ಲಾಲ್ ಬಹದ್ದೂರ್ ಶಾಸ್ತ್ರಿ ಪುಣ್ಯಸ್ಮರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.11: ದೇಶ ಕಂಡ ಪ್ರಾಮಾಣಿಕ, ದಕ್ಷ, ಸರಳ ಹಾಗೂ ಸಜ್ಜನ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಸ್ತ್ರಿ ಅವರ 56ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶದ ರೈತರ ಹಾಗೂ ಸೈನಿಕರ ಬಗ್ಗೆ ಅಪಾರ ಗೌರವಹೊಂದಿದ್ದರು. ಆದ್ದರಿಂದ ಅವರು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ನೀಡಿ ದೇಶದ ಜನರಿಗೆ ಸ್ವಾಭಿಮಾನದ ಸಂದೇಶ ನೀಡಿದರು.
ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ನಯವಿನಯದಿಂದ ಇರಬೇಕು. ಆಗ ವಿದ್ಯೆ ತನ್ನಷ್ಟಕ್ಕೆ ತಾನೇ ತಾನಾಗಿ ಬರುತ್ತದೆ ಎಂದರು. ಜೊತೆಗೆ ಶಾಸ್ತ್ರಿ ಅವರ ಆದರ್ಶಗಳನ್ನು ನಾವು ನೀವೆಲ್ಲ ಮೈಗೂಡಿಸಿಕೊಂಡು ಬಾಳೋಣ ಎಂದರು.
ಪ್ರತಿಭಾವಂತ ಮಕ್ಕಳಾದ ಕುರುಬರ ದೇವರಾಜ, ಸುರೇಂದ್ರ, ಮಧುಸೂದನ, ಸ್ವಾಮಿ, ಆದಿ ಅಗಸರ ಹಾಗೂ ದಿವ್ಯ ಶ್ರೀ ಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ಮುನಾವರ ಸುಲ್ತಾನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರೆ ಚನ್ನಮ್ಮ ಪೂಜೆ ನೆರವೇರಿಸಿದರು. ಶಿಕ್ಷಕರಾದ ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ದಿಲ್ಷಾದ್ ಬೇಗಂ, ಮೋದಿನ್ ಸಾಬ್, ಸುಮತಿ, ವೈಶಾಲಿ, ಶ್ವೇತಾ, ಉಮ್ಮೆಹಾನಿ, ಶಶಮ್ಮ ಹಾಗೂ ರಾಮಾಂಜಿನೇಯ ಮುಂತಾದವರು ಉಪಸ್ಥಿತರಿದ್ದರು.