
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 22 : – ತಾಲೂಕಿನ ಕಾನಹೊಸಹಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ರ ಗಣೇಶ ಡಾಬಾ ಬಳಿ ನಿನ್ನೆ ಬೆಳಿಗ್ಗೆ ನಿಂತಿದ್ದ ಲಾರಿಯ ಹಿಂಬದಿಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 11ವರ್ಷದ ಬಾಲಕ ಮೃತಪಟ್ಟಿದ್ದು ಉಳಿದ ನಾಲ್ವರಿಗೆ ಗಾಯಗಳಾಗಿರುವ ಘಟನೆ ಜರುಗಿದೆ.
ಕೊಪ್ಪಳ ಮೂಲದ ಆಕಾಶ್(11)ಮೃತಪಟ್ಟ ಬಾಲಕನಾಗಿದ್ದಾನೆ , ಅಪಘಾತದಲ್ಲಿ ನಾಲ್ಕು ಮಂದಿಗೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಅಪಘಾತದ ನಂತರ ಗಂಭೀರ ಗಾಯಾಗಳಾಗಿದ್ದ ಬಾಲಕನನ್ನು ಹೊಸಹಳ್ಳಿಯಿಂದ ಜಗಳೂರಿನ ಅಸ್ಪತ್ರೆಗೆ ಕರೆದೊಯ್ಯವಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆಂದು ತಿಳಿದಿದೆ.
ಬಸ್ ಚಾಲಕನ ಅತಿವೇಗ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವೆಂದು ಮೃತ ಬಾಲಕನ ತಂದೆ ಮಾರುತೇಶ್ ನೀಡಿದ ದೂರಿನನ್ವಯ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
One attachment • Scanned by Gmail