ಲಾಳಗೊಂಡೇಶ್ವರ ಸಂಘದ ಪದಾಧಿಕಾರಿಗಳ ಆಯ್ಕೆ


ಸಿರುಗುಪ್ಪ, ಸೆ.6- ತಾಲೂಕಿನ ದೇವಲಾಪುರ ಗ್ರಾಮದ ಚಳ್ಳಗುರ್ಕಿ ಎರ್ರಿತಾತ ದೇವಸ್ಥಾನದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ತಾಲೂಕು ಲಾಳಗೊಂಡೇಶ್ವರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಜೆ.ಬಸವನಗೌಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪಂಪಾಪತಿ ಓತೂರು ಸೇರಿದಂತೆ ಇತರೆ ಪದಾಧಿಕಾರಿಗಳನ್ನು ಸಮುದಾಯದ ಹಿರಿಯ ಮುಖಂಡರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳಾಗಿ ಶಾಲಿಗನೂರು ವೀರನಗೌಡ (ಗೌರವಾಧ್ಯಕ್ಷ), ಜೆ.ಬಸವನಗೌಡ ಮುರಣಿ (ಅಧ್ಯಕ್ಷ), ಕುಬೇರಗೌಡ (ಉಪಾಧ್ಯಕ್ಷ), ಪಂಪಾಪತಿ ಓತೂರು. ಇಬ್ರಾಂಪುರ (ಪ್ರದಾನ ಕಾರ್ಯದರ್ಶಿ), ಶಶಿಧರಗೌಡ ಸಿರಿಗೇರಿ (ಸಹ ಕಾರ್ಯದರ್ಶಿ), ರವಿಕುಮಾರ್ (ಕೋಶಾಧ್ಯಕ್ಷ), ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಗುಂಡಿಗನೂರು ಪಂಪನಗೌಡ, ಶಾನವಾಸಪುರ ಆಶೋಕಗೌಡ, ಕರೂರು ವಿ.ಪಂಪಾಪತಿಗೌಡರನ್ನು ಆವಿರೋಧವಾಗಿ ಆಯ್ಕೆ ಮಾಡಲಾಯಿತು.
 ತಾಲೂಕಿನ ವಿವಿಧ ಗ್ರಾಮಗಳ ಸಮುದಾಯದ ಮುಖಂಡರು ಹಾಗೂ ಪದಾಧಿಕಾರಿಗಳು ಇದ್ದರು.