಥಮ ಜಿಲ್ಲಾ ಮಟ್ಟದ ಲಾಳಗೊಂಡ ಸಮಾವೇಶಕ್ಕೆ ಪ್ರಮುಖವಾಗಿ ನಮ್ಮ ಧರ್ಮಗುರುಗಳಾದ ಶ್ರೀ ನಿಜಾನಂದ ಮಹಾಸ್ವಾಮಿಗಳು ಆಶಿರ್ವಾದ ಹಾಗೂ ಡಾ ಶಿವರಾಜ ಪಾಟೀಲ ಶಾಸಕರು ಸಹಾಯದಿಂದ, ವೀರಭದ್ರಪ್ಪ ಗೌಡ ಆಲ್ದಾಳ ಇವರ ಜೊತೆಗೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಮಹಿಳೆಯರು, ಯುವಕರು, ಮುಖಂಡರು ಸ್ವಯಂ ಪ್ರೇರಿತರಾಗಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೆ ಕಾರಣವಾಗಿದೆ ಹಾಗೂ ನಮ್ಮ ಬೇಡಿಕೆಯಾದ ಪ್ರತ್ಯೇಕ ಜಾತಿ ಪಟ್ಟಿಯಲ್ಲಿ ನಮ್ಮ ಲಾಳಗೊಂಡ ಸಮಾಜವನ್ನು ಸೇರ್ಪಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಮ್ಮ ಸಮಾಜದ ಶಕ್ತಿ ಪ್ರದರ್ಶನ ಮಾಡುವುದಕ್ಕೆ ತುಂಬಾ ಸಹಕಾರಿಯಾಗಿದೆ ಎಂದರು..
ನಂತರ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಆಲ್ದಾಳ ಮಾತಾನಾಡಿ ಇದಕ್ಕೆ ಸಹಕಾರ ಮಾಡಿದ ಪೋಲಿಸ್ ಇಲಾಖೆಗೆ, ಪುರಸಭೆ ಸ್ವಚ್ಚತಾ ಸಿಬ್ಬಂದಿಗಳಿಗೆ, ಪತ್ರಕರ್ತರಿಗೆ, ಕಾರ್ಯಕ್ರಮ ಸ್ಥಳ ನೀಡಿದ ಟಿ ಎ ಪಿ ಎಂ ಸಿ ಅಧ್ಯಕ್ಷ ಹಾಗೂ ಸಿಬ್ಬಂದಿಗಳಿಗೆ ಸೇರಿದಂತೆ ರಾಯಚೂರು ಜಿಲ್ಲಾ ಹಾಗೂ ತಾಲೂಕ,ಗ್ರಾಮ ಘಟಕದ ಪದಾಧಿಕಾರಿಗಳಿಗೆ ಅಭಿನಂದನೆಗಳು ಎಂದರು..
ಈ ಸಂಧರ್ಭದಲ್ಲಿ ಸಮಾಜದ ಮುಖಂಡರಾದ ಶಶಿಧಾರವಗೌಡ ಹರವಿ,ವೀರಭದ್ರಪ್ಪಗೌಡ,ನವೀನ್ ಕುಮಾರ್, ಅಮೇರಶ ಸಾಹುಕಾರ್, ಚನ್ನಬಸವಗೌಡ ಬೆಟ್ಟದೂರು, ಚನ್ನಬಸವಗೌಡ ಪಾಟೀಲ್, ಬಸವರಾಜಪ್ಪಗೌಡ, ಶಶಿಧರ್ ನೀರಮಾನವಿ.ಅಮರೇಶ ಪಾಟೀಲ್ ಪನ್ನೂರ,ಗುಂಡಪ್ಪ ಗೌಡ ಕಲ್ಲೂರು, ಬೆಟ್ಟಪ್ಪಗೌಡ, ಜಂಬನಗೌಡ, ಚಂದ್ರಶೇಖರ ಪಾಟೀಲ, ರಾಜಕುಮಾರ ಚಿಮ್ಲಪೂರು, ಅಳಪ್ಪಗೌಡ ಮಾಡಗಿರಿ, ಅಮರೇಶ ಗೌಡ, ಸಂತೋಷ ಮಾಡಗಿರಿ, ಮಲ್ಲಿಕಾರ್ಜುನ, ಮಹಾಂತೇಶಗೌಡ, ಲೋಕನಾಥ್ ಗೌಡ, ರಾಮನಗೌಡ ಜಾನೇಕಲ್ ಸೇರಿದಂತೆ ಅನೇಕರು ಇದ್ದರು.