ಲಾರಿ ಹಿಂಬದಿ ಕಾರು ಡಿಕ್ಕಿ -ಇಬ್ಬರಿಗೆ ಗಾಯ

ಕೂಡ್ಲಿಗಿ.ಜ. 3:- ಹೊಸಪೇಟೆ ಕಡೆಗೆ ಹೊರಟಿದ್ದ ಲಾರಿಯ ಹಿಂಬದಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಹೈವೇ 50ರ ಹೊಸಹಳ್ಳಿ ಸಮೀಪದ ಚುಂಬನ ಡಾಬಾ ಸಮೀಪದಲ್ಲಿ ಇಂದು ಬೆಳಿಗ್ಗೆ 10-45ಗಂಟೆಗೆ ಜರುಗಿದೆ.
ಬೆಂಗಳೂರಿನಿಂದ ಕುಟುಂಬದ ಜೊತೆ ಬಿಜಾಪುರಕ್ಕೆ ಹೊರಟಿದ್ದ ಕಾರಿನಲ್ಲಿ ನಾಲ್ವರಿದ್ದು ಅಬ್ದುಲ್ ಅತಿಫ್ (45)ಮತ್ತು ಮಗಳು ರಿದ್ದಾ ಮರಿಯಮ್ (12)ಎಂಬಿಬ್ಬರಿಗೆ ಗಾಯಗಳಾಗಿದ್ದು ಆತನ ಪತ್ನಿ ಅಮ್ರಿನ್ ಹಾಗೂ ಇನ್ನೊಬ್ಬ ಮಗಳು ಪಾತಿಮಾ ಎಂಬಿಬ್ಬರಿಗೆ ಒಳಪೆಟ್ಟಾಗಿವೆ ಎಂದು ತಿಳಿದ್ದಿದ್ದು ಇವರುಗಳನ್ನು ತಕ್ಷಣ ಪೊಲೀಸ್ ಹೈವೇ ಪೆಟ್ರೋಲಿಂಗ್ ವಾಹನದಲ್ಲಿ ಹೊಸಹಳ್ಳಿ ಆಸ್ಪತ್ರಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದಿದೆ.